ಉದಯವಾಹಿನಿ, ಗುಣಮಂ ಹಿಜಾಕ್ಸ್ ದಕ್ಷಿಣ ಸುಡಾನ್‌ನಲ್ಲಿ ನೆರವು ವಿಮಾನವನ್ನು ಅಪಹರಿಸಲಾಗಿದೆ. ಅಪಹರಣಕಾರ ವಿಮಾನವನ್ನು ಚಾಡ್‌ಗೆ ತಿರುಗಿಸುವಂತೆ ಪೈಲಟ್‌ಗೆ ಬೆದರಿಕೆ ಹಾಕಿದ್ದ. ಆದರೆ ಪೈಲಟ್ ಬುದ್ಧಿವಂತಿಕೆಯಿಂದ ವಿಮಾನಕ್ಕೆ ಇಂಧನ ತುಂಬಿಸಬೇಕಾಗಿದೆ ಎಂದು ಹೇಳಿ, ಬೇರೆ ಸ್ಥಳಕ್ಕೆ ತಿರುಗಿಸಿದ್ದು, ಇದೀಗ ಆರೋಪಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಸೂಡಾನ್ ಅಧಿಕಾರಿಗಳ ಪ್ರಕಾರ, ಮಂಗಳವಾರ ಸೆಸ್ನಾ ಗ್ರ್ಯಾಂಡ್ ಕ್ಯಾರವಾನ್ ರಾಜಧಾನಿ ಜುಬಾದಿಂದ ಮೈವುಟ್ ಕೌಂಟಿಗೆ ವೈದ್ಯಕೀಯ ಸಾಮಗ್ರಿ ತಲುಪಿಸುತ್ತಿತ್ತು. ಅಲ್ಲಿ ಬಡ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಬಂದೂಕು ಹಿಡಿದ ವ್ಯಕ್ತಿಯೊಬ್ಬ ವಿಮಾನ ಟೇಕ್ ಆಫ್ ಆಗುವ ಮೊದಲು ವಿಮಾನ ಪ್ರವೇಶಿಸಿ ಹಿಂಭಾಗದ ಕ್ಯಾಬಿನ್‌ನಲ್ಲಿ ಅಡಗಿಕೊಂಡಿದ್ದಾನೆ. ಆರೋಪಿಯನ್ನು ಅಬೈ ಪ್ರದೇಶದ ಯಾಸಿರ್ ಮೊಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದೆ. ವಿಮಾನ ಹಾರಾಟದಲ್ಲಿದ್ದಾಗ ಯಾಸಿರ್ ಪೈಲಟ್‌ಗೆ ಬೆದರಿಕೆ ಹಾಕಿದ್ದಾನೆ. ವಿಮಾನವನ್ನು ಆಫ್ರಿಕನ್ ದೇಶವಾದ ಚಾಡ್‌ಗೆ ತಿರುಗಿಸುವಂತೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ವಿಮಾನವು ಕೆಲವು ಗಂಟೆಗಳ ಕಾಲ ಆಗಸದಲ್ಲೇ ಸುತ್ತುತ್ತಿತ್ತು.
ಪೈಲಟ್ ಚಾಣಕ್ಷತನ: ಅಪಹರಣದ ನಂತರ ಪೈಲಟ್ ಚಾಣಕ್ಷತನ ಮೆರೆದಿದ್ದಾರೆ. ವಿಮಾನಕ್ಕೆ ಇಂಧನ ತುಂಬಿಸಬೇಕಾಗಿದೆ ಎಂದು ಅಪಹರಣಕಾರನಿಗೆ ಅವರು ಹೇಳಿದ್ದಾರೆ. ಆದರೆ ಪೈಲಟ್ ಸೂಚಿಸಿದ ಸ್ಥಳಕ್ಕೆ ಬದಲಾಗಿ ಕಂದಕದಲ್ಲಿ ಇಳಿಸಲಾಗಿದೆ. ಇದಕ್ಕೂ ಮುನ್ನ ಪೈಲೆಟ್ ಹೇಗೋ ಉಪಾಯದಿಂದ ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಶಂಕಿತನನ್ನು ಬಂಧಿಸಿದ್ದಾರೆ. ವಿಮಾನ ಅಪಹರಣಕ್ಕೆ ಕಾರಣವೇನೆಂಜು ಸದ್ಯಕ್ಕೆ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ತನಿಖೆ ಆರಂಭಿಸಲಾಗಿದೆ. ಶಂಕಿತ ವ್ಯಕ್ತಿ ಜುಬಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಏರ್ ಚಾರ್ಟರ್ ಕಂಪನಿಯ ಲೋಗೋ ಇರುವ ಶರ್ಟ್ ಧರಿಸಿದ್ದ. ಆ ಕಂಪನಿಯಲ್ಲಿ ಆತ ಯಾವುದೇ ಕರ್ತವ್ಯಗಳನ್ನು ನಿರ್ವಹಿಸಿಲ್ಲ ಎಂದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
