ಉದಯವಾಹಿನಿ, ಜಗತ್ತಿನಲ್ಲಿ ಹೊಸ ಬದಲಾವಣೆಗಳು ಆಗುತ್ತಿದ್ದಂತೆ ಅದರ ಜೊತೆ ಜೊತೆಗೆ ವಂಚನೆ, ಮೋಸ ಮಾಡುವ ವಿಧಾನವು ಕೂಡ ಬದಲಾಗುತ್ತಿದೆ.. ಒಂಥರ ಅಪಹಾಸ್ಯ ಎನಿಸಬಹುದು, ಆದರೆ ನಿಜ. ಆದರೆ ಅದರಂತೆ ಮುಂದಾಲೋಚನೆ ದೃಷ್ಟಿಯಿಂದ ತಾಂತ್ರಿಕ ಅಭಿವೃದ್ಧಿಯು ಹೆಚ್ಚಾಗುತ್ತಿದೆ. ಅದೇ ರೀತಿ ಇದೀಗ ಯುರೋಪ್ ಪ್ರವಾಸಿಗರಿಗೆ ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ.
ಹೌದು, ಯುರೋಪ್ ಖಂಡವು ಇದೀಗ ಶೇಂಜಿನ್ ವಲಯಕ್ಕೆ ಬರುವ ಪ್ರವಾಸಿಗರಿಗೆ ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಅದೇ EES ವ್ಯವಸ್ಥೆ. ಎಂಟ್ರಿ ಹಾಗೂ ಎಕ್ಸಿಟ್ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಅಕ್ಟೋಬರ್ 12ರಿಂದ ಈ ವ್ಯವಸ್ಥೆ ಯುರೋಪ್ ನ ಎಲ್ಲಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಜಾರಿಯಾಗಿದೆ. ಏನು ಈ ವ್ಯವಸ್ಥೆ? ಇದು ಹೇಗೆ ಕಾರ್ಯನಿರ್ವಹಿಸುತ್ತೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಮಾನ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಯು ಡಿಜಿಟಲ್ ಮೂಲಕ ದಾಖಲಾಗಲಿದೆ. ಅಂದರೆ ನೀವು ಪ್ರವೇಶಿಸುವ ಹಾಗೂ ನಿರ್ಗಮಿಸುವುದೆಲ್ಲವೂ ಡಿಜಿಟಲೀಕರಣಗೊಳ್ಳಲಿದೆ. ಯುರೋಪ್ ನ ಶೇಂಜಿನ್ ವಲಯಕ್ಕೆ ಪ್ರವೇಶಿಸುವ ಎಲ್ಲಾ ಪ್ರವಾಸಿಗರು ಯಾವುದೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವೇಶಿಸಿದಾಗ ಈ ವ್ಯವಸ್ಥೆಯ ಮೂಲಕ ಅವರ ದಾಖಲೆಗಳು ಡಿಜಿಟಲೀಕರಣ ಗೊಳ್ಳುತ್ತವೆ. ಈ ಮೊದಲು ಯಾವುದೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರವೇಶಿಸಿದಾಗ ಅಲ್ಲಿನ ಅಧಿಕಾರಿಗಳು ಪಾಸ್ಪೋರ್ಟ್ ಸಂಗ್ರಹಿಸಿ, ಅದಕ್ಕೆ ಮುದ್ರೆ ಹಾಕುತ್ತಾರೆ. ಈ ಎಲ್ಲಾ ಹಂತಗಳು ಇನ್ನು ಮುಂದೆ ಡಿಜಿಟಲೀಕರಣಗೊಳ್ಳಲಿವೆ.

ವೈಯಕ್ತಿಕ ಡೇಟಾ, ಬಯೋಮೆಟ್ರಿಕ್ (ಬೆರಳಚ್ಚು ಹಾಗೂ ಫೇಸ್ ರಿಕಗ್ನಿಷನ್) ಹಾಗೂ ಪ್ರವೇಶ ಮತ್ತು ನಿರ್ಗಮನಗಳನ್ನು ಈ ವ್ಯವಸ್ಥೆಯು ದಾಖಲಿಸುತ್ತದೆ. ಒಂದು ಬಾರಿ ಶೇಂಜಿನ್ ವಲಯವನ್ನು ಪ್ರವೇಶಿಸಿದಾಗ ಎಲ್ಲಾ ಮಾಹಿತಿಗಳು ಸಂಗ್ರಹವಾದ ಬಳಿಕ, ಪ್ರತಿ ಬಾರಿ ಶೇಂಜಿನ್ ವಲಯದ ಯಾವುದೇ ವಿಮಾನ ನಿಲ್ದಾಣವನ್ನು ಪ್ರವೇಶಿಸಿದಾಗ ಪ್ರವೇಶ ಹಾಗೂ ನಿರ್ಗಮನವನ್ನು ಸ್ವಯಂ ಚಾಲಿತವಾಗಿ ಈ ವ್ಯವಸ್ಥೆ ದಾಖಲಿಸಿಕೊಳ್ಳುತ್ತದೆ.

Leave a Reply

Your email address will not be published. Required fields are marked *

error: Content is protected !!