ಉದಯವಾಹಿನಿ, ಛತ್ತೀಸ್‌ಗಢ: ಕಳೆದ ಕೆಲವು ದಿನಗಳ ಹಿಂದಷ್ಟೇ ಶಾಲೆಯ ಶಿಕ್ಷಕರೊಬ್ಬರು ಮಕ್ಕಳಿಗೆ ತಪ್ಪಾಗಿ ‘ಎಬಿಸಿಡಿ’ ಹೇಳಿಕೊಟ್ಟಿರುವ ವಿಡಿಯೊ ವೈರಲ್ ಆಗಿತ್ತು. ಈ ದೃಶ್ಯ ಹಲವರ ನಗುವಿಗೆ ಕಾರಣ ವಾಗಿದ್ದು ಕೆಲವರು ಹಾಸ್ಯವಾಗಿ ಪರಿಗಣಿಸಿದರೆ, ಇನ್ನೂ ಕೆಲವರು ಮಕ್ಕಳ ಭವಿಷ್ಯದ ಬಗ್ಗೆ ಪ್ರಶ್ನೆ ಮಾಡಿದ್ದರು. ಇದೀಗ ಮತ್ತೊಮ್ಮೆ ಇಂತಹುದೇ ಘಟನೆಯೊಂದು ನಡೆದಿದ್ದು ಛತ್ತೀಸ್‌ಗಢದ ಬಲ ರಾಮಪುರ ಜಿಲ್ಲೆಯಲ್ಲಿ ಸಹಾಯಕ ಶಿಕ್ಷಕ ಮಕ್ಕಳಿಗೆ ಇಂಗ್ಲಿಷ್‌ ಪದಗಳನ್ನು ತಪ್ಪಾಗಿ ಕಲಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಈ ವಿಚಾರ ಶಿಕ್ಷಣ ಅಧಿಕಾರಿಗೆ ತಲುಪಿದ ನಂತರ ಶಿಕ್ಷಕನನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಈ ಘಟನೆ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಅರ್ಹತೆ ಮತ್ತು ತರಬೇತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಛತ್ತೀಸ್‌ಗಢದ ಬಲರಾಂಪುರ ಜಿಲ್ಲೆಯಲ್ಲಿನ ಮಚಂದಂಡ್ ಕೊಗ್ವಾರ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಸಹಾಯಕ ಶಿಕ್ಷಕ ಪ್ರವೀಣ್ ಟೊಪ್ಪೊ ಅವರು ವಿದ್ಯಾರ್ಥಿಗಳಿಗೆ ತಪ್ಪಾದ ಇಂಗ್ಲಿಷ್ ಕಾಗುಣಿತಗಳನ್ನು ಹೇಳಿಕೊಟ್ಟಿದ್ದಾರೆ. ವಿಡಿಯೋದಲ್ಲಿ, ಅವರು ಮೂಗಿನ ‘ನೋಸ್’ ಎಂಬ ಪದಕ್ಕೆ “ನೋಗೆ” “ಇಯರ್” ಪದಕ್ಕೆ ‘ಇಯೆರ್’ ಮತ್ತು “ಐ” ಪದಕ್ಕೆ “ಐಯ್” ನಂತಹ ಕಾಗುಣಿತಗಳನ್ನು ಬರೆದು ಕಲಿಸುತ್ತಿರುವ ದೃಶ್ಯ ಕಂಡುಬಂದಿದೆ. ಅಲ್ಲದೆ, ಅವರಿಗೆ ವಾರದ ದಿನಗಳು ಮತ್ತು ಕುಟುಂಬದ ಸದಸ್ಯರ ಹೆಸರುಗಳನ್ನು ಬರೆಯಲು ಕೂಡ ತಿಳಿದಿರಲಿಲ್ಲ ಎಂದು ವರದಿ ಯಾಗಿದೆ.
ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದಿದೆ. ಇದನ್ನು ಜಲ್ಲಾ ಶಿಕ್ಷಣಾಧಿಕಾರಿ ಎಂ.ಆರ್. ಯಾದವ್ ಅವರು ತಕ್ಷಣವೇ ಘಟನೆಯ ಬಗ್ಗೆ ತನಿಖೆ ಮಾಡಲು ಆದೇಶಿಸಿದರು. ತದನಂತರ, ಶಾಲೆಯ ಸಮೂಹ ಸಂಯೋಜಕರು ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಶಿಕ್ಷಕರು ತಪ್ಪು ಮಾಹಿತಿಯನ್ನು ಬೋಧಿಸುತ್ತಿರುವುದು ದೃಢ ಪಟ್ಟಿದೆ.

Leave a Reply

Your email address will not be published. Required fields are marked *

error: Content is protected !!