ಉದಯವಾಹಿನಿ, ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್‌ ದೇಶದ ಪ್ರತಿಷ್ಠಿತ ನಗರ ಅಬುಧಾಬಿ(Abu Dhabi)ಯಲ್ಲಿ ವಾಸಿಸುತ್ತಿರುವ 29 ವರ್ಷದ ಭಾರತೀಯ ಮೂಲದ ಯುವಕ ಅನಿಲ್ ಕುಮಾರ್ ಬೊಳ್ಳಾ ಲಾಟರಿಯಲ್ಲಿ 100 ಮಿಲಿಯನ್ ದಿನಾರ್ (240 ಕೋಟಿ ರೂ.) ಗೆದ್ದಿದ್ದು, ಇದು ಯುಎಇಯ ಇತಿಹಾಸದಲ್ಲೇ ಅತಿದೊಡ್ಡ ಲಾಟರಿ ಬಹುಮಾನವಾಗಿದೆ. ಅನಿಲ್ ಅವರು 12 ಟಿಕೆಟ್‌ಗಳನ್ನು ಒಂದೇ ಬಾರಿ ಖರೀದಿಸಿದ್ದು, ಅದರಲ್ಲಿ ಒಂದು ಸಂಖ್ಯೆ ’11’ ಅವರ ತಾಯಿಯ ಜನ್ಮದಿನವನ್ನು ಸೂಚಿಸುತ್ತದೆ. ಇದೇ ಸಂಖ್ಯೆ ಅವರ ಅದೃಷ್ಟ ಬದಲಿಸಿದೆ. ಈ ಜಯದೊಂದಿಗೆ ಅವರು ಯುಎಇ ಲಾಟರಿ ಇತಿಹಾಸದ ಮೊದಲ 100 ಮಿಲಿಯನ್ ದಿನಾರ್ ವಿಜೇತರಾಗಿದ್ದಾರೆ.

“ನಾನು ಯಾವುದೇ ಮ್ಯಾಜಿಕ್ ಮಾಡಲಿಲ್ಲ, ಕೇವಲ ‘ಈಸಿ ಪಿಕ್’ ಅನ್ನು ಆಯ್ಕೆ ಮಾಡಿಕೊಂಡೆ. ನಾನು 12 ಟಿಕೆಟ್‌ಗಳನ್ನು ಖರೀದಿಸಿದ್ದೆ. ಅದರಲ್ಲಿ ಲಾಟರಿ ಕೊನೆಯ ಸಂಖ್ಯೆ ತುಂಬಾ ವಿಶೇಷವಾಗಿದೆ. ಇದು ನನ್ನ ಅಮ್ಮನ ಹುಟ್ಟುಹಬ್ಬದ ದಿನ… ಅದೇ ನನಗೆ ಅದೃಷ್ಟ ತಂದುಕೊಟ್ಟಿತು,” ಎಂದು ಅನಿಲ್ ಕುಮಾರ್ ಬೊಳ್ಳಾ ಸಂತಸ ವ್ಯಕ್ತಪಡಿಸಿದ್ದಾರೆ. “ನಾನು ಸೋಫಾದ ಮೇಲೆ ಕುಳಿತಿದ್ದೆ… ಲಾಟರಿ ರಿಸಲ್ಟ್ ನೋಡಿ ದಂಗಾಗಿ ಹೋದೆ.! ಎಂದು ಅವರು ಹೇಳಿದ್ದಾರೆ. ಈಸಿ ಪಿಕ್ ಎಂದರೆ, ಲಾಟರಿ ಟಿಕೆಟ್‌ನಲ್ಲಿ ಸಂಖ್ಯೆಗಳನ್ನು ನಾವೇ ಆಯ್ಕೆ ಮಾಡದೆ, ಯಂತ್ರದಿಂದ ಸ್ವಯಂಚಾಲಿತವಾಗಿ ಆಯ್ಕೆಯಾಗುವ ವಿಧಾನ.

ಅನಿಲ್ ಬೊಲ್ಲಾ ತಮ್ಮ ಗೆಲುವನ್ನು ಜವಾಬ್ದಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಮೊತ್ತವನ್ನು ಹೇಗೆ ಹೂಡಿಕೆ ಮಾಡಬೇಕು ಎಂದು ಯೋಚಿಸುತ್ತಿದ್ದೇನೆ. ನಾನು ದೊಡ್ಡದಾಗಿ ಏನಾದರೂ ಮಾಡಬೇಕೆಂಬ ಕನಸು ಇದೆ,” ಎಂದು ಅನಿಲ್ ಹೇಳಿದರು. ಅವರು ತಮ್ಮ ತಂದೆ-ತಾಯಿಯನ್ನು ಯುಎಇಗೆ ಕರೆತಂದು, ಸೂಪರ್‌ಕಾರ್ ಖರೀದಿಸಿ, 7-ಸ್ಟಾರ್ ರೆಸಾರ್ಟ್‌ನಲ್ಲಿ ಈ ಗೆಲುವಿನ ಸಂಭ್ರಮಾಚರಣೆ ಮಾಡಬೇಕೆಂದು ಪ್ಲಾನ್ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೇ “ನನ್ನ ತಾಯಿ-ತಂದೆಯರ ಕನಸುಗಳು ಚಿಕ್ಕದಾಗಿವೆ; ನಾನು ಅವುಗಳನ್ನು ಈಡೇರಿಸಲು ಬಯಸುತ್ತೇನೆ,” ಎಂದು ಅನಿಲ್ ತಿಳಿಸಿದರು.

 

Leave a Reply

Your email address will not be published. Required fields are marked *

error: Content is protected !!