ಉದಯವಾಹಿನಿ, ಕೆಲವು ಹಸಿರು ತರಕಾರಿಗಳು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು. ಅವುಗಳನ್ನು ತಿನ್ನುವುದರಿಂದ ಕಿಡ್ನಿ ಸ್ಟೋನ್ನಿಂದ ಹಿಡಿದು ಲಿವರ್ ಹಾನಿಯವರೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅದರಲ್ಲೂ ಈ ಮೂರು ರೀತಿಯ ತರಕಾರಿಗಳು ಆರೋಗ್ಯಕ್ಕೆ ಅಪಾಯಕಾರಿ ಆಗಿದೆ. ಹಾಗಾದ್ರೆ ಆ ತರಕಾರಿಗಳು ಯಾವುವು ಎಂದು ತಿಳಿಯೋಣ ಬನ್ನಿ. ರೋಗ್ಯಕರ ಹಸಿರು ತರಕಾರಿಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಸಿರು ತರಕಾರಿಗಳು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಇವು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತವೆ.

ಹಸಿರು ತರಕಾರಿಗಳನ್ನು ತಿನ್ನುವುದು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಕ್ಯಾರೆಟ್ ಮತ್ತು ಮೂಲಂಗಿ ಸೇರಿದಂತೆ ಅನೇಕ ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಕೆಲವು ತರಕಾರಿಗಳು ಮೂತ್ರಪಿಂಡಗಳಿಗೆ ಹಾನಿ ಮಾಡಬಹುದು. ಕೆಲವು ಹಸಿರು ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು. ಈ ತರಕಾರಿಗಳಲ್ಲಿ ಬ್ಯಾಕ್ಟೀರಿಯಾ, ಟೇಪ್‌ವರ್ಮ್‌ಗಳು (ಅಕಶೇರುಕ ಪರೋಪಜೀವಿ ಹುಳು) ಮೊಟ್ಟೆಗಳು ಇರಬಹುದು. ಈ ತರಕಾರಿಗಳನ್ನು ಅಪ್ಪಿತಪ್ಪಿ ಸೇವಿಸಿದರೆ, ಅಕಶೇರುಕ ಪರೋಪಜೀವಿ ಹುಳುಗಳ ಮೊಟ್ಟೆಗಳು ಕರುಳಿನಿಂದ ರಕ್ತ ಮತ್ತು ಮೆದುಳಿಗೆ ಚಲಿಸಬಹುದು. ಇದು ಮೂತ್ರಪಿಂಡಗಳು ಸೇರಿದಂತೆ ದೇಹದ ಅನೇಕ ಅಂಗಗಳನ್ನು ಹಾನಿಗೊಳಿಸಬಹುದು.
ಟ್ಯೂಸ್: ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಲೆಟ್ಯೂಸ್ ಅನ್ನು ಹಸಿಯಾಗಿ ತಿನ್ನಬಾರದು. ಲೆಟ್ಯೂಸ್ ನಲ್ಲಿ ಆಕ್ಸಲೇಟ್ ಗಳಿದ್ದು, ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಲೆಟ್ಯೂಸ್ ಎಲೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ತಿನ್ನುವ ಮೊದಲು ಬೇಯಿಸಿ. ಎಲೆಕೋಸಿನಲ್ಲಿಯೂ ಇರಬಹುದು: ಟೇಪ್ ವರ್ಮ್ ಮೊಟ್ಟೆಗಳು ಅಥವಾ ಲಾರ್ವಾಗಳು. ಈ ಹುಳುಗಳು ಬರಿಗಣ್ಣಿಗೆ ಕಾಣಿಸುವುದಿಲ್ಲ, ಆದ್ದರಿಂದ ಅವುಗಳನ್ನು ತಿನ್ನುವುದು ಅಪಾಯಕಾರಿ ಆಗಿದೆ. ಟೇಪ್ ವರ್ಮ್ ರಕ್ತ ಪ್ರವಾಹಕ್ಕೆ ಪ್ರವೇಶಿಸಿದರೆ, ಅದು ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾಗಿ ತಿನ್ನುವ ಮೊದಲು ಯಾವಾಗಲೂ ಎಲೆಕೋಸನ್ನು ಸ್ವಚ್ಛಗೊಳಿಸಿ, ನಂತರ ಬೇಯಿಸಿ ತಿನ್ನುವುದು ಉತ್ತಮ.

Leave a Reply

Your email address will not be published. Required fields are marked *

error: Content is protected !!