ಉದಯವಾಹಿನಿ, ಕೋಳಿ ಸಾರು , ಕೋಳಿ ಫ್ರೈ ಎಲ್ಲಾ ಸಾಮಾನ್ಯವಾಗಿ ತಿಂದಿರುತ್ತೀರಿ. ಆದರೆ ನೀವು ಎಂದಾದರೂ ಕೋಳಿ ಕಜ್ಜಾಯ ತಿಂದಿದ್ದೀರಾ..? ಹೌದು ಮಲೆನಾಡು ಶೈಲಿಯ ಈ ಕೋಳಿ ಕಜ್ಜಾಯ ಅತ್ಯಂತ ವಿಶಿಷ್ಟವಾದ ಮತ್ತು ಅತೀ ಹೆಚ್ಚಾಗಿ ಮಾಡುವ ತಿಂಡಿಯಾಗಿದೆ. ಇದನ್ನು ಮಲೆನಾಡಿನ ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ಸಮಾರಂಭಗಳಲ್ಲಿ ತಯಾರಿಸಲಾಗುತ್ತದೆ. ಕೋಡು ಬಳೆಯಂತಹ ಬಿಸಿ ಬಿಸಿ ಕಜ್ಜಾಯ. ನೆಚ್ಚಿಕೊಳ್ಳೋದಕ್ಕೆ ರುಚಿ ರುಚಿಯಾದ ಕೋಳಿ ಸಾರು. ಅದ್ಭುತ ರುಚಿ ನೀಡುತ್ತೆ. ಚಳಿ ಚಳಿ ಹವೆಯಲ್ಲಿ ತಿಳಿ ಕೋಳಿ ಸಾರಿಗೆ ಈ ಕಜ್ಜಾಯ ಸಿಕ್ಕರಂತೂ ಕೇಳೋದೆ ಬೇಡ. ಇಷ್ಟೊಂದು ಶುಚಿ ರುಚಿಯಾದ ಈ ಕಜ್ಜಾಯ ಕೋಳಿ ಸಾರು ಕಾಂಬಿನೇಷನ್ ಮಲೆನಾಡಿನಲ್ಲೂ ತೆರೆ ಮರೆಗೆ ಸರಿಯುತ್ತಿದೆ.
ಹೌದು, ಬಾಯಿ ಚಪ್ಪರಿಸಿದಾಗಲೆಲ್ಲ ಹಳ್ಳಿ ಮಂದಿ ಕೋಳಿ ಸಾರು, ಕಜ್ಜಾಯ ತಿನ್ನೋಕೆ ರೆಡಿ ಇರ್ತಾರೆ. ಸದಾ ಕಾಲ ಕೋಳಿ ಸಾರು, ಬಿಸಿ ಬಿಸಿ ಕಜ್ಜಾಯ ಸವಿಯೋದಕ್ಕೆ ಮಲ್ನಾಡ್ ಮಂದಿಗಂತೂ ಎಲ್ಲಿಲ್ಲದ ಪ್ರೀತಿ. ಉತ್ತರ ಕರ್ನಾಟಕದ ಜನರು ಖಡಕ್ ಜೋಳದ ರೊಟ್ಟಿ ಜೊತೆಗೆ ಖಾರವಾದ ಚಟ್ನಿ ಸವಿದರೆ, ಮಲೆನಾಡಿನ ಜನರಿಗೆ ಕಜ್ಜಾಯದ ಜೊತೆಗೆ ಕೋಳಿ ಸಾರು ಇದ್ದು ಬಿಟ್ಟರೆ ಬೇರೇನೂ ಬೇಕಾಗಿಯೇ ಇಲ್ಲ. ಅಕ್ಕಿ ಹಿಟ್ಟಿನಿಂದ ಮಾಡುವ ವಿಶೇಷ ಖಾದ್ಯವಾಗಿದ್ದು, ಇದು ನೋಡಲು ಕೊಡುಬಳೆ ಆಕಾರದಲ್ಲಿರುತ್ತದೆ. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿಶೇಷವಾದ ಆಹಾರವಿದು. ಈ ಹಬ್ಬ ಹರಿದಿನಗಳು ಈ ಕಜ್ಜಾಯವಿಲ್ಲದೇ ಪೂರ್ಣವಾಗುವುದೇ ಇಲ್ಲ. ಒಮ್ಮೆ ರುಚಿ ಸವಿದರೆ ಮತ್ತೆ ಮತ್ತೆ ಬೇಕೇನಿಸುತ್ತದೆ. ಹಾಗಿದ್ರೆ ಇಷ್ಟೊಂದು ಟೇಸ್ಟಿ ಹಾಗೂ ಸ್ಪೈಸಿ ಆಗಿರೋ ಈ ಕೋಳಿ ಕಜ್ಜಾಯ ಮಾಡೋದು ಹೇಗೆ? ಇಲ್ಲಿದೆ ನೋಡಿ.
