ಉದಯವಾಹಿನಿ, ನವದೆಹಲಿ: ಇತ್ತೀಚಿನ ದಿನದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಫೇಮಸ್ ಆಗಬೇಕು ಎಂಬ ಕಾರಣಕ್ಕೆ ಅನೇಕರು ಯೂಟ್ಯೂಬ್ ಛಾನೆಲ್ ಮಾಡಿ ವಿಡಿಯೊ ಹಂಚಿಕೊಳ್ಳುತ್ತಾರೆ. ಇದರಲ್ಲಿ ಕೆಲವರು ವಿಡಿಯೊ ಮೂಲಕ ತಮ್ಮ ಟ್ಯಾಲೆಂಟ್‌ ಅನ್ನು ತೋರ್ಪಡಿಸಿದರೆ ಇನ್ನು ಕೆಲವೊಂದು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರೂಪಿಸಲಾಗುತ್ತದೆ. ಅದೇ ರೀತಿ ಜಗಳ , ಮನಸ್ಥಾಪ , ಸ್ಪಷ್ಟನೆ ನೀಡುವ , ಟ್ರೋಲ್ ಮಾಡುವ ವಿಡಿಯೋಗಳು ಕೂಡ ಆಗಾಗ ಹೈಲೈಟ್ ಆಗುತ್ತಿರುತ್ತದೆ‌‌. ಅಂತೆಯೇ ಈ ಬಾರಿ ಯೂಟ್ಯೂಬ್‌ ಬ್ಲಾಗರ್‌ಗಳಾದ ಮೆಹಕ್ ಮತ್ತು ಪಾರಿ ಅವರು ಆಟೋರಿಕ್ಷಾ ಚಾಲಕನೊಂದಿಗೆ ಜಗಳವಾಡಿದ್ದ ಘಟನೆ ದೆಹಲಿ ಮೊರಾದಾಬಾದ್‌ ನಲ್ಲಿ ನಡೆದಿದೆ. ಇಬ್ಬರು ಸೇರಿಕೊಂಡು ಆಟೋ ಚಾಲಕನಿಗೆ ಬೈಯುತ್ತಿದ್ದು ಆತನು ಕೂಡ ಇಬ್ಬರ ಬಳಿ ವಾಗ್ವಾದ ಮಾಡಿದ್ದ ದೃಶ್ಯಗಳು ಸದ್ಯ ಸೋಶಿಯಲ್ ‌ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ ಯೂಟ್ಯೂಬರ್ ಗಳಾದ ಮೆಹಕ್ ಮತ್ತು ಪಾರಿ ಆಟೋರಿಕ್ಷಾ ಚಾಲಕನೊಂದಿಗೆ ಜಗಳವಾಡಿದ್ದ ದೃಶ್ಯಗಳು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲಾಗಿದೆ‌. 36 ಸೆಕೆಂಡು ಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಇವರಿಬ್ಬರು ಮತ್ತು ಚಾಲಕ ಪರಸ್ಪರ ಹೊಡೆದಾಡಿ ಕೊಂಡು ನಿಂದಿಸುತ್ತಿರುವುದನ್ನು ಕಾಣಬಹುದು. ಇದನ್ನು ನೋಡುತ್ತಿದ್ದ ಅಪರಿಚಿತ ವ್ಯಕ್ತಿ ಯೊಬ್ಬರು ಈ ಘಟನೆಯನ್ನು ರೆಕಾರ್ಡ್ ಮಾಡಿದ್ದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಇವರಿಬ್ಬರು ಮತ್ತು ಆಟೋ ಚಾಲಕನ ನಡುವೆ ಮೊದಲು ಮಾತಿನ ಚಕಮಕಿ ಏರ್ಪಟ್ಟಿತ್ತು. ಬಳಿಕ ಇದ್ದಕ್ಕಿದ್ದಂತೆ ದೈಹಿಕ ಹಲ್ಲೆ ಮಾಡುವ ಜೊತೆಗೆ ಪರಸ್ಪರ ನಿಂದಿಸಲು ಆರಂಭ ಮಾಡಿದ್ದಾರೆ. ರಸ್ತೆ ಮಧ್ಯ ಈ ಜಗಳವಾದ ಕಾರಣ ಸಂಚಾರದಟ್ಟಣೆ ಉಂಟಾಗು ವಂತಾಯಿತು. ಈ ದೃಶ್ಯಗಳನ್ನು ಅನೇಕರು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರೆ ಇನ್ನು ಕೆಲವರು ಜಗಳವನ್ನು ನೋಡಿ ತಮ್ಮಷ್ಟಕ್ಕೆ ಸುಮ್ಮನಾಗಿದ್ದಾರೆ. ಅನಂತರ ಕೆಲವು ಜನರು ಅವರ ಜಗಳದ ನಡುವೆ ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿ ಅಲ್ಲಿಂದ ಕಳಿಸಿದ್ದಾರೆ. ಆದರೆ ಈ ವಾಗ್ವಾದಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈರಲ್ ಆಗಿರುವ ಘಟನೆಯ ಬಗ್ಗೆ ಪೊಲೀಸರು ಕೂಡ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave a Reply

Your email address will not be published. Required fields are marked *

error: Content is protected !!