ಉದಯವಾಹಿನಿ ಕೆಂಭಾವಿ: ಪಟ್ಟಣ ಒಳಗೆ ಸಂಚರಿಸುವ ಸರಕಾರಿ ಬಸ್‌ಗಳಿಗೆ ಸಮಯ ನಿಗದಿ ಪಡಿಸಿ ಆಟೋ ಚಾಲಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಟೋ ಚಾಲಕರ ಸಂಘ ಆಗ್ರಹಿಸಿದೆ.
ಈ ಕುರಿತು ಕೆಕೆಆರ್‌ಟಿಸಿ ವ್ಯವಸ್ಥಾಪಕರಿಗೆ ಪತ್ರ ಬರೆದು ಮನವಿ ಮಾಡಿರುವ ಅವರು, ಪಟ್ಟಣದಲ್ಲಿ ಕನಿಷ್ಠ 35 ಆಟೋಗಳು ಸಾರ್ವಜನಿಕ ಸೇವೆ ಮಾಡುತ್ತಾ ಅವರು ಕೊಟ್ಟ ಹಣದಿಂದ ಕುಟುಂಬ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದೆವೆ. ಈಚೆಗೆ ಸರಕಾರಿ ಬಸ್‌ಗಳು ನೇರವಾಗಿ ಬಸ್ ನಿಲ್ದಾಣಕ್ಕೆ ಹೋಗದೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮನೆ ಮನೆಗೆ ಇಳಿಸಲು ಅನುಮತಿ ನೀಡಲಾಗಿದೆ.
ಇದೊಂದು ಒಳ್ಳೆಯ ವಿಚಾರ, ಸರಕಾರಿ ಬಸ್ ಸೇವೆ ಪ್ರತಿಯೊಬ್ಬರಿಗೂ ಸಿಗುವದು ಸಂತೋಷದ ವಿಷಯ. ಆದರೆ ಆಟೋಗಳನ್ನೆ ನಂಬಿ ಜೀವನ ಸಾಗಿಸುತ್ತಿರುವ ನಮ್ಮಂತ ಬಡ ಕುಟುಂಬಗಳು ನ್ಯಾಯಯುತವಾಗಿ ದುಡಿದು ಬದುಕುವದಕ್ಕೆ ಸಹಕರಿಸುವದು ಕೂಡ ಸರಕಾರದ ಕರ್ತವ್ಯವಾಗಿದೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಪ್ರತಿದಿನ ಮುಂಜಾನೆ ಹಾಗೂ ಸಾಯಂಕಾಲ ಮಾತ್ರ ಪಟ್ಟಣದ ಒಳಗೆ ಬಸ್ ಸಂಚಾರಕ್ಕೆ ಅನುಮತಿ ಕೊಟ್ಟು ಉಳಿದ ಸಮಯದಲ್ಲಿ ನೇರವಾಗಿ ಬಸ್ ನಿಲ್ದಾಣಕ್ಕೆ ಹೋಗುವಂತೆ ಕ್ರಮ ವಹಿಸಿ ನಮಗೆ ಹಾಗೂ ನಮ್ಮ ಕುಟುಂಬಗಳಿಗೆ ಸಹಾಯ ಮಾಡಬೇಕೆಂದು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಕಿರಣ ಭಜಂತ್ರಿ, ತಾಹೇರಸಾಬ ಲಾಲಬಂದಿ, ಕಾಶಿಮಸಾಬ, ಅಬ್ದುಲ್‌ಗೌಸ್ ಲಿಮ್ರಾ, ಅಬ್ದುಲ್ ಕರಿಂ, ಮೀರಾಜ, ಮಲ್ಲಪ್ಪ ಬಸರಿಗಿಡ, ಸೋಮು, ರಾಜು ಮೋಪಗಾರ, ಮಲ್ಲು ದೊರೆ, ಅನಿಲ ದೊರೆ, ಶರಣು, ಸಲೀಂ ಚೌದ್ರಿ, ಚಾಂದಪಾಶಾ, ತಿರುಪತಿ, ಶರಣು ಪಾಟೀಲ, ಮಿಟ್ಟು ಪಟೇಲ, ರಬ್ಬಾನಿ, ನಾಗರಾಜ ಬಡಿಗೇರ, ಮಲ್ಲು ಬಾವಿಮನಿ, ರಫೀಕ, ಶರೀಫ್, ನಾಗರಾಜ, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.
ಕೋಟ್ : ಪ್ರತಿ ತಿಂಗಳು ಆರು ಸಾವಿರದಿಂದ ಎಂಟು ಸಾವಿರ ರೂಪಾಯಿಗಳ ವರೆಗೆ ಆಟೋ ಲೋನ್ ತುಂಬಬೇಕು. ಆಟೋಗಳು ನಡೆಯದಿದ್ದರೆ ಸಾಲ ಎಲ್ಲಿಂದ ತುಂಬುವದು. ನಮ್ಮ ಜೀವನ ಬೀದಿಗೆ ಬರುತ್ತದೆ. ಇದಕ್ಕೆಲ್ಲ ಸರಕಾರನೆ ನೇರ ಹೊಣೆಯಾಗಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!