ಉದಯವಾಹಿನಿ, ಅನೇಕರಿಗೆ ಬೆಳಗಿನ ಉಪಹಾರದಲ್ಲಿ ವಡಾ ಪ್ರಿಯವಾದ ತಿಂಡಿಯಾಗಿರುತ್ತೆ. ಇವುಗಳನ್ನು ಉಪಹಾರಕ್ಕೆ ಮಾತ್ರವಲ್ಲದೇ ಪೂಜಾ ಹಾಗೂ ವಿವಿಧ ಆಚರಣೆಗಳು ಮತ್ತು ಹಬ್ಬಗಳ ಸಮಯದಲ್ಲಿಯೂ ಸಹ ತಯಾರಿಸಲಾಗುತ್ತದೆ. ಹೋಟೆಲ್‌ಗಳಲ್ಲಿ ತಯಾರಿಸುವ ವಡಾಗಳಿಗಿಂತ ಮನೆಯಲ್ಲಿ ತಯಾರಿಸಿದ ವಡಾಗಳು ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುತ್ತವೆ. ಜೊತೆಗೆ ಕೆಲವೊಮ್ಮೆ ಒಳಗೆ ಹಿಟ್ಟು ಸರಿಯಾಗಿ ಬೇಯಿಸುವುದಿಲ್ಲ. ಇದೀಗ ಈ ಟಿಪ್ಸ್ ಅನುಸರಿಸಿ ವಡಾ ತಯಾರಿಸಿದರೆ ತುಂಬಾ ಚೆನ್ನಾಗಿ ಬರುತ್ತವೆ.ಈ ವಡಾದೊಳಗೆ ಮೃದುವಾಗಿ ಹಾಗೂ ಹೊರಗೆ ಗರಿಗರಿಯಾಗಿ ಬರುತ್ತವೆ ಜೊತೆಗೆ ರುಚಿ ಕೂಡ ಸಖತ್ ಆಗಿರುತ್ತವೆ. ಇವು ತುಂಬಾ ಕಡಿಮೆ ಎಣ್ಣೆಯನ್ನು ಹೀರಿಕೊಳ್ಳುತ್ತವೆ. ವಡಾ ರೆಸಿಪಿಯನ್ನು ಕಡಿಮೆ ಪದಾರ್ಥಗಳನ್ನು ಬಳಸಿ ಸಿದ್ಧಪಡಿಸಬಹುದು. ಸಖತ್ ಟೇಸ್ಟಿಯಾದ ಉದ್ದಿನ ವಡಾ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಉದ್ದಿನಬೇಳೆ – ಎರಡು ಕಪ್
ಅಕ್ಕಿ – ನಾಲ್ಕು ಟೀಸ್ಪೂನ್
ಶುಂಠಿ – ನಾಲ್ಕು ಟೀಸ್ಪೂನ್
ಜೀರಿಗೆ – ಎರಡು ಟೀಸ್ಪೂನ್
ಒಣ ಮೆಣಸಿನಕಾಯಿ – 10
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಡೀಪ್ ಫ್ರೈ ಮಾಡಲು ಬೇಕಾದಷ್ಟು
ಉದ್ದಿನ ವಡಾ ತಯಾರಿಸುವ ವಿಧಾನ: ಉಪಹಾರಕ್ಕೆ ಹೇಳಿ ಮಾಡಿಸಿದ ಈ ಹಳೆಯ ಶೈಲಿಯ ಉದ್ದಿನ ವಡಾ ತಯಾರಿಸಲು ಮೊದಲು ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ.
ಬಳಿಕ ಅದರಲ್ಲಿ ಸಾಕಷ್ಟು ನೀರು ಹಾಕಿ ಕನಿಷ್ಠ ನಾಲ್ಕು ಗಂಟೆಗಳ ಕಾಲ ನೆನೆಸಿಡಬೇಕು.
ಅದೇ ರೀತಿಯಲ್ಲಿ ಒಣಗಿದ ಮೆಣಸಿನಕಾಯಿಗಳನ್ನು ಒಂದು ಸಣ್ಣ ಬಟ್ಟಲಿನಲ್ಲಿ ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ 20 ನಿಮಿಷ ನೆನೆಸಿಕೊಳ್ಳಿ. ಇದೀಗ ಚೆನ್ನಾಗಿ ನೆನೆಸಿದ ಉದ್ದಿನ ಬೇಳೆ, ಅಕ್ಕಿ ಮಿಶ್ರಣವನ್ನು ಮತ್ತೆ ತೊಳೆದು ನೀರಿಲ್ಲದೆ ಸೋಸಿಕೊಳ್ಳಿ.
ಬಳಿಕ ಮಿಕ್ಸಿ ಜಾರ್ ತೆಗೆದುಕೊಂಡು ಅದರಲ್ಲಿ ತೊಳೆದ ಉದ್ದಿನ ಬೇಳೆ, ಶುಂಠಿ ಪೀಸ್ಗಳು, ಜೀರಿಗೆ ಮತ್ತು ನೆನೆಸಿದ ಒಣ ಮೆಣಸಿನಕಾಯಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬುವ ಪ್ರಕ್ರಿಯೆಯಲ್ಲಿ ಅಗತ್ಯವಿದ್ದರೆ ಎರಡರಿಂದ ಮೂರು ಚಮಚ ನೀರನ್ನು ಸೇರಿಸುವ ಮೂಲಕ ಸ್ವಲ್ಪ ಗಟ್ಟಿಯಾದ ಹಿಟ್ಟನ್ನು ತಯಾರಿಸಿಕೊಳ್ಳಿ.
