ಉದಯವಾಹಿನಿ, ಚಳಿಗಾಲದಲ್ಲಿ ದೇಹದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಕಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕೆ ಋತುಮಾನದ ಕಾಯಿಲೆಗಳು ಅತಿಯಾಗಿ ಕಾಡುತ್ತವೆ. ಹಸಿರು ತರಕಾರಿಗಳನ್ನು ಚಳಿಗಾಲದಲ್ಲಿ ಹೆಚ್ಚು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರೊಂದಿಗೆ ಅನೇಕ ರೋಗಗಳನ್ನು ಬರದಂತೆ ತಡೆಯಬಹುದು.
ಪೌಷ್ಟಿಕತಜ್ಞೆ ಲಿಮಾ ಮಹಾಜನ್ ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋದಲ್ಲಿ, ಚಳಿಗಾಲದಲ್ಲಿ ಆರೋಗ್ಯಕ್ಕೆ ಪೂರಕವಾದ ತರಕಾರಿಯೊಂದರ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ದಿನಕ್ಕೆ 100 ಗ್ರಾಂನಷ್ಟು ಈ ತರಕಾರಿ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. )
ಈ ತರಕಾರಿ ಯಾವುದು ನಿಮಗೆ ಗೊತ್ತಾ? ಅದುವೇ ತರಕಾರಿ ಮೂಲಂಗಿ ಕಾಯಿ, ಚಳಿಗಾಲದಲ್ಲಿ ಲಭ್ಯವಿರುವ ಸೂಪರ್‌ಫುಡ್ ಇದನ್ನು ಕರೆಯಾಗುತ್ತದೆ. ಮೂಲಂಗಿ ಕಾಯಿಯಿಂದ ಆರೋಗ್ಯಕ್ಕೆ ಪೂರಕವಾದ ಚಟ್ನಿ ತಯಾರಿಸಬಹುದು. ಮೂಲಂಗಿ ಕಾಯಿ ಸೇವಿಸುವುದರಿಂದ ಲಭಿಸುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಲಿವರ್ ಕ್ಲೀನ್ ಮಾಡಲು ಸಹಾಯ: ಮೂಲಂಗಿ ಕಾಯಿ ಯಕೃತ್ತನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿದೆ. ವಿಶೇಷವಾಗಿ ಉರಿಯೂತದ ಕಡಿಮೆ ಮಾಡುವಂತಹ ಗುಣವಿದೆ. ಗ್ಲುಕೋಸಿನೋಲೇಟ್‌ಗಳನ್ನು ಹೊಂದಿರುತ್ತವೆ. ಮೂಲಂಗಿ ಕಾಯಿ ಯಕೃತ್ತಿನ ಶುದ್ಧೀಕರಣವನ್ನು ಬೆಂಬಲಿಸುತ್ತದೆ. ಯಕೃತ್ತಿನ ಜೊತೆಗೆ ದೇಹದಿಂದ ವಿಷವನ್ನು ಹೊರಹಾಕುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಾಲೋಚಿತ ಕಾಯಿಲೆಗಳನ್ನು ದೂರವಿಡುತ್ತದೆ ಎಂದು ತಜ್ಞರು ವಿರಿಸುತ್ತಾರೆ.
ರಕ್ತದಲ್ಲಿನ ಶುಗರ್ ಲೆವೆಲ್ ನಿಯಂತ್ರಣಕ್ಕೆ ಸಹಾಯ: ಮಧುಮೇಹ ಕಾಯಿಲೆ ಅನೇಕ ಜನರನ್ನು ಕಾಡುತ್ತಿದೆ. ಮಧುಮೇಹ ಇರುವವರು ತಾವು ಸೇವನೆ ಮಾಡುವ ಆಹಾರದ ಕುರಿತು ಬಹಳ ಎಚ್ಚರಿಕೆ ವಹಿಸಬೇಕು. ಮನಬಂದಂತೆ ಆಹಾರಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಅನಿಯಂತ್ರಿತವಾಗುತ್ತದೆ. ಮಧುಮೇಹಿಗಳಿಗೆ ಮೂಲಂಗಿ ಕಾಯಿಯು ಉತ್ತಮವಾದ ತರಕಾರಿಯಾಗಿದೆ. ಈ ತರಕಾರಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಮೂಲಂಗಿ ಕಾಯಿಯು ರಕ್ತದಲ್ಲಿನ ಸಕ್ಕರೆಯನ್ನು ವೇಗವಾಗಿ ಹೆಚ್ಚಿಸುವುದಿಲ್ಲ. ಇದರಿಂದ ಮಧುಮೇಹಿಗಳು ಈ ತರಕಾರಿಯನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು ಎಂದು ತಜ್ಞರು ತಿಳಿಸುತ್ತಾರೆ.
