
ಉದಯವಾಹಿನಿ , ಬೆಂಗಳೂರು: ರಾಷ್ಟ್ರದ ವಿರೋಧಪಕ್ಷಗಳ ಸಭೆ ಕೇವಲ ಫೋಟೋಶೂಟ್‍ಗೆ ಮಾತ್ರ ಸೀಮಿತವಾಗಿರುತ್ತದೆ. ಇದರಿಂದಾಗಿ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಮಾಜಿ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ದಾರಿ ಉದ್ದಕ್ಕೂ ಕಾಂಗ್ರೆಸ್ ನಾಯಕರ ದೊಡ್ಡ ದೊಡ್ಡ ಫ್ಲೆಕ್ಸ್‍ಗಳನ್ನೂ ಅಧಿನಕೃತವಾಗಿ ಹಾಕಿ ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶದ ಎಲ್ಲ ವಿಪಕ್ಷ ನಾಯಕರು ಬೆಂಗಳೂರಿನಲ್ಲಿ ನಡೆಸುತ್ತಿರುವ ಸಭೆ ಯಾವುದೇ ಉಪಯೋಗ ಬರುವುದಿಲ್ಲ ಅದು ಕೇವಲ ಫೋಟೋ ಶೂಟ್ ಸೀಮಿತ ಎಂದರು. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಯಾವುದೇ ಸಿದ್ದಾ0ತ ಇಲ್ಲ. ಅವರ ಉದ್ದೇಶ ಒಂದೇ ಹೇಗಾದರೂ ಮಾಡಿ ಮೋದಿಯನ್ನು ಸೋಲಿಸ ಬೇಕೆಂದು ಈ ರೀತಿಯ ಸಭೆಗಳನ್ನು ಮಾಡುತ್ತಿದ್ದಾರೆ.
ಆದರೆ ಪ್ರಧಾನಿ ಮೋದಿಗೆ ದೇಶದ ಜನರ ಆಶೀರ್ವಾದ ಇದೆ. ಅವರು ಅಭಿವೃದ್ಧಿ ಕಾರ್ಯಗಳು ಅವರಿಗೆ ರಕ್ಷಣೆ ನೀಡುತ್ತದೆ. ದೇಶ ಮಾತ್ರವಲ್ಲದೆ ವಿಶ್ವ ನಾಯಕರು ಮೋದಿ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಎಂದರು. ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಗಿದೆ. ದೇಶದ ಅಭಿೃದ್ಧಿಯನ್ನು ಸಹಿಸದೆ ವಿರೋಧ ಪಕ್ಷಗಳು ಕೇವಲ ಮೋದಿಯನ್ನು ಟೀಕಿಸುವುದನ್ನೇ ಕೆಲಸವಾಗಿ ಮಾಡಿಕೊಂಡಿದ್ದಾರೆ ಎಂದರು.
