ಉದಯವಾಹಿನಿ, ಚಿಕ್ಕಬಳ್ಳಾಪುರ: ಅವರಿಬ್ಬರದ್ದು ಧರ್ಮ ಬೇರೆಯಾದ್ರೂ, ಅದರ ಸಂಕೋಲೆ ಮೀರಿ ಪ್ರೀತಿಸಿ ಮದುವೆಯಾಗಿದ್ದರು. ಅನ್ಯ ಧರ್ಮದವರಾದ ಕಾರಣ ಪೋಷಕರ ವಿರೋಧಗಳ ನಡುವೆಯೇ, ಪ್ರೀತಿಸಿ ಯಾರಿಗೂ ಹೆದರಬಾರದು ಅಂತ ʻನಾ ನಿನಗೆ ನೀ ಎನಗೆʼ ಅಂತ ಹಾಲು ಜೇನಿನಂತೆ ಸುಃಖ ಸಂಸಾರ ಸಾಗಿಸುತ್ತಿದ್ರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು, ಹೋಗ್ತಾ ಹೋಗ್ತಾ ಗಂಡನಿಗೆ ಹೆಂಡತಿ ಮೇಲೆ ಅನುಮಾದ ಕಾಯಿಲೆ ಶುರುವಾಯಿತು. ಕೊನೆಯೆ ಇದು ಹೆಂಡತಿ ಕೊಲೆಯಲ್ಲಿ ಅಂತ್ಯವಾಗಿದೆ. ಒಂದ್ಕಡೆ ಪ್ರೀತಿಸಿ ಕೈ ಹಿಡಿದವಳನ್ನೇ ಕೊಂದ ತಪ್ಪಿಗೆ ಗಂಡ ಜೈಲು ಸೇರಿದ್ರೆ, ಏನೂ ಅರಿಯದ ಕಂದಮ್ಮಗಳು ಅನಾಥವಾಗಿವೆ. ಇಂತಹ ಮನಕಲಕುವ ಘಟನೆ ನಡೆದಿರೋದು, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಗೆರಿಗೆರೆಡ್ಡಿಪಾಳ್ಯ ಅಲಿಯಾಸ್ ಪಾತೂರಿನಲ್ಲಿ.
ಹೌದು. ಡ್ರೈವರ್ ಆಗಿದ್ದ ಬಾಲು ಎಂಬಾತ ಇದೇ ಗ್ರಾಮದ ಅನ್ಯಕೋಮಿನ ದಿಲ್ಷಾತ್‌ಳನ್ನ 4 ವರ್ಷ ಹಿಂದೆ ಪ್ರೀತಿಸಿ ಪೋಷಕರ ವಿರೋಧಧ ನಡುವೆಯೂ ಅಂತರ್ ಧರ್ಮಿಯ ವಿವಾಹವಾಗಿದ್ದ, ದಿಲ್ಷಾತ್ ತನ್ನ ಹೆಸರನ್ನ ಬಳಿಕ ಕವಿತಾ ಅಂತ ಬದಲಿಸಿಕೊಂಡಿದ್ದಳು. ದಂಪತಿಗೆ ಎರಡು ಹೆಣ್ಣು ಮಕ್ಕಳಿವೆ.
