ಉದಯವಾಹಿನಿ, ಸಾಮಾನ್ಯವಾಗಿ ವೀಕೆಂಡ್ನಲ್ಲಿ ಅನೇಕ ಬಗೆಯ ಬಿರಿಯಾನಿಗಳನ್ನು ಮಾಡಲಾಗುತ್ತದೆ. ಸ್ವಲ್ಪ ವಿಭಿನ್ನ ಹಾಗೂ ವಿಶೇಷ ವೆಜ್ ದೊನ್ನೆ ಬಿರಿಯಾನಿ ರೆಸಿಪಿಯನ್ನು ನಾವು ನಿಮಗಾಗಿ ತಂದಿದ್ದೇವೆ. ಮಶ್ರೂಮ್, ವಿವಿಧ ಮಸಾಲೆ ಪದಾರ್ಥಗಳಿಂದ ತಯಾರಿಸಲಾಗುವ ಪರಿಮಳಯುಕ್ತ ಈ ಬಿರಿಯಾನಿಗೆ ಪ್ರತಿಯೊಬ್ಬರೂ ಫಿದಾ ಆಗುತ್ತಾರೆ.
ವೆಜ್ ಬಿರಿಯಾನಿಯ ಒಂದು ತುತ್ತು ಬಾಯಿಯಲ್ಲಿ ಇಟ್ಟರೆ ಸಾಕು ವಾವ್ ಎನಿಸುವ ಭಾವ ಲಭಿಸುತ್ತದೆ. ಈ ವೆಜ್ ದೊನ್ನೆ ಬಿರಿಯಾನಿಯು ತಮ್ಮದೇ ಆದ ವಿಶಿಷ್ಟ ರುಚಿಯನ್ನು ಹೊಂದಿದೆ. ವೀಕೆಂಡ್ನಲ್ಲಿ ಸಖತ್ ಟೇಸ್ಟಿ ಟೇಸ್ಟಿ ವೆಜ್ ದೊನ್ನೆ ಬಿರಿಯಾನಿ ಮಾಡಿದರೆ ಮನೆಯ ಎಲ್ಲಾ ಸದಸ್ಯರು ಇಷ್ಟಪಟ್ಟು ಸೇವಿಸುತ್ತಾರೆ. ಇದೀಗ ವೆಜ್ ದೊನ್ನೆ ಬಿರಿಯಾನಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ವೆಜ್ ದೊನ್ನೆ ಬಿರಿಯಾನಿಗಾಗು ಬೇಕಾಗುವ ಸಾಮಗ್ರಿಗಳು: ಅಕ್ಕಿ – 2 ಕಪ್ ಅಣಬೆ – 200 ಗ್ರಾಂ ಎಣ್ಣೆ – 8 ಟೀಸ್ಪೂನ್ ಏಲಕ್ಕಿ – 10
ಕಾಳುಮೆಣಸು – 1 ಟೀಸ್ಪೂನ್ ದಾಲ್ಚಿನ್ನಿ – 4 ಲವಂಗ – 10 ಈರುಳ್ಳಿ ತುಂಡುಗಳು – 3 ಕಪ್ ಹಸಿಮೆಣಸು – 6
ಪುದೀನ ಸೊಪ್ಪು – ಸ್ವಲ್ಪ ಕೊತ್ತಂಬರಿ – ಸ್ವಲ್ಪ ಮೆಂತ್ಯೆ ಸೊಪ್ಪು – ಸ್ವಲ್ಪ ತುಪ್ಪ – 3 ಟೀಸ್ಪೂನ್
ಮಸಾಲೆ – 1 ಅನಾನಸ್ ಹೂವು – 1 ಕಲ್ಲು ಹೂವು – 2 ಬಿರಿಯಾನಿ ಎಲೆ – 1 ಶಾಜಿರಾ – 1 ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್ ಉಪ್ಪು – ರುಚಿಗೆ ತಕ್ಕಷ್ಟು
ಖಾರದ ಪುಡಿ – 1 ಟೀಸ್ಪೂನ್ ಅರಿಶಿನ – ಅರ್ಧ ಟೀಸ್ಪೂನ್ ಮೊಸರು – ಅರ್ಧ ಕಪ್
ವೆಜ್ ದೊನ್ನೆ ಬಿರಿಯಾನಿ ತಯಾರಿಸುವುದು ಹೇಗೆ?: ತುಂಬಾ ರುಚಿಕರವಾದ ವೆಜ್ ದೊನ್ನೆ ಬಿರಿಯಾನಿ ಸಿದ್ಧಪಡಿಸಲು ತಯಾರಿಸಲು ಮೊದಲಿಗೆ ಎರಡು ಕಪ್ ಅಕ್ಕಿಯನ್ನು ಒಂದು ಬಟ್ಟಲಿನಲ್ಲಿ ಹಾಕಿ ಸ್ವಚ್ಛಗೊಳಿಸಿ. ಬಳಿಕ ಸಾಕಷ್ಟು ನೀರು ಸುರಿದು ಒಂದು ಗಂಟೆ ನೆನೆಸಿಡಿ.
ಜೊತೆಗೆ ಅಗತ್ಯವಿರುವ ಪ್ರಮಾಣದಲ್ಲಿ ಈರುಳ್ಳಿ, ಹಸಿ ಮೆಣಸಿನಕಾಯಿ, ಪುದೀನ, ಕೊತ್ತಂಬರಿ ಸೊಪ್ಪು ಹಾಗೂ ಮೆಂತ್ಯೆ ಸೊಪ್ಪನ್ನು ಕತ್ತರಿಸಿ ಪಕ್ಕಕ್ಕೆ ಇಡಿ. ಜೊತೆಗೆ 200 ಗ್ರಾಂ ಅಣಬೆಗಳನ್ನು ಕತ್ತರಿಸಿ ಪಕ್ಕಕ್ಕೆ ಇಡಿ.
ಈಗ ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ನಾಲ್ಕು ಚಮಚ ಎಣ್ಣೆಯನ್ನು ಹಾಕಿ ಎಣ್ಣೆ ಬಿಸಿಯಾದ ಬಳಿಕ ಐದು ಏಲಕ್ಕಿ, ಅರ್ಧ ಟೀಸ್ಪೂನ್ ಮೆಣಸು, ಎರಡು ದಾಲ್ಚಿನ್ನಿ ತುಂಡುಗಳು ಮತ್ತು ಐದು ಲವಂಗ ಸೇರಿಸಿ ಹುರಿದುಕೊಳ್ಳಿ.
