ಉದಯವಾಹಿನಿ,ಬೆಂಗಳೂರು: ಟೊಮೆಟೊ ಬೆಲೆಯಲ್ಲಿ ಎಂಟು ಪಟ್ಟು ಹೆಚ್ಚಳ ಕಂಡಿದ್ದು, ಇದು ಕೆಲವು ರೈತರನ್ನು ಶ್ರೀಮಂತರನ್ನಾಗಿ ಮಾಡುತ್ತಿದೆ. ಆದರೂ ಮುಂಬರುವ ವಾರಗಳಲ್ಲಿ ಪೂರೈಕೆಯಲ್ಲಿ ಏರಿಕೆಯಾಗುವ ಸಾಧ್ಯತೆಯ ಕಾರಣದಿಂದಾಗಿ ಅವರ ಈ ಲಾಭಗಳು ಅಲ್ಪಕಾಲಿಕವಾಗಿರಬಹುದು.ಒಂದಷ್ಟು ರೈತರು ಕೋಟಿ ರೂಪಾಯಿಗಳ ಲಾಭ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದ ರೈತರೊಬ್ಬರು 2 ಕೋಟಿಗೂ ಹೆಚ್ಚು ಲಾಭ ಗಳಿಸಿದ್ದಾರೆ.
ದೆಹಲಿಯಲ್ಲಿ ಟೊಮೆಟೊ ಚಿಲ್ಲರೆ ಬೆಲೆಗಳು ಒಂದು ಕಿಲೋಗ್ರಾಂಗೆ 178 ರೂಪಾಯಿಗಳಾಗಿದ್ದು, ಜನವರಿ 1 ರಿಂದ 700% ಕ್ಕಿಂತ ಹೆಚ್ಚು ದರ ಹೆಚ್ಚಳವಾಗಿದೆ ಎಂದು ಆಹಾರ ಸಚಿವಾಲಯವು ಸಂಗ್ರಹಿಸಿದ ಮಾಹಿತಿ ನೀಡಿದೆ. ಆ ದಿನ ರಾಷ್ಟ್ರೀಯ ಸರಾಸರಿ ಸುಮಾರು 120 ರೂಪಾಯಿ ಆಗಿತ್ತು.ಟೊಮೆಟೋ ಪೂರೈಕೆಯನ್ನು ಭಾರೀ ಮಳೆ ಅಡ್ಡಿಪಡಿಸಿದ ಕಾರಣ ಬೆಲೆಯಲ್ಲಿ ದಿಢೀರ್ ಏರಿಕೆ ಉಂಟಾಗಿತ್ತು. ಇದರ ಬೆನ್ನಲ್ಲೇ ಅನೇಕ ಕುಟುಂಬಗಳು ತಾತ್ಕಾಲಿಕವಾಗಿ ಟೊಮೆಟೊಗಳನ್ನು ಬಳಸುವುದನ್ನು ತ್ಯಜಿಸಿದ್ದಾರೆ. ಆದರೆ ಟೊಮೆಟೋ ಬೆಳೆಗಾರರು ಬೆಲೆ ಏರಿಕೆಯಿಂದ ಹರ್ಷಗೊಂಡಿದ್ದಾರೆ. ಈವರೆಗೆ ಟೊಮೆಟೊ ಬೆಲೆ ಯಾವಾಗಲೂ ಇಳಿಕೆ ಕಾಣುತ್ತಿತ್ತು.ಮಹಾರಾಷ್ಟ್ರದ ಜುನ್ನಾರ್ ಬಳಿ 12 ಎಕರೆ (4.9 ಹೆಕ್ಟೇರ್) ಭೂಮಿಯಲ್ಲಿ ಟೊಮ್ಯಾಟೊ ಬೆಳೆದಿರುವ ಈಶ್ವರ್ ಗೇಕರ್ ಮತ್ತು ಅವರ ಪತ್ನಿ ಸೋನಾಲಿ ಪ್ರಸಕ್ತ ಋತುವಿನಲ್ಲಿ ಇದುವರೆಗೆ ಸುಮಾರು 24 ಮಿಲಿಯನ್ ರೂಪಾಯಿಗಳ ಲಾಭವನ್ನು ಗಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 1.5 ಮಿಲಿಯನ್ ಹೆಚ್ಚು ಎಂದಿದ್ದಾರೆ.ಟೊಮೆಟೋ ಹೊಲಗಳನ್ನು ನಿರ್ವಹಿಸಲು 60 ರಿಂದ 70 ದೈನಂದಿನ ಕೆಲಸಗಾರರನ್ನು ನೇಮಿಸಿಕೊಳ್ಳುವ ದಂಪತಿ ಈ ಪ್ರದೇಶದಲ್ಲಿ ಟೊಮೆಟೊಗಳ ಅತಿದೊಡ್ಡ ಪೂರೈಕೆದಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳು ಸಂದರ್ಶನಕ್ಕೆ ಸಾಲುಗಟ್ಟಿ ನಿಂತಿರುವುದರಿಂದ ರೈತ ಈಶ್ವರ್ ಗೇಕರ್ ಸೆಲೆಬ್ರಿಟಿ ಸ್ಥಾನಮಾನ ಪಡೆದುಕೊಂಡಿದ್ದಾರೆ.
