ಉದಯವಾಹಿನಿ, ಗ್ರೀನ್​ ಟೀ ಕುಡಿಯಲು ಯಾವ ಸಮಯ ಬೆಸ್ಟ್:​ ಬೆಳಗ್ಗೆ ಇಲ್ಲವೇ ಸಂಜೆಯೇ? ತಜ್ಞರು ತಿಳಿಸುವುದೇನು?ಉದಯವಾಹಿನಿ, ಬೆಳಿಗ್ಗೆ ಒಂದು ಕಪ್ ಗ್ರೀನ್ ಟೀ ಕುಡಿಯುವುದರಿಂದ ಸಕ್ರಿಯವಾಗಿರಲು ಸಾಧ್ಯವಾಗುತ್ತದೆ. ಊಟದ ಬಳಿಕ ಗ್ರೀನ್​ ಟೀ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆಯೇ? ಗ್ರೀನ್​ ಟೀಯಲ್ಲಿ ಕೆಫೀನ್ ಮತ್ತು ಕ್ಯಾಟೆಚಿನ್‌ಗಳ ಸಂಯೋಜನೆಯು ಚಯಾಪಚಯ ಕ್ರಿಯೆಯನ್ನು ವೃದ್ಧಿಸಲು ಹಾಗೂ ಕೊಬ್ಬನ್ನು ಸುಡಲು ತುಂಬಾ ಸಹಾಯ ಮಾಡುತ್ತದೆ.

ಗ್ರೀನ್​ ಟೀ ಸರಿಯಾದ ಸಮಯದಲ್ಲಿ ಕುಡಿಯುವ ಮೂಲಕ ಇದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು. ಬೆಳಿಗ್ಗೆ ಇಲ್ಲವೇ ಸಂಜೆ ಸಮಯದಲ್ಲಿ ಗ್ರೀನ್​ ಟೀ ಸೇವಿಸಿದಾಗ ಲಭಿಸುವ ಪ್ರಯೋಜನಗಳಲ್ಲಿ ಆಗುವ ವ್ಯತ್ಯಾಸಗಳೇನು ಎಂಬುದನ್ನು ವಿವರವಾಗಿ ತಿಳಿಯೋಣ. ಗ್ರೀನ್​ ಟೀ ಯಾವ ಸಮಯದಲ್ಲಿ ಸೇವಿಸಬೇಕು?: ಗ್ರೀನ್​ ಟೀಯಲ್ಲಿ ಕೆಫೀನ್ ಮತ್ತು ಎಲ್-ಥಿಯಾನೈನ್ ಸಂಯೋಜನೆಯು ಚಯಾಪಚಯವನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ತುಂಬಾ ಸಹಾಯ ಮಾಡುತ್ತದೆ. ಆರೋಗ್ಯದ ಪ್ರಯೋಜನ ಲಭಿಸಬೇಕಾದರೆ ದಿನದ ಯಾವ ಸಮಯದಲ್ಲಿ ಗ್ರೀನ್​ ಟೀ ಸೇವಿಸಬೇಕು ಎನ್ನುವುದು ಅವಲಂಬಿಸಿ ಬದಲಾವಣೆಯಾಗುತ್ತದೆ.

ಬೆಳಿಗ್ಗೆ ಗ್ರೀನ್​ ಟೀ ಸೇವಿಸುವುದರಿಂದ ಲಾಭಗಳು: ಕೆಫೀನ್, ಎಲ್-ಥಿಯಾನೈನ್ ಸಂಯೋಜನೆಯು ಸಕ್ರಿಯವಾಗಿರುವಂತೆ ಮಾಡುತ್ತದೆ. ದಿನದಲ್ಲಿ ಈ ಪರಿವರ್ತನೆಗೊಳ್ಳುತ್ತಿದ್ದಂತೆ ಇದು ಸುಲಭವಾಗಿ ಗಮನಹರಿಸಲು ಸಹಾಯ ಮಾಡುತ್ತದೆ. ಬೆಳಗಿನ ಉಪಹಾರದೊಂದಿಗೆ ಗ್ರೀನ್​ ಟೀ ಸೇವಿಸುವುದರಿಂದ ಇನ್ಸುಲಿನ್ ಪ್ರಮಾಣ ಕಡಿಮೆಯಾಗಬಹುದು.ಸುಲಭವಾದ ಜೀರ್ಣಕ್ರಿಯೆ: ಜೀರ್ಣಾಂಗ ವ್ಯವಸ್ಥೆಯು ಸಾಮಾನ್ಯವಾಗಿ ದಿನದ ಆರಂಭದಲ್ಲಿ ಹೆಚ್ಚು ಸಕ್ರಿಯವಾಗಿರುವುದರಿಂದ ಜೀರ್ಣಕಾರಿ ಪ್ರತಿಕ್ರಿಯೆ ಸುಲಭವಾಗುತ್ತದೆ. ಗ್ರೀನ್​ ಟೀ ಬೆಳಿಗ್ಗೆ ಸಮಯದಲ್ಲಿ ಸೇವನೆ ಮಾಡುದರಿಂದ ಕೊಬ್ಬಿನ ಆಕ್ಸಿಡೀಕರಣದ ಮೇಲೆ ಪರಿಣಾಮ ಬೀರುತ್ತದೆ.

ಸಂಜೆ ಗ್ರೀನ್​ ಟೀ ಕುಡಿಯುವುದರ ಲಾಭಗಳು: ಸಂಜೆ ಗ್ರೀನ್​ ಟೀ ಕುಡಿಯುವುದರಿಂದ ಕೆಲವರಿಗೆ ಆಹ್ಲಾದಕರ ಹಾಗೂ ಶಾಂತವಾಗಿರಲು ಸಹಾಯವಾಗುತ್ತದೆ. ಇನ್ನು ರಾತ್ರಿ ಊಟದ ಬಳಿಕ ಗ್ಲೂಕೋಸ್ ಕಡಿಮೆಯಾಗಬಹುದು. ಇದು ವೈಯಕ್ತಿಕ ಚಯಾಪಚಯ ಕ್ರಿಯೆಯನ್ನು ಅವಲಂಬಿಸಿದೆ. ಊಟದ ಬಳಿಕ ಆಲಸ್ಯ ಅಥವಾ ಹೊಟ್ಟೆ ಉಬ್ಬರ ಅನುಭವಿಸುವವರಿಗೆ ಇದರಿಂದ ಪರಿಹಾರ ದೊರೆಯಬಹುದು. ಕೆಫೀನ್‌ಗೆ ಸೂಕ್ಷ್ಮವಾಗಿರುವವರು ಅಥವಾ ಚೆನ್ನಾಗಿ ನಿದ್ರೆ ಮಾಡದವರು ನಿದ್ರಾ ಭಂಗವನ್ನು ಅನುಭವಿಸುವ ಸಾಧ್ಯತೆ ಹೆಚ್ಚು.ಬೆಳಿಗ್ಗೆ- ಸಂಜೆ ಗ್ರೀನ್​ ಟೀ ಕುಡಿಯುವುದರ ವ್ಯತ್ಯಾಸಗಳೇನು?: ಗ್ರೀನ್ ಟೀ ವಿಭಿನ್ನ ಪರಿಣಾಮಗಳನ್ನು ನರವೈಜ್ಞಾನಿಕ, ಚಯಾಪಚಯ, ಜೀರ್ಣಕಾರಿ ಪ್ರತಿಕ್ರಿಯೆಗಳ ಆಧಾರದ ಮೇಲೆ ವಿಂಗಡನೆ ಮಾಡಲಾಗಿದೆ. ಕೆಫೀನ್ ಮತ್ತು ಎಲ್-ಥಿಯಾನೈನ್ ಸಂಯೋಜನೆಯ ಮೂಲಕ ಸಕ್ರಿಯವಾಗಿಸಲು, ಮಾನಸಿಕ ಗಮನವನ್ನು ಬೆಂಬಲಿಸುತ್ತದೆ. ಮೊದಲಿಗೆ ಶಾಂತತೆಯ ಅನುಭವವಾಗಬಹುದು, ಆದರೆ ಸೂಕ್ಷ್ಮತೆ ಇರುವವರಲ್ಲಿ ನಿದ್ರೆಗೆ ಅಡ್ಡಿಯಾಗಬಹುದು ಎಂದು ತಜ್ಞರು ತಿಳಿಸುತ್ತಾರೆ.ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮಗಳೇನು?: ಗ್ರೀನ್​ ಟೀಯನ್ನು ಉಪಹಾರದೊಂದಿಗೆ ಸೇವಿಸಿದಾಗ ಗರಿಷ್ಠ ಇನ್ಸುಲಿನ್ ಪ್ರತಿಕ್ರಿಯೆಯನ್ನು ಕಡಿಮೆ ಮಾಡಬಹುದು. ವೈಯಕ್ತಿಕ ಚಯಾಪಚಯ ಕ್ರಿಯೆಯನ್ನು ಅವಲಂಬಿಸಿ, ಕೆಲವು ಸಂದರ್ಭಗಳಲ್ಲಿ ಊಟದ ಬಳಿಕ ಗ್ಲೂಕೋಸ್ ಅನ್ನು ಕಡಿಮೆ ಮಾಡಬಹುದು. ಜೀರ್ಣಾಂಗ ವ್ಯವಸ್ಥೆಯು ಸಕ್ರಿಯವಾಗಿರುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಊಟದ ಬಳಿಕ ಹೊಟ್ಟೆ ಭಾರವಾದ ಅನುಭವಕ್ಕೆ ಇದರಿಂದ ಪರಿಹಾರವನ್ನು ನೀಡಬಹುದು.

Leave a Reply

Your email address will not be published. Required fields are marked *

error: Content is protected !!