ಉದಯವಾಹಿನಿ, ಮುಂಬಯಿ: 2026ರ ಮಹಿಳಾ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ಹರಾಜಿಗೂ(WPL 2026) ಮುನ್ನ ಆಟಗಾರ್ತಿಯರ ರಿಟೇನ್ಷನ್‌ ಪಟ್ಟಿ ಪ್ರಕಟಗೊಂಡಿದೆ. ಎಲ್ಲ ಐದು ಫ್ರಾಂಚೈಸಿಗಳು ಗುರುವಾರ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿದೆ. ಅಚ್ಚರಿ ಎಂಬಂತೆ ವಿಶ್ವಕಪ್‌ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ ಆಲ್‌ರೌಂಡರ್‌ ದೀಪ್ತಿ ಶರ್ಮ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಏಕದಿನ ವಿಶ್ವಕಪ್‌ ಗೆದ್ದರೂ ನಾಯಕಿ ಹರ್ಮನ್‌ಪ್ರೀತ್‌ಗಿಂತ ಹೆಚ್ಚಿನ ಬೆಲೆಗೆ ನ್ಯಾಟ್-ಸ್ಕಿವರ್ ಬ್ರಂಟ್ ಅವರನ್ನು ಮುಂಬೈ ಉಳಿಸಿಕೊಂಡಿದೆ.
ನಿಯಮಗಳ ಪ್ರಕಾರ ಇಬ್ಬರು ವಿದೇಶಿ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿತ್ತು ಹೀಗಾಗಿ ಗುಜರಾತ್‌ ಜೈಂಟ್ಸ್ ತಂಡವು ಆಸ್ಟ್ರೇಲಿಯಾದ ಜೋಡಿ ಬೆತ್ ಮೂನಿ ಮತ್ತು ಆಶ್ಲೀ ಗಾರ್ಡ್ನರ್ ಅವರನ್ನು ಆಯ್ಕೆ ಮಾಡಿ ವೋಲ್ವಾರ್ಡ್ ಅವರನ್ನು ಕೈಬಿಟಿತು. ವೋಲ್ವಾರ್ಡ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ಆಟಗಾರ್ತಿಯಾಗಿದ್ದರು. ಹರಾಜಿನಲ್ಲಿ ಅವರು ದೊಡ್ಡ ಮೊತ್ತ ಪಡೆಯುವ ನಿರೀಕ್ಷೆಯಿದೆ.
ಭಾರತದ ಪ್ರಮುಖ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಸ್‌ ಉಳಿಸಿಕೊಳ್ಳದ್ದು ಅಚ್ಚರಿಗೆ ಕಾರಣವಾಗಿದೆ. ವಿಶ್ವಕಪ್ ವಿಜೇತ ಆಟಗಾರ್ತಿ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಶಫಾಲಿ ವರ್ಮಾ, ರಿಚಾ ಘೋಷ್ ಮತ್ತು ಜೆಮಿಮಾ ರೊಡ್ರಿಗಸ್‌ರಂತಹ ಇತರ ಭಾರತೀಯ ತಾರೆಗಳನ್ನು ಆಯಾ ತಂಡಗಳು ಉಳಿಸಿಕೊಂಡಿವೆ.

ಗಾಯದಿಂದಾಗಿ ಕಳೆದ ಆವೃತ್ತಿಯಿಂದ ಹೊರಗುಳಿದಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್‌ ಆರ್‌ಸಿಬಿ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಅವರನ್ನು 60 ಲಕ್ಷ ರೂ.ಗೆ ರೀಟೇನ್‌ ಮಾಡಿಕೊಳ್ಳಲಾಗಿದೆ. ವಿದೇಶಿ ಆಟಗಾರ್ತಿಯಾಗಿ ಎಲ್ಲಿಸ್‌ ಪೆರ್ರಿ ಅವರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ರೇಣುಕಾ ಸಿಂಗ್‌ ಠಾಕೂರ್‌ರನ್ನು ಕೈಬಿಡಲಾಗಿದೆ. ಮೊದಲ ಆಯ್ಕೆಯ ಆಟಗಾರ್ತಿಯಾಗಿ ಸ್ಮೃತಿ ಮಂಧಾನ, ಎರಡನೇ ಆಟಗಾರ್ತಿಯಾಗಿ ರಿಚಾ ಘೋಷ್‌ ಅವರನ್ನು ರಿಟೇನ್‌ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!