ಉದಯವಾಹಿನಿ, ಟಿಪ್ಸ್ : ಬಡವರ ಬಾದಾಮಿ ಎಂದೇ ಕರೆಯಲಾಗುವ ಕಡಲೆಕಾಯಿ, ಆರೋಗ್ಯಕ್ಕೆ ಬಹಳ ಒಳ್ಳೆಯದು. ಕಡಲೆಬೀಜ ಚಿಕ್ಕಿ ಬೆಲ್ಲದಿಂದ ತಯಾರಿಸಲಾಗುತ್ತದೆ. ಚಿಕ್ಕವರಿರುವಾಗ ನಾಲಿಗೆಯನ್ನು ಸಿಹಿಗೊಳಿಸಲು ಈ ಚಿಕ್ಕಿಯನ್ನು ತಿನ್ನುತ್ತಿದ್ದೆವು. ಇದು ಭಾರತದ ಸಾಂಪ್ರದಾಯಿಕ ಮಿಠಾಯಿಯು ಹೌದು. ಕಡಲೆಬೀಜದಲ್ಲಿರುವ ಜೀವಸತ್ವಗಳು ಮತ್ತು ಪ್ರೋಟೀನ್‌ಗಳು ಬೆಲ್ಲದಲ್ಲಿರುವ ಕಬ್ಬಿಣ ದೇಹಕ್ಕೆ ಬಹಳ ಪ್ರಯೋಜನಕಾರಿ. ಅಷ್ಟೇ ಅಲ್ಲ, ಚಳಿಗಾಲದ ಶೀತ ಸಂಬಂಧಿತ ಕಾಯಿಲೆಗಳಿಂದ ಈ ರುಚಿಯಾದ ಖಾದ್ಯ ರಕ್ಷಿಸುತ್ತದೆ ಎಂದರೆ ನೀವು ನಂಬಲೇಬೇಕು. ಅಷ್ಟಕ್ಕೂ ಈ ಕಡಲೆಕಾಯಿ ಚಿಕ್ಕಿ ಆರೋಗ್ಯದ ಮೇಲೆ ಬೀರುವ ಪ್ರಯೋಜನಗಳೇನು?
ಈ ಕೆಳಗಿನಂತೆ ಕೆಲವು ಅಂಶಗಳ ಮೂಲಕ ತಿಳಿದು ಕೊಳ್ಳೋಣ:-

1< ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:- ಈ ರುಚಿಕರವಾದ ಚಿಕ್ಕಿಯು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವುದೇ ಅಲ್ಲ, ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಇದರಲ್ಲಿ ಅನ್‌ಸ್ಯಾಚುರೇಟೆಡ್ ಫ್ಯಾಟಿ ಆಸಿಡ್‌ಗಳು ವಿಶೇಷವಾಗಿ ಒಲಿಯಿಕ್ ಆಮ್ಲದಿಂದ ತುಂಬಿರುತ್ತವೆ. ಈ ಕಡಲೆಕಾಯಿ ಚಿಕ್ಕಿಯು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಹಾಗೆಯೇ ಆರೋಗ್ಯಕರ ರಕ್ತದ ಲಿಪಿಡ್ ಪ್ರೊಫೈಲ್ ಅನ್ನು ಬೆಂಬಲಿಸುವ ಮೂಲಕ ಅಪಧಮನಿ ಕಾಯಿಲೆ ಸೇರಿದಂತೆ ಪಾರ್ಶ್ವವಾಯು ಬಾರದಂತೆ ತಡೆಯುತ್ತದೆ.

2< ಚರ್ಮಕ್ಕೆ ಬಹಳ ಒಳ್ಳೆಯದು:- ಕಡಲೆಕಾಯಿ ಹಾಗು ಬೆಲ್ಲದ ಈ ಚಿಕ್ಕಿಯು ಕೇವಲ ಆರೋಗ್ಯವನ್ನು ಮಾತ್ರ ಕಾಪಾಡುವುದಿಲ್ಲ ಬದಲಾಗಿ ಚರ್ಮದ ಅನೇಕ ತೊಂದರೆಗಳನ್ನು ಕೂಡ ಪರಿಹರಿಸುತ್ತದೆ. ಉರಿಯೂತದ ಪರಿಣಾಮಗಳನ್ನು ಇವು ಹೊಂದಿದ್ದು, ಸೋರಿಯಾಸಿಸ್ ಮತ್ತು ಎಸ್ಜಿಮಾದಂತಹ ಕಾಯಿಲೆಗಳಿಂದ ನಮ್ಮ ಚರ್ಮವನ್ನು ಕಾಪಾಡುತ್ತದೆ. ಇದರಲ್ಲಿರುವ ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಸತು ಚರ್ಮದ ಒಳಗಿನಿಂದ ಪೋಷಿಸಿ, ಒಳಗಿನಿಂದ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

3< ನರಗಳ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ:- ಕಡಲೆಕಾಯಿ ಚಿಕ್ಕಿಯನ್ನು ಬೆಲ್ಲದಿಂದ ತಯಾರಿಸಲಾಗುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ನರಗಳ ಕಾಯಿಲೆಗಳ ವಿರುದ್ಧ ಹೋರಾಡಲು ಉತ್ತೇಜಿಸುತ್ತದೆ. ಸಂಶೋಧನೆಗಳ ಪ್ರಕಾರ, ರಕ್ತ ಹೆಪ್ಪುಗಟ್ಟುವಿಕೆಯನ್ನು ದುರ್ಬಲಗೊಳಿಸಲು ಮತ್ತು ಬುದ್ಧಿ ಮಾಂದ್ಯತೆಯಂತಹ ನರಗಳ ಕಾಯಿಲೆಗಳನ್ನು ಈ ಸಣ್ಣ ಚಿಕ್ಕಿ ಚಿಕಿತ್ಸೆ ನೀಡುತ್ತದೆ ಎಂದು ಸಾಬೀತು ಪಡಿಸಿವೆ.

4< ಆರೋಗ್ಯಕರ ಬೆಳವಣಿಗೆಗೆ ಸಹಕಾರಿ:- ಕಡಲೆಕಾಯಿ ಚಿಕ್ಕಿಯಲ್ಲಿ ಅಮೈನೋ ಆಮ್ಲಗಳ ಅತ್ಯುತ್ತಮ ಮೂಲವನ್ನು ಹೊಂದಿದೆ. ಇದರಲ್ಲಿರುವ ಅಮೈನೋ ಆಮ್ಲಗಳು ಹಾರ್ಮೋನ್ ಹೆಚ್ಚಿಸಲು ಹಾಗು ರೋಗನಿರೋಧಕ ಶಕ್ತಿಯನ್ನು ನಿರ್ವರ್ಹಿಸಲು ಸಹಾಯ ಮಾಡುತ್ತದೆ. ಮಕ್ಕಳು ಕೂಡ ನಿಸ್ಸಂದೇಹವಾಗಿ ಕಡಲೆಕಾಯಿ ಚಿಕ್ಕಿಯನ್ನು ಕುರುಕಲು ತಿಂಡಿಯಾಗಿ ಸೇವಿಸಬಹುದು. ಅಲ್ಲದೆ, ಇದು ಸ್ವಲ್ಪ ಕಾಲ ಹೊಟ್ಟೆ ತುಂಬಿದ ಅನುಭವ ಉಂಟು ಮಾಡುತ್ತದೆ.

5< ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ:- ಕಡಲೆಕಾಯಿಗಳಲ್ಲಿ ಸೆಲೆನಿಯಮ್ ಹಾಗು ಬೆಲ್ಲದಲ್ಲಿ ಮೆಗ್ನೀಸಿಯಮ್, ಐರನ್‌ಗಳು ಸಮೃದ್ಧವಾಗಿದೆ. ಇವೆರಡು ಹಿಮೋಗ್ಲೀಬಿನ್ ಮಟ್ಟವನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಇವೆರಡರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುವುದಲ್ಲದೆ, ಮೂಳೆಗಳನ್ನು ಬಲಪಡಿಸಲು ಕೂಡ ಉತ್ತೇಜಿಸುತ್ತದೆ. ಆದರೆ ಮಧುಮೇಹ ಇರುವವರು ಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು.
