ಉದಯವಾಹಿನಿ, ಬೀಜಿಂಗ್ : ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೆಲವೊಂದು ದೃಶ್ಯಗಳು ಆಕ್ರೋಶಕ್ಕೆ ಒಳಗಾಗುವಂತೆ ಮಾಡಿದರೂ ಕೆಲವು ಸನ್ನಿವೇಶಗಳು ಮನಸನ್ನು ಗೆದ್ದು ಬಿಡುತ್ತವೆ. ಅಂತಹ ವಿಡಿಯೊಗಳಲ್ಲಿ ಇದು ಕೂಡ ಒಂದು. ಸಾರ್ವಜನಿಕ ಸ್ಥಳವೊಂದರಲ್ಲಿ ಮಹಿಳೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಸಬ್‌ವೇ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬರು ಚೆಲ್ಲಿದ ಟೀ ಸ್ವಚ್ಛಗೊಳಿಸಲು ತನ್ನದೇ ಸ್ಕಾರ್ಫ್ ಬಳಸಿರುವ ದೃಶ್ಯ ಭಾರಿ ವೈರಲ್ ಆಗಿದೆ. ಈ ಒಂದು ಸಣ್ಣ ನಾಗರಿಕ ಜವಾಬ್ದಾರಿಯ ದೃಶ್ಯವು ಪ್ರಶಂಸೆಗೆ ಪಾತ್ರವಾಗಿದೆ.

ಸಬ್‌ವೇ ರೈಲಿನ ನೆಲದ ಮೇಲೆ ಆಕಸ್ಮಿಕವಾಗಿ ಮಹಿಳೆಯ ಕೈಯಿಂದ ಚಹಾ ಚೆಲ್ಲಿತು. ಇದನ್ನು ಸ್ವಚ್ಛಗೊಳಿಸಲು ಮಹಿಳೆ ತಾನು ಧರಿಸಿದ್ದ ಸ್ಕಾರ್ಫ್ ಅನ್ನೇ ಬಳಸಿದ್ದಾರೆ. ಸದ್ಯ ಆಕೆಯ ಪ್ರಾಮಾಣಿಕತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಜಿಯಾಂಗ್ಸು ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ವಿಡಿಯೊದಲ್ಲಿ ಚೀನಾದ ಮಹಿಳೆಯೊಬ್ಬರು ಸಬ್‌ವೇ ರೈಲಿನ ನೆಲವನ್ನು ತನ್ನದೇ ಸ್ಕಾರ್ಫ್‌ನಿಂದ ಒರೆಸುತ್ತಿರುವ ದೃಶ್ಯ ನೀವು ಗಮನಿಸಬಹುದು.
ಸಬ್‌ವೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ‌ ಟೀ ಆಕಸ್ಮಿಕವಾಗಿ ನೆಲದ ಮೇಲೆ ಚೆಲ್ಲಿ ಹೋಗಿತ್ತು. ಸುತ್ತಲೂ ಸ್ವಚ್ಛಗೊಳಿಸಲು ಸಾಕಷ್ಟು ಟಿಶ್ಯೂ ಇಲ್ಲದೆ ಇದ್ದಾಗ ಇತರ ಪ್ರಯಾಣಿಕರಿಗೆ ಅನಾನುಕೂಲವಾಗಬಾರದೆಂದು ಅವರು ತಕ್ಷಣವೇ ಧರಿಸಿದ್ದ ಸ್ಕಾರ್ಫ್ ಅನ್ನು ತೆಗೆದು ಕ್ಲೀನ್‌ ಮಾಡಿದ್ದಾರೆ. ಈ ದೃಶ್ಯವನ್ನು ಅಲ್ಲಿದ್ದ ಪ್ರಯಾಣಿಕರು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಹಿಳೆಯ ಈ ಜವಾಬ್ದಾರಿಯುತ ನಡವಳಿಕೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬರೂ ಈ ರೀತಿಯ ಸಾರ್ವಜನಿಕ ಪರಿಜ್ಞಾನ ವನ್ನು ಬೆಳೆಸಿಕೊಳ್ಳಬೇಕು ಎಂದು ಒಬ್ಬರು ಪ್ರಶಂಸಿದ್ದಾರೆ.‌ ಮತ್ತೊಬ್ಬರು ಪ್ರಮಾಣಿಕ ಮಹಿಳೆಯ ಅತೀ ಉತ್ತಮ ನಡವಳಿಕೆ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ತಮ್ಮ ಬಾಸ್ ಕಚೇರಿಯಲ್ಲಿ ನೀರು ಚೆಲ್ಲಿದ್ದಾಗ ಸ್ವತಃ ಅವರೇ ಕ್ಲೀನ್‌ ಮಾಡಿಕೊಂಡ ಘಟನೆ ನೆನಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!