ಉದಯವಾಹಿನಿ ಜೇವರ್ಗಿ : ನಾವು ಆಡಿದ್ದೇ ಆಟ ನಡೆದಿದ್ದೇ ದಾರಿ ಎಂಬ ಅಹಂನಲ್ಲಿದ್ದ ವಸತಿ ನಿಲಯದ ನೌಕರ ಹಾಗೂ ಅಧಿಕಾರಿಗಳಿಗೆ ಶಾಸಕ ಡಾ.ಅಜಯಸಿಂಗ್ ವಸತಿ ನಿಲಯಗಳಿಗೆ ಅನೀರಿಕ್ಷಿತ ಭೇಟಿ ನೀಡಿ ನಿಲಯದ ಅನುಪಸ್ಥಿತಿ ಇದ್ದ ನೌಕರ ಹಾಗೂ ಅಧೀಕಾರಿಗಳಿಗೆ ಚಾಟಿ ಬೀಸಿ ಖಡಕ್ ಎಚ್ಚರಿಕೆ ನೀಡಿದ ಪ್ರಸಂಗ ಶನಿವಾರ ನಡೆಯಿತು.
ಶನಿವಾರ ಬೆಳಗಿನ ಜಾವ ದಿಂದಲೆ ಮಿಂಚಿನ ಸಂಚಾರ ನಡೆಸಿದ ಶಾಸಕ ಡಾ.ಅಜಯಸಿಂಗ್ ಅವರು ಪಟ್ಟಣದ ಹೊರವಲಯದ ಕಲಬುರಗಿ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ಭೇಟಿ ನೀಡಿ ಅಡುಗೆಕೊಣೆ, ಶೌಚಾಲಯ, ಸ್ನಾನಗ್ರಹ ಸೇರಿದಂತೆ ವಿದ್ಯಾರ್ಥಿಗಳ ವಸತಿ ಕೊಣೆಗಳಿಗೆ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆ ಕಂಡು ದಂಗಾದ ಶಾಸಕರು ಅಧಿಕಾರಿ ಹಾಗೂ ನೌಕರ ವರ್ಗವನ್ನು ಕರೆಯುವಂತೆ ಸೂಚಿಸಿದರು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸರ್ ಈ ವಸತಿ ನಿಲಯಕ್ಕೆ ಕಳೆದ ಮೂರು ತಿಂಗಳಿ0ದ ಮೇಲ್ವಿಚಾರಕರಾಗಲಿ ಅಧಿಕಾರಿಗಳಾಗಲಿ ಸುಳಿದಿಲ್ಲ.
ಶೌಚಾಲಯ, ಸ್ನಾನಗ್ರಹ, ಬಿಸಿನೀರಿನ ವ್ಯವಸ್ಥೆ ಇಲ್ಲ ಊಟವಂತು ಕಳಪೆ ಮಟ್ಟದ್ದೇ ನೀಡಲಾಗುತ್ತಿದೆ. ಇಲ್ಲಿ ಎರಡು ವಸತಿ ನಿಲಯಗಳಿದ್ದು ಎರಡು ವಸತಿ ನಿಲಯಕ್ಕೆ ನೌಕರರು ಬರುವುದಿಲ್ಲ. ಹಾಗೂ ಆರು ಜನ ಅಡುಗೆ ಸಿಬ್ಬಂದಿಗಳಿದ್ದು ಎರಡು ವಸತಿ ನಿಲಯಗಳ ಮಧ್ಯೆ ಕೆವಲ ಮೂರು ಜನ ಅಡುಗೆ ಸಿಬ್ಬಂದಿ ಬರುತ್ತಾರೆ. ಇಲ್ಲಿ ಗುಣಮಟ್ಟದ ಊಟ ಗಗನ ಕುಸುಮವಾಗಿದೆ. ಸರಿಯಾದ ಹಾಗೂ ಗುಣಮಟ್ಟದ ಊಟ ನಮಗೆ ಸಿಗುವಂತೆ ಮಾಡಿ ಸರ್ ಎಂದು ಶಾಸಕ ಡಾ.ಅಜಯಸಿಂಗ್ ಅವರಿಗೆ ವಿದ್ಯಾರ್ಥಿಗಳು ತಮ್ಮ ಅಳಲು ತೊಡಿಕೊಂಡರು.
ನAತರ ಶಾಸಕರು ಆಹಾರ ಧಾನ್ಯ ಸಂಗ್ರಹ ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಒಂದೇ ಒಂದು ತರಕಾರಿ ಹಾಗೂ ಆಹಾರ ಧಾನ್ಯ ಕಾಣಿಸಲಿಲ್ಲ. ಹೋಗಲಿ ಕಡತಗಳನ್ನು ನೋಡಲು ಯಾವುದೇ ಕಡತಗಳು ಸಿಗಲಿಲ್ಲ. ಹೀಗಾಗಿ ದೂರವಾಣಿ ಮೂಲಕ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅವ್ಯವಸ್ಥೆಯ ಕುರಿತು ಕೆಂಡ ಕಾರಿದ ಶಾಸಕರು ಶೀಘ್ರದಲ್ಲಿ ವಸತಿ ನಿಲಯಗಳನ್ನು ಸುಧಾರಿಸಿ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯ ಹಾಗೂ ಗುಣಮಟ್ಟದ ಊಟ ಕಲ್ಪಿಸಬೇಕು. ಸರ್ಕಾರ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದೇ ನಿಮಂತಹ ಅಧಿಕಾರಿಗಳಿಂದ ಸರ್ಕಾರದ ಯೋಜನೆ ಸಕಾರ ಗೊಳ್ಳುತ್ತಿಲ್ಲ. ತಾವು ಕ್ಷೇತ್ರದ ಪ್ರತಿಯೊಂದು ವಸತಿ ನಿಲಯಗಳಿಗೂ ಅನಿರಿಕ್ಷಿತವಾಗಿ ಭೇಟಿ ನೀಡುತ್ತೆನೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಹಾಗೂ ಸೌಲಭ್ಯದ ಕುರಿತು ಲೋಪದೋಷ ಕಂಡು ಬಂದಿದ್ದೆಯಾದರೇ ಯಾವುದೇ ಮುಲಾಜಿಲ್ಲದೇ ಅಮಾನತ್ತಿಗೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡರಾದ ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ವಿಜಯಕುಮಾರ ಹಿರೇಮಠ, ಶಾಂತಪ್ಪ ಕೂಡಲಗಿ, ಲಕ್ಷಿö್ಮÃಕಾಂತ ಕುಲಕರ್ಣಿ, ರಿಯಾಜ ಪಟೇಲ್ ಮುದಬಾಳ, ಇಮ್ರಾನ್ ಕಾಸರಭೋಸಗಾ, ರಫೀಕ್ ಜಮಾದಾರ, ಜಾವೀದ್ ಕುಮನಸಿರಸಿಗಿ ಇದ್ದರು.
