ಉದಯವಾಹಿನಿ, ಆರೋಗ್ಯಕರ ಆಹಾರ ಸೇವಿಸುವುದರೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದು ಬಹಳ ಮುಖ್ಯ. ಸದ್ಗುರುಗಳಂತಹ ತಜ್ಞರು ಬೆಳಗ್ಗೆ ಆರೋಗ್ಯಕರ ಜ್ಯೂಸ್‌ಗಳನ್ನು ಕುಡಿಯುವುದರಿಂದ ಮಾನವ ದೇಹಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಉದಾಹರಣೆಗೆ, ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರುಗಳು ತಮ್ಮ ವೆಬ್‌ಸೈಟ್‌ನಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ, ಸದ್ಗುರುಗಳು ಎಳನೀರು ಮತ್ತು ದಾಳಿಂಬೆ ರಸವು ದೇಹಕ್ಕೆ ಹೇಗೆ ಪ್ರಯೋಜನಕಾರಿ ಮತ್ತು ಇವೆರೆಡರ ಸರಳವಾದ ಪಾಕವಿಧಾನ ಹೇಗೆ ಎಂದು ಹಂಚಿಕೊಂಡಿದ್ದಾರೆ. ಹಾಗಾದ್ರೆ ಈ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ.
ಳನೀರು ಮತ್ತು ದಾಳಿಂಬೆ ಜ್ಯೂಸ್ ತಯಾರಿಸುವುದು ಹೇಗೆ ಮತ್ತು ಬೇಕಾಗುವ ಪದಾರ್ಥಗಳು: 1 ಎಳೆಯ ಮತ್ತು ಬೋಳು ತೆಂಗಿನಕಾಯಿ, ಒಂದು ಹಿಡಿ ದಾಳಿಂಬೆ ಬೀಜಗಳು, ಸಕ್ಕರೆ ಅಥವಾ ಬೆಲ್ಲ. ಪಾಕವಿಧಾನ: ದಾಳಿಂಬೆ ಬೀಜಗಳನ್ನು ಬ್ಲೆಂಡರ್‌ನಲ್ಲಿ ಪೇಸ್ಟ್ ಮಾಡಿ. ನಂತರ ಎಳ ನೀರನ್ನು ಸೇರಿಸಿ. ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಸೇರಿಸಿ. ನಂತರ ಎಲ್ಲವನ್ನೂ ಒಂದು ಜಾರ್‌ನಲ್ಲಿ ಚೆನ್ನಾಗಿ ರುಬ್ಬಿ, ಕೊನೆಗೆ, ಸೋಸಿ, ಕೆಲವು ಐಸ್ ಕ್ಯೂಬ್‌ಗಳನ್ನು ಸೇರಿಸಿ ತಣ್ಣಗಾದ ನಂತರ ಕುಡಿಯಿರಿ.
ಎಳ ನೀರಿನ ಪ್ರಯೋಜನಗಳು: ಸದ್ಗುರುಗಳ ಪ್ರಕಾರ, ಎಳ ನೀರು ಮತ್ತು ತೆಂಗಿನ ಎಣ್ಣೆ ದೇಹಕ್ಕೆ ಅಗತ್ಯವಿರುವ ಪೊಟ್ಯಾಸಿಯಮ್, ಇತರ ಎಲೆಕ್ಟ್ರೋಲೈಟ್‌ಗಳು ಮತ್ತು ನೀರಿನಾಂಶವನ್ನು ತುಂಬಲು ಸಹಾಯ ಮಾಡುವ ನೈಸರ್ಗಿಕ ಪರಿಹಾರಗಳಾಗಿವೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ನ್ಯಾಚುರಲ್ ಎನರ್ಜಿಟಿಕ್ ಡ್ರಿಂಕ್ ಆಗಿದೆ. ಆಯುರ್ವೇದದ ಪ್ರಕಾರ, ಎಳ ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮೂತ್ರನಾಳವನ್ನು ಶುದ್ಧಗೊಳಿಸುತ್ತದೆ. ಹೀಗಾಗಿ, ಇದನ್ನು ಕಿಡ್ನಿ ಸ್ಟೋನ್ ಮತ್ತು ಕರುಳಿನ ಸಮಸ್ಯೆಗಳಿರುವವರು ಚಿಕಿತ್ಸೆಯಾಗಿ ಬಳಸಬಹುದು. ಇದು ಚರ್ಮದ ದದ್ದುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಶಾಖದಿಂದ ಉಂಟಾಗುವ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಇದು ಪೊಟ್ಯಾಸಿಯಮ್, ಸೋಡಿಯಂ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಅಗತ್ಯ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ, ಇದು ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯ ಮಧ್ಯಮ ಸೇವನೆಯು ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಒಟ್ಟಾರೆ ಹೃದಯ ಮತ್ತು ಚಯಾಪಚಯ ಆರೋಗ್ಯವನ್ನು ಸುಧಾರಿಸುತ್ತದೆ.

Leave a Reply

Your email address will not be published. Required fields are marked *

error: Content is protected !!