![]()
ಉದಯವಾಹಿನಿ ಮಸ್ಕಿ: ಪಟ್ಟಣದ ಜನತೆಯ ಬಹು ದಿನಗಳ ಬೇಡಿಕೆಯಾದ ಮುದಗಲ್ಲ ಕ್ರಾಸ್‌ದಿಂದ ಎಪಿಎಂಸಿವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕಾಗಿ ಡಿವೈಡರ್ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರವಿಹಾಳ ಅವರು ಭಾನುವಾರ ಬೆಳಿಗ್ಗೆ ಭೂಮಿ ಪೂಜೆ ನೆರವೇರಿಸಿದರು. ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಬಳಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಡಿವೈಡರ್ ರಸ್ತೆ ನಿರ್ಮಾಣದಿಂದಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ, ವಾಹನ ಸವಾರರಿಗೆ ಸಮಯ ಉಳಿತಾಯವಾಗಲಿದೆ, ೧೫೦ಎ ರಾಷ್ಟಿçÃಯ ಹೆದ್ದಾರಿ ಹಾದು ಹೋಗಿರುವುದರಿಂದ ಅತಿ ಹೆಚ್ಚಾಗಿ ವಾಹನಗಳು ಓಡಾಡುತ್ತಿವೆ, ಟ್ರಾಪಿಕ್ ಸಮಸ್ಯೆ ನಿವಾರಣೆಗೆ ಡಿವೈಡರ್ ರಸ್ತೆ ಅಗತ್ಯಯಿದೆ. ಕೆಲವೇ ದಿನಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣವಾಗಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶ್ರೀಶೈಲಪ್ಪ ಬ್ಯಾಳಿ, ಹೆಚ್.ಬಿ ಮುರಾರಿ, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಪ್ರಧಾನ ಕಾರ್ಯದರ್ಶಿ ಕೃಷ್ಣ ಚಿಗರಿ, ನಿರುಪಾದೆಪ್ಪ ವಕೀಲರು, ಶರಣಬಸವ ಮಟ್ಟೂರು, ಸಿದ್ದನಗೌಡ ಮಾಟೂರು, ಅಬ್ದುಲ ಗನಿಸಾಬ, ಮಲ್ಲಯ್ಯ ಮುರಾರಿ, ನೂರ ಅಮ್ಮದ್, ಆನಂದ ವೀರಾಪೂರ, ವೀರಭದ್ರ ಅಂಗಡಿ, ಶಿವರೆಡ್ಡಿ, ಮಲ್ಲಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತಿರಿದ್ದರು.
