ಉದಯವಾಹಿನಿ, ಬೀಟ್ರೂಟ್ ಹಾಗೂ ದಾಳಿಂಬೆ ಹಣ್ಣು ಎರಡೂ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಬೀಟ್ರೂಟ್​ನಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್ ಹಾಗೂ ಫೋಲೇಟ್ ಸೇರಿದಂತೆ ಜೀವಸತ್ವಗಳು ಹಾಗೂ ಖನಿಜಗಳಿಂದ ಒಳಗೊಂಡಿವೆ. ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವ ನಿಂಬೆ ರಸವನ್ನು ಸ್ವಲ್ಪ ಸೇರಿಸಿದರೆ ಮತ್ತಷ್ಟು ಪೋಷಕಾಂಶಗಳು ಲಭಿಸುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕೆಲವು ಜನರಿಗೆ ದಾಳಿಂಬೆ ಇಷ್ಟವಾದರೆ, ಮತ್ತೆ ಕೆಲವರಿಗೆ ಬೀಟ್ರೂಟ್ ಸೇವಿಸಲು ಬಯಸುತ್ತಾರೆ. ಬೀಟ್ರೂಟ್ ಹಾಗೂ ದಾಳಿಂಬೆ ಹಣ್ಣು ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯದ ಪ್ರಯೋಜನಗಳನ್ನು ಹೊಂದಿದೆ ಎಂಬುದರ ಬಗ್ಗೆ ಆರೋಗ್ಯ ತಜ್ಞರು ತಿಳಿಸುವ ಸಲಹೆಗಳು ಇಲ್ಲಿವೆ.
ಬೀಟ್ರೂಟ್​ ಅನ್ನು ಕಚ್ಚಾ, ಬೇಯಿಸಿದ ಅಥವಾ ಹುರಿದು ಇಲ್ಲವೇ ಜ್ಯೂಸ್​ ಮೂಲಕ ಸೇವಿಸಬಹುದು. ಬೀಟ್ರೂಟ್ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ನೈಸರ್ಗಿಕ ನೈಟ್ರೇಟ್‌ಗಳನ್ನು ಹೊಂದಿದೆ.
ರಕ್ತದ ಹರಿವು ಹಾಗೂ ಸ್ನಾಯುಗಳಿಗೆ ಆಮ್ಲಜನಕ ತಲುಪಿಸಲು ಸಹಾಯ ಮಾಡುತ್ತದೆ. ದೈಹಿಕ ಚಟುವಟಿಕೆಗಳ ಸಮಯದಲ್ಲಿ ತ್ರಾಣ ವೃದ್ಧಿಸುತ್ತದೆ.
ಬೀಟ್‌ರೂಟ್ ಜ್ಯೂಸ್‌ ಮಾಡಿ ಸೇವಿಸಿದರೆ, ದೇಹವನ್ನು ನಿರ್ವಿಶೀಕರಣಗೊಳಿಸುತ್ತದೆ. ಯಕೃತ್ತನ್ನು ಶುದ್ಧೀಕರಿಸಲು ಹಾಗೂ ದೇಹದಿಂದ ವಿಷವನ್ನು ಹೊರಹಾಕಲು ಸಾಧ್ಯವಾಗುತ್ತದೆ.
ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ಶಮನ ಸಂಯುಕ್ತಗಳು ಇರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ಉತ್ತೇಜನ
ಬೀಟ್‌ರೂಟ್ ಉತ್ತೇಜನ ನೀಡುತ್ತದೆ.
ಬೀಟ್‌ರೂಟ್ ಹೆಚ್ಚಿನ ನೈಟ್ರೇಟ್ ಅಂಶದಿಂದಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಉತ್ತಮ ಹೃದಯರಕ್ತನಾಳದ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.
ಬೀಟ್‌ರೂಟ್ ಜ್ಯೂಸ್‌ನೊಳಗೆ ನಿಂಬೆ ರಸ ಸೇರಿಸಿದರೆ ಲಭಿಸುವ ಪ್ರಯೋಜನ ಎಂದರೆ ಉತ್ತಮ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಬೀಟ್‌ರೂಟ್​ನಲ್ಲಿ ಆಹಾರದ ನಾರಿನ ಉತ್ತಮ ಮೂಲವಾಗಿದ್ದು, ನಿಯಮಿತ ಕರುಳಿನ ಚಲನೆಗೆ ಸಹಾಯವಾಗಿದೆ, ಮಲಬದ್ಧತೆಯನ್ನು ತಡೆಯಲು ಪರಿಣಾಮಕಾರಿಯಾಗಿದೆ.

 

Leave a Reply

Your email address will not be published. Required fields are marked *

error: Content is protected !!