ಉದಯವಾಹಿನಿ, ಆರೋಗ್ಯಕರ ಜೀವನ ನಡೆಸಲು ಮೂಲ ಅಡಿಪಾಯವೇ ಕರುಳಿನ ಆರೋಗ್ಯ. ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಪ್ರತಿದಿನ ನಾವು ತಿನ್ನುವ ಆಹಾರವು ನಮ್ಮ ಕರುಳಿನ ಸೂಕ್ಷ್ಮಜೀವಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದಕ್ಕೆ ದೇಹದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಗುಂಪು ಪ್ರಮುಖ ಕಾರಣವಾಗುತ್ತದೆ. ಈ ಉತ್ತಮ ಬ್ಯಾಕ್ಟೀರಿಯಾಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಕೊಲೊನ್ ಕ್ಯಾನ್ಸರ್‌ನಂತಹ ರೋಗಗಳಿಂದ ರಕ್ಷಿಸಲು ಸಹಾಯವಾಗುತ್ತದೆ.
ಸೈನ್ಸ್ ಡೈರೆಕ್ಟ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 2040ರ ವೇಳೆಗೆ ವಿಶ್ವದಾದ್ಯಂತ 3.2 ಮಿಲಿಯನ್ ಹೊಸ ಕೊಲೊರೆಕ್ಟಲ್ ಕ್ಯಾನ್ಸರ್ ಪ್ರಕರಣಗಳು ಸಂಭವಿಸುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಸೌರಭ್ ಸೇಥಿ ಅವರು, ನಮ್ಮ ಕರುಳಿನ ಆರೋಗ್ಯಕ್ಕೆ ಉತ್ತಮವಾದ ಹಾಗೂ ಕೊಲೊನ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಹಣ್ಣುಗಳ ಬಗ್ಗೆ ವಿವರಿಸಿದ್ದಾರೆ. ಈ ಹಣ್ಣುಗಳಲ್ಲಿ ಪೋಷಕಾಂಶಗಳು ಹಾಗೂ ನಾರಿನಂಶದಲ್ಲಿ ಸಮೃದ್ಧವಾಗಿವೆ. ಜೀರ್ಣಕ್ರಿಯೆಯನ್ನು ಬೆಂಬಲಿಸುವ ಹಾಗೂ ಉರಿಯೂತ ಕಡಿಮೆ ಮಾಡುವ ಹಾಗೂ ಕ್ಯಾನ್ಸರ್ ಅಪಾಯ ಕಡಿಮೆ ಮಾಡುವ ಸಂಯುಕ್ತಗಳನ್ನು ಒಳಗೊಂಡಿರುತ್ತವೆ ಎಂದು ವೈದ್ಯರು ತಿಳಿಸುತ್ತಾರೆ.
ಕಿವಿ ಹಣ್ಣು ಒಳ್ಳೆಯದು: ಕಿವಿ ಹಣ್ಣು ಕರುಳಿನ ಆರೋಗ್ಯಕ್ಕೆ ಅತ್ಯುತ್ತಮವಾದ ಹಣ್ಣುಗಳಲ್ಲಿ ಒಂದಾಗಿದೆ. ಇದು ಪ್ರೋಟೀನ್ ಒಡೆಯಲು ಸಹಾಯ ಮಾಡುವ ನೈಸರ್ಗಿಕ ಕಿಣ್ವವಾದ ಆಕ್ಟಿನಿಡಿನ್ ಹೊಂದಿರುತ್ತದೆ. NIH ಸಂಶೋಧನೆಯ ತಿಳಿಸುವ ಪ್ರಕಾರ, ಕಿವಿ ಹಣ್ಣು ಕರುಳಿನ ಕ್ರಮಬದ್ಧತೆಯನ್ನು ಉತ್ತೇಜಿಸುತ್ತದೆ ಹಾಗೂ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಕೊಲೊನ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಣ್ಣು ಉತ್ಕರ್ಷಣ ನಿರೋಧಕಗಳು ಮತ್ತು ಪ್ರಿಬಯಾಟಿಕ್‌ಗಳ ಮಿಶ್ರಣವಾಗಿದೆ. ಕರುಳಿನ ಗೋಡೆಯನ್ನು ಬಲಪಡಿಸುತ್ತವೆ ಹಾಗೂ ಉರಿಯೂತ ಕಡಿಮೆ ಮಾಡುತ್ತವೆ.
ಸೇಬು ಹಣ್ಣು ಅತ್ಯುತ್ತಮ: ಸೇಬು ಹಣ್ಣಿನಲ್ಲಿ ಪೆಕ್ಟಿನ್ ಅಂಶವಿದೆ. ಇದು ಕರುಳಿನ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಕಾರ್ಯನಿರ್ವಹಿಸುವ ಕರಗುವ ಫೈಬರ್ನ ಪ್ರಕಾರವಾಗಿದೆ. ಕರುಳಿನಲ್ಲಿ ಹುದುಗಿಸಿದಾಗ ಪೆಕ್ಟಿನ್ ಬ್ಯುಟೈರೇಟ್‌ನಂತಹ ಶಾರ್ಟ್ ಚೈನ್ ಕೊಬ್ಬಿನಾಮ್ಲಗಳನ್ನು (SCFAs) ಉತ್ಪಾದಿಸುತ್ತದೆ. ಇದು ಕೊಲೊನ್ ಕೋಶಗಳನ್ನು ಕ್ಯಾನ್ಸರ್ ಆಗಿ ಪರಿವರ್ತಿಸದಂತೆ ರಕ್ಷಣೆ ಮಾಡುತ್ತದೆ. ಫ್ರಾಂಟಿಯರ್ಸ್‌ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಪ್ರತಿದಿನ ಸೇಬುಗಳನ್ನು ತಿನ್ನುವುದು ಆರೋಗ್ಯಕರ ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಹಾನಿಕಾರಕ ಬ್ಯಾಕ್ಟೀರಿಯಾ ಕಡಿಮೆ ಮಾಡುತ್ತದೆ. ಒಳ್ಳೆಯ ಬ್ಯಾಕ್ಟೀರಿಯಾ ಹೆಚ್ಚಿಸುತ್ತದೆ. ಸೇಬು ಹಣ್ಣಿನ ತೊಗಟೆಯು ಕ್ವೆರ್ಸೆಟಿನ್ ಹೊಂದಿರುತ್ತದೆ ಹಾಗೂ ಇದು ಜೀವಕೋಶಗಳಲ್ಲಿ ಡಿಎನ್‌ಎ ಹಾನಿ ತಡೆಯುವ ಪ್ರಬಲ ಉತ್ಕರ್ಷಣ ನಿರೋಧಕವಾಗಿದೆ.
ಕಲ್ಲಂಗಡಿ ತುಂಬಾ ಒಳ್ಳೆಯದು: ಕರುಳಿನ ಆರೋಗ್ಯಕ್ಕೆ ನಾರು ಪದಾರ್ಥಗಳು ಮಾತ್ರವಲ್ಲ. ಹೈಡ್ರೇಟ್ ಆಗಿರುವುದು ಕೂಡ ಬಹಳ ಮುಖ್ಯವಾಗಿದೆ. ನೀರಿನ ಸಮೃದ್ಧವಾಗಿರುವ ಕಲ್ಲಂಗಡಿಗಳು ಕರುಳನ್ನು ಹೈಡ್ರೀಕರಿಸುತ್ತವೆ. ಇದರಿಂದ ಜೀರ್ಣಕ್ರಿಯೆಯನ್ನು ಸರಾಗವಾಗಿ ನಡೆಸಲು ಸಹಾಯವಾಗುತ್ತದೆ. ಕಲ್ಲಂಗಡಿಯಲ್ಲಿನ ಉತ್ಕರ್ಷಣ ನಿರೋಧಕವಾದ ಲೈಕೋಪೀನ್ಯಿದೆ. ಲೈಕೋಪೀನ್ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಲೈಕೋಪೀನ್ ಸೇವಿಸುವುದರಿಂದ ಕೊಲೊನ್ ಕ್ಯಾನ್ಸರ್ ಸೇರಿದಂತೆ ಕೆಲವು ಕ್ಯಾನ್ಸರ್‌ಗಳ ಅಪಾಯ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು NIH ಸಂಶೋಧನೆ ತಿಳಿಸಿದೆ.
