ಉದಯವಾಹಿನಿ ನಮಗೆಲ್ಲ ಸುಲಭವಾಗಿ, ಸರಳ ಹಂತಗಳೊಂದಿಗೆ ಅಡುಗೆ ಮಾಡೋದು ಅಂದರೆ ತುಂಬಾ ಇಷ್ಟ. ಯಾಕೆಂದರೆ ಅದು ಕಡಿಮೆ ಸಮಯದಲ್ಲಿ ಮುಗಿದು ಹೋಗುತ್ತದೆ. ಅದಕ್ಕೆ ಇವತ್ತು ಸುಲಭವಾಗಿ ಬ್ರೆಡ್ ದೋಸೆ ಮಾಡಿ. ಸವಿಯಿರಿ.

ನಮಗೆಲ್ಲ ಸುಲಭವಾಗಿ, ಸರಳ ಹಂತಗಳೊಂದಿಗೆ ಅಡುಗೆ ಮಾಡೋದು ಅಂದರೆ ತುಂಬಾ ಇಷ್ಟ. ಯಾಕೆಂದರೆ ಅದು ಕಡಿಮೆ ಸಮಯದಲ್ಲಿ ಮುಗಿದು ಹೋಗುತ್ತದೆ. ಅದಕ್ಕೆ ಇವತ್ತು ಸುಲಭವಾಗಿ ಬ್ರೆಡ್ ದೋಸೆ ಮಾಡಿ. ಸವಿಯಿರಿ. ಬೇಕಾಗುವ ಸಾಮಗ್ರಿಗಳು: ಬ್ರೆಡ್ , ರವೆ, ಮೊಸರು
ಅಕ್ಕಿ ಹಿಟ್ಟು ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:  ಮೊದಲಿಗೆ ಬ್ರೆಡ್ ಅನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಅದಕ್ಕೆ ಅಕ್ಕಿ ಹಿಟ್ಟು, ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಆ ಮಿಶ್ರಣವನ್ನು ದೋಸೆಯ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಬಳಿಕ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು, ಕಾದ ತವೆಯ ಮೇಲೆ ದೋಸೆ ಹಾಕಿಕೊಳ್ಳಿ. ಗರಿಗರಿಯಾದ ದೋಸೆ ತಯಾರಾಗುತ್ತದೆ. ಇದನ್ನು ಚಟ್ನಿ ಅಥವಾ ಆಲುಗಡ್ಡೆ ಪಲ್ಯದೊಂದಿಗೆ ಸವಿಯಬಹುದು.

Leave a Reply

Your email address will not be published. Required fields are marked *

error: Content is protected !!