ಉದಯವಾಹಿನಿ, ಹಲವು ಪ್ರಕಾರದ ಪೌಷ್ಟಿಕಾಂಶಗಳನ್ನು ಹೊಂದಿರುವ ಮೊಟ್ಟೆಗಳನ್ನು ಸೂಪರ್‌ಫುಡ್ ಎಂದು ಹೇಳಲಾಗುತ್ತದೆ. ಹಲವು ವಿಟಮಿನ್‌ಗಳು, ಪ್ರೋಟೀನ್ ಹಾಗೂ ಅನೇಕ ಖನಿಜಗಳು ಇವುಗಳಲ್ಲಿ ಸಮೃದ್ಧವಾಗಿವೆ. ಹಲವು ಜನರು ತಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಲು ಪ್ರತಿದಿನ ಮೊಟ್ಟೆಗಳನ್ನು ಸೇವಿಸುತ್ತಾರೆ.
ಹಲವು ಬಾರಿ ನಾವು ಮೊಟ್ಟೆಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದಾಗ ಒಂದು ವಿಷಯವು ಹೆಚ್ಚಾಗಿ ಮನಸ್ಸಿಗೆ ಬರುತ್ತದೆ. ಕಂದು ಮೊಟ್ಟೆ ಅಥವಾ ಬಿಳಿ ಮೊಟ್ಟೆ ಇದರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಅನ್ನೋ ಪ್ರಶ್ನೆ ಎದುರಾಗುತ್ತದೆ. ಸಾಮಾನ್ಯವಾಗಿ ಕಂದು ಮೊಟ್ಟೆಗಳಿಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಹೆಚ್ಚಿನ ಬೆಲೆ ಇರುತ್ತದೆ. ಜನರು ಅವುಗಳನ್ನು ಆರೋಗ್ಯಕರವೆಂದು ತಾವು ಪರಿಗಣಿಸುತ್ತಾರೆ. ಬ್ರಾನ್ ಎಗ್ ನಿಜವಾಗಿಯೂ ಆರೋಗ್ಯಕ್ಕೆ ಉತ್ತಮವೇ ಎಂಬುದರ ಬಗ್ಗೆ ತಜ್ಞರಿಂದ ಅರಿತುಕೊಳ್ಳೋಣ.

ತಜ್ಞರು ಹೇಳಿವುದೇನು? ಆಯುರ್ವೇದ ವೈದ್ಯ ಸಲೀಂ ಜೈದಿ ಅವರು ತಿಳಿಸುವ ಪ್ರಕಾರ, ಮೊಟ್ಟೆಯ ಬಣ್ಣವು ಅದರ ಪೌಷ್ಟಿಕಾಂಶದ ಮೌಲ್ಯವನ್ನು ನಿರ್ಧರಿಸುವುದಿಲ್ಲ. ಕಂದು ಇಲ್ಲವೇ ಬಿಳಿ ಮೊಟ್ಟೆಯಾಗಿರಲಿ, ಪೌಷ್ಟಿಕಾಂಶದ ಅಂಶವು ಬಹುತೇಕ ಒಂದೇ ಆಗಿರುತ್ತದೆ. ಬಿಳಿ ಹಾಗೂ ಕಂದು ಎರಡೂ ಮೊಟ್ಟೆಗಳು ಸುಮಾರು 6.3 ರಿಂದ 6.5 ಗ್ರಾಂ ಪ್ರೋಟೀನ್ ಹೊಂದಿರುತ್ತವೆ. ಇವೆರಡು ಮೊಟ್ಟೆಗಳಲ್ಲಿ ಸಮಾನ ಪ್ರಮಾಣದಲ್ಲಿ ವಿಟಮಿನ್ ಎ, ವಿಟಮಿನ್ ಬಿ 12, ವಿಟಮಿನ್ ಡಿ, ಫೋಲೇಟ್ ಹಾಗೂ ಸತು, ಕಬ್ಬಿಣ, ಸೆಲೆನಿಯಮ್‌ನಂತಹ ಖನಿಜಗಳನ್ನು ಒಳಗೊಂಡಿರುತ್ತವೆ. ಕಂದು ಮೊಟ್ಟೆ ಆರೋಗ್ಯಕರವೆಂದು ಯಾರಾದರೂ ಹೇಳಿದರೆ, ಅದನ್ನು ನಿಖರವಾಗಿ ನಂಬಲು ಆಗುವುದಿಲ್ಲ ಎಂದು ಅವರು ಹೇಳುತ್ತಾರೆ.

ಕಂದು ಮತ್ತು ಬಿಳಿ ಮೊಟ್ಟೆಯ ವ್ಯತ್ಯಾಸವೇನು? ಎರಡು ಮೊಟ್ಟೆಗಳ ನಡುವಿನ ಏಕೈಕ ವ್ಯತ್ಯಾಸವೆಂದರೆ ಬಿಳಿ ಮೊಟ್ಟೆಗಳು ಬಿಳಿ ಗರಿಗಳನ್ನು ಹೊಂದಿರುವ ಕೋಳಿಗಳಿಂದ ಬರುತ್ತವೆ. ಆದರೆ, ಕಂದು ಮೊಟ್ಟೆಗಳು ವಿವಿಧ ಬಣ್ಣಗಳ ಗರಿಗಳನ್ನು ಹೊಂದಿರುವ ಕೋಳಿಗಳಿಂದ ಬರುತ್ತವೆ. ಆದ್ರೆ, ಇದು ಆರೋಗ್ಯದಲ್ಲಿ ಅಲ್ಲ, ಕೋಳಿಗಳ ಪ್ರಭೇದಗಳಲ್ಲಿರುವ ವ್ಯತ್ಯಾಸ ಇದಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!