ಉದಯವಾಹಿನಿ, ಖಾಲಿ ಹೊಟ್ಟೆಯಲ್ಲಿ ಯಾವುದೇ ಪದಾರ್ಥಗಳನ್ನು ಸೇವಿಸಿದರೂ ಇಡೀ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಡೆಸೋಂಪು ನೀರನ್ನು ಕುಡಿಯುವುದರಿಂದ ಅನೇಕೆ ಪ್ರಯೋಜನಗಳು ಲಭಿಸುತ್ತದೆ. ಬಡೆಸೋಂಪಿನ ಒಂದು ಲೋಟ ನೀರು ಕುಡಿಯುವುದರಿಂದ ದೇಹವು ನಿರ್ವಿಷಗೊಳ್ಳುವುದಲ್ಲದೇ ಕೊಬ್ಬನ್ನು ಕರಗಿಸಲು ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸಲು ಹೆಚ್ಚು ಸಹಾಯ ಮಾಡುತ್ತದೆ.ನಿಮ್ಮ ಅಡುಗೆಮನೆಯಲ್ಲಿ ಕಂಡು ಬರುವ ಬೀಜದಿಂದ ನೀರನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬುದರ ಬಗ್ಗೆ ಡಾ.ಸಲೀಂ ಜೈದಿ ಅವರು ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ವಿಡಿಯೋದಲ್ಲಿ ವಿವರವಾಗಿ ತಿಳಿಸಿದ್ದಾರೆ. ಈ ಮನೆಮದ್ದನ್ನು ಆಯುರ್ವೇದ ಮಾತ್ರವಲ್ಲದೇ, ಆಧುನಿಕ ವಿಜ್ಞಾನವೂ ಇದನ್ನು ಗುರುತಿಸಿದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಡೆಸೋಂಪು ನೀರನ್ನು ಕುಡಿದರೆ ದೇಹಕ್ಕೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಜೀರ್ಣಕ್ರಿಯೆ, ಉಬ್ಬುವಿಕೆಗೆ ಪರಿಹಾರ: ಬಡೆಸೋಂಪು ನೈಸರ್ಗಿಕ ಕಾರ್ಮಿನೇಟಿವ್ ಏಜೆಂಟ್ ಕಾರ್ಯನಿರ್ವಹಿಸುತ್ತದೆ. ಇದರಿಂದ ಗ್ಯಾಸ್, ಉಬ್ಬುವುದು ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ತಕ್ಷಣದ ಪರಿಹಾರ ದೊರೆಯುತ್ತದೆ. ಬಡೆಸೋಂಪು ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ. ಗ್ಯಾಸ್ಟ್ರಿಕ್, ಹೊಟ್ಟೆಯುಬ್ಬರ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗುತ್ತದೆ.
ದೇಹದ ತೂಕ ಇಳಿಕೆಗೆ ಒಳ್ಳೆಯದು: ಬಡೆಸೋಂಪು ನೀರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಅತಿಯಾಗಿ ತಿನ್ನುವ ಬಯಕೆಯನ್ನು ನಿಗ್ರಹಿಸಲು ಹಾಗೂ ಕೊಬ್ಬಿನ ಚಯಾಪಚಯ ಕ್ರಿಯೆ ಸಕ್ರಿಯಗೊಳಿಸಲು ಪರಿಕಾರಿಯಾಗಿ ಸಹಾಯ ಮಾಡುತ್ತದೆ.
ಮಲಬದ್ಧತೆ ಸಮಸ್ಯೆ ನಿವಾರಣೆ: ಬಡೆಸೋಂಪು ನೀರು ಸೇವಿಸುವುದರಿಂದ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ, ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಹಾರ್ಮೋನುಗಳ ಸಮತೋಲನ, ಮಹಿಳೆಯರ ಆರೋಗ್ಯಕ್ಕೆ ಉತ್ತಮ: ಬೆಳಗ್ಗೆ ಬಡೆಸೋಂಪು ನೀರನ್ನು ಸೇವಿಸುವುದು ಮಹಿಳೆಯರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಎದೆ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತದೆ. ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ ಹಾಗೂ ಹಾರ್ಮೋನುಗಳ ಸಮತೋಲನ ಕಾಯ್ದುಕೊಳ್ಳಲು ತುಂಬಾ ಸಹಾಯವಾಗುತ್ತದೆ.ಕಣ್ಣು, ಮೆದುಳಿನ ಆರೋಗ್ಯ ಒಳ್ಳೆಯದು: ಬಡೆಸೋಂಪು ನೀರು ಮೆದುಳು ಹಾಗೂ ಕಣ್ಣುಗಳೆರಡಕ್ಕೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕಣ್ಣು ಹಾಗೂ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
