
(ವರದಿಗಾರರು ಅಯ್ಯಣ್ಣ ಮಾಸ್ಟರ್ ಉದಯವಾಹಿನಿ ಪೀಣ್ಯ ದಾಸರಹಳ್ಳಿ)
ಉದಯವಾಹಿನಿ, ಪೀಣ್ಯ ದಾಸರಹಳ್ಳಿ: ಶಿಕ್ಷಣ ಮೂಲಕ ಮಾನವನ ಭವಿಷ್ಯ ಉಜ್ವಲ ಆಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು. ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ಅಬ್ಬಿಗೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ 2022 – 2023 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಶಾಲೆಯ ಮುಖ್ಯೋಪಾಧ್ಯಾಯನಿ ಹಾಗೂ ಸಿಬ್ಬಂದಿ ವರ್ಗದವರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಶುಭ ಕೋರಿ ಶಾಸಕ ಎಸ್ ಮುನಿರಾಜು ಮಾತನಾಡಿದರು.
ಸ್ಥಳೀಯ ಕಾಂಗ್ರೆಸ್ ಪ್ರಭಾವಿ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಕೆ ನಾಗಭೂಷಣ್ ಮಾತನಾಡಿ ಈಗಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಅನಾವಶ್ಯಕ ವಾಗಿ ಮೊಬೈಲ್ ಟಿವಿ ಕಡೆ ಗಮನ ಹರಿಸಬಾರದು ಪ್ರತಿನಿತ್ಯ ಶಿಕ್ಷಕ ಶಿಕ್ಷಕಿಯರು ಹೇಳಿದ ಪಾಠ ಪ್ರವಚನಗಳು ಅಂದು ಓದಿಕೊಂಡು ತಿಳಿದು ಕೊಂಡು ಮುಂಬರುವ ಪರೀಕ್ಷೆಯಲ್ಲಿ ಅತಿ ಹೆಚ್ಚು ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಶಿಕ್ಷಕ ಶಿಕ್ಷಕಿಯರಿಗೆ ಮತ್ತು ತಂದೆ ತಾಯಿಯರಿಗೆ ಹಾಗೂ ತಮ್ಮ ಊರಿಗೆ ಕೀರ್ತಿ ತರ ಬೇಕು ಎಂದು ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿಕಾಂಗ್ರೇಸ್ ಹಿರಿಯ ರಾಜಕಾರಣಿ ಅಬ್ಬಿಗೆರೆ ರಾಜಣ್ಣ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಜಿ. ರಾಜೇಂದ್ರ, ಬಿಜೆಪಿ ಮಾಜಿ ಅಧ್ಯಕ್ಷ ಅಬ್ಬಿಗೆರೆ ಲೋಕೇಶ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ರಮೇಶ್ ಯಾದವ್,ಜಬ್ಬರ್, ಮಂಜುನಾಥ್, ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ಗೌಡ, ವಿದ್ಯಾರ್ಥಿಗಳು ಪೋಷಕರು ಸಮಸ್ತ ನಾಗರಿಕರು ಇದ್ದರು.
