ಉದಯವಾಹಿನಿ, ಬೆಂಗಳೂರಿನಿಂದ ಕುಟುಂಬಸ್ಥರೊಂದಿಗೆ ಧರ್ಮಸ್ಥಳಕ್ಕೆ ತೆರಳುವ ಮಾರ್ಗ ಮಧ್ಯೆ ದೇವಾಲಯಗಳಿಗೆ ಭೇಟಿ ನೀಡಿದ್ದರು. ನೆಲದ ಮೇಲೆ ಕುಳಿತು ಸಂಕಲ್ಪ, ಅರ್ಚನೆ ಮಾಡಿಸಿದರು. ಸುಧಾಮೂರ್ತಿ ಅವರಿಗೆ ಮಹಿಳೆಯರು ಬಾಗಿನ ನೀಡಿದರು. ಪೂಜೆ ಬಳಿಕ ಧರ್ಮಸ್ಥಳಕ್ಕೆ ತೆರಳಿದರು. ಇದೇ ವೇಳೆ ಸುಧಾಮೂರ್ತಿಯವರಿಗೆ ಶಾಸಕ ಸಿಮೆಂಟ್‍ಮಂಜು ಅವರು ಭಗವದ್ಗೀತೆ ನೀಡಿ ಗೌರವಿಸಿದರು. ಬಳಿಕ ಸಿಎಸ್‍ಆರ್ ಫಂಡ್ ಅಥವಾ ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಸಕಲೇಶಪುರ ಒಳಾಂಗಣ ಕ್ರೀಡಾಂಗಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.
