ಉದಯವಾಹಿನಿ, ಚಳಿಗಾಲದಲ್ಲಿ ತುಳಸಿ ಗಿಡಕ್ಕೆ ವಿಶೇಷ ಆರೈಕೆಯ ಅಗತ್ಯವಿರುತ್ತದೆ. ಏಕೆಂದರೆ ಈ ಸಮಯದಲ್ಲಿನ ತಂಪಾದ ಗಾಳಿ, ಆರ್ದ್ರ ವಾತಾವರಣದ ಕಾರಣದಿಂದಾಗಿ ತುಳಸಿ ಗಿಡಗಳು ಒಣಗುವುದು, ಎಲೆಗಳು ಉದುರಿ ಹೋಗುವುದು, ಅವುಗಳ ಬೇರುಗಳು ಕೊಳೆಯುವುದು ಇತ್ಯಾದಿ ಸಮಸ್ಯೆಗಳು ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ತುಳಸಿ ಗಿಡದ ಆರೈಕೆಗೆ ತುಸು ಹೆಚ್ಚು ಗಮನ ನೀಡಬೇಕು. ನಿಮ್ಮ ಮನೆಯಲ್ಲೂ ತುಳಸಿ ಗಿಡ ಒಣಗುತ್ತಿದೆಯೇ, ಈ ಸಮಸ್ಯೆಯನ್ನು ಹೋಗಲಾಡಿಸಲು, ಗಿಡ ಸೊಂಪಾಗಿ ಬೆಳೆಯಲು ಮನೆಯಲ್ಲಿಯೇ ತಯಾರಿಸಿದಂತಹ ಈ ಗೊಬ್ಬರವನ್ನೊಮ್ಮೆ ಪ್ರಯತ್ನಿಸಿ.

ತುಳಸಿ ಗಿಡದ ಆರೈಕೆಗೆ ನೈಸರ್ಗಿಕ ಗೊಬ್ಬರ: ಒಂದು ಕಪ್‌ ನೀರಿಗೆ ಒಂದು ಟೀ ಚಮಚ ಕಾಫಿ ಪುಡಿ ಮತ್ತು ಅರ್ಧ ಟೀ ಸ್ಪೂನ್‌ ಎಪ್ಸಮ್‌ ಉಪ್ಪು ಬೆರೆಸಿ, ದ್ರವ ರೂಪದ ಗೊಬ್ಬರವನ್ನು ತಯಾರಿಸಿಟ್ಟುಕೊಳ್ಳಿ. ಬಳಿಕ ಚಾಕು ಅಥವಾ ಚಮಚದ ಸಹಾಯದಿಂದ ತುಳಸಿ ಗಿಡದ ಬುಡದ ಸುತ್ತಲೂ ಸ್ವಲ್ಪ ಮಣ್ಣನ್ನು ಅಗೆದು, ಈ ದ್ರವ ರೂಪದ ಗೊಬ್ಬರವನ್ನು ಅದಕ್ಕೆ ಹಾಕಿ.ಇದು ಮಣ್ಣಿಗೆ ಸಾಕಷ್ಟು ತೇವಾಂಶವನ್ನು ಒದಗಿಸುತ್ತದೆ. ಇದಲ್ಲದೆ, ಈ ಗೊಬ್ಬರವು ಸಸ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಎಕ್ಸಮ್‌ ಉಪ್ಪಿನಲ್ಲಿ ಮೆಗ್ನೇಸಿಯಮ್‌ ಇದ್ದು, ಇದು ಎಲೆಗಳನ್ನು ಹಸಿರಾಗಿಡಲು ಸಹಾಯ ಮಾಡುತ್ತದೆ. ನೀವು ಈ ಗೊಬ್ಬರವನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಹಾಕಬಹುದು. ಬಯಸಿದಲ್ಲಿ, ನೀವು ದ್ರವರೂಪದ ವರ್ಮಿಕಾಂಪೋಸ್ಟ್ ಗೊಬ್ಬರವನ್ನು ಕೂಡ ಗಿಡಕ್ಕೆ ಹಾಕಬಹುದು.

Leave a Reply

Your email address will not be published. Required fields are marked *

error: Content is protected !!