ಉದಯವಾಹಿನಿ, ರಾಜ್ಯದಲ್ಲಿ ಈಗಾಗಲೇ ಚಳಿ ಶುರುವಾಗಿದೆ. ಈ ಚಳಿಗೆ ಸವಿಯಲು ಬಾಯಿಗೆ ಸಕತ್‌ ಹಾಟ್‌ ಆಗಿರೋದು ಏನಾದ್ರೂ ಬೇಕು ಎನ್ನಿಸುತ್ತಾ ಇರುತ್ತೆ. ಅಂತವರು ಹಾಟ್‌ ಟೊಮೆಟೊ ಕೊತ್ತಂಬರಿ ಸೂಪ್‌ ಮಾಡಿ ಸವಿಯಬಹುದು. ಈ ಸೂಪ್ ಮಾಡುವುದು ಹೇಗೆ..? ಇದಕ್ಕೆ ಬೇಕಾದ ಪದಾರ್ಥಗಳೇನು ಎಂಬುದನ್ನು ನೋಡೋಣ. ಬೇಕಾಗುವ ಪದಾರ್ಥಗಳು ತುಪ್ಪ ಅಥವಾ ಬೆಣ್ಣೆ – ಅರ್ಧ ಟೀಸ್ಪೂನ್, ಎಣ್ಣೆ – 1 ಟೀಸ್ಪೂನ್, ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ – 3
ತುರಿದ ಶುಂಠಿ – ಅರ್ಧ ಇಂಚು, ದಾಲ್ಚಿನ್ನಿ – ಸಣ್ಣ ತುಂಡು, ಏಲಕ್ಕಿ – 3, ಲವಂಗ – 2
ಬಿರಿಯಾನಿ ಎಲೆ – 1, ಕರಿಮೆಣಸು – ಅರ್ಧ ಟೀಸ್ಪೂನ್, ಗೋಧಿ ಹಿಟ್ಟು – 1 ಟೀಸ್ಪೂನ್, ಟೊಮೆಟೊ – ಕಾಲು ಕೆಜಿ
ಕೊತ್ತಂಬರಿ – 100 ಗ್ರಾಂ, ಖಾರದ ಪುಡಿ – ಅರ್ಧ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಹಸಿಮೆಣಸಿನಕಾಯಿ – 2
ನೀರು – ಅರ್ಧ ಲೀಟರ್ ತಯಾರಿಸುವ ವಿಧಾನ
ಒಲೆ ಆನ್ ಮಾಡಿ ಮತ್ತು ಪಾತ್ರೆ ಇಡಿ ತುಪ್ಪ ಅಥವಾ ಬೆಣ್ಣೆ ಮತ್ತು ಎಣ್ಣೆಯನ್ನು ಹಾಕಿ. ನಂತರ ಕತ್ತರಿಸಿದ ಬೆಳ್ಳುಳ್ಳಿ, ಕತ್ತರಿಸಿದ ಶುಂಠಿ, ದಾಲ್ಚಿನ್ನಿ, ಏಲಕ್ಕಿ, ಲವಂಗ, ಬಿರಿಯಾನಿ ಎಲೆ ಮತ್ತು ಕರಿಮೆಣಸು ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ನಂತರ ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊ ಹಾಕಿ ನಾಲ್ಕು ನಿಮಿಷ ಫ್ರೈ ಮಾಡಿ. ನಂತರ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಅದರ ನಂತರ, ಅರ್ಧ ಚಮಚ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಬಳಿಕ ಹಸಿಮೆಣಸಿನಕಾಯಿಯನ್ನು ಕತ್ತರಿಸಿ, ಅದರ ಮೇಲೆ ಮುಚ್ಚಳವನ್ನು ಹಾಕಿ, ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ. ಟೊಮೆಟೊ ತುಂಡುಗಳು ಸಂಪೂರ್ಣವಾಗಿ ಬೆಂದ ನಂತರ ಅದಕ್ಕೆ ಅರ್ಧ ಲೀಟರ್ ನೀರು ಹಾಕಿ ಕಡಿಮೆ ಉರಿಯಲ್ಲಿ ನೀರನ್ನು ಅರ್ಧದಷ್ಟು ಕಡಿಮೆಯಾಗುವವರಿಗೂ ಕುದಿಸಿ. ನಂತರ ಈ ಮಿಶ್ರಣವು ಸರಿಯಾದ ಬೆಂದ ನಂತರ, ರಸವನ್ನು ಸೋಸುವ ಹುಟ್ಟು ಬಳಸಿ ಸೋಸಿಕೊಳ್ಳಿ. ಈಗ ಟೊಮೆಟೊ ಕೊತ್ತಂಬರಿ ಸೂಪ್​ ಸಿದ್ಧ..

Leave a Reply

Your email address will not be published. Required fields are marked *

error: Content is protected !!