ಉದಯವಾಹಿನಿ, ಪಾಟ್ನಾ: ಮಹಾಘಟಬಂಧನ್ ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಮತದಾನ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಆರ್ ಜೆ ಡಿ ಆರೋಪಿ ಆರೋಪಿಸಿದೆ. ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಈ ಆರೋಪವನ್ನು ಹೊರಿಸಿದೆ. ಈ ಕುರಿತು X ನಲ್ಲಿ ಆರ್‌ಜೆಡಿ ಪೋಸ್ಟ್ ಮಾಡಿದ್ದು, “ಮತದಾನ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಕೆಲವು ಪ್ರಬಲ ಮತಗಟ್ಟೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಚುನಾವಣಾ ಆಯೋಗವು ಈ ದುರುದ್ದೇಶಪೂರಿತ ಕ್ರಮಗಳನ್ನು ತಕ್ಷಣ ಗಮನಿಸಿ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದೆ. ಆದರೆ, ಭಾರತದ ಚುನಾವಣಾ ಆಯೋಗವು ಈ ಆರೋಪವನ್ನು ತಿರಸ್ಕರಿಸಿದೆ.

Leave a Reply

Your email address will not be published. Required fields are marked *

error: Content is protected !!