ಉದಯವಾಹಿನಿ, ನವದೆಹಲಿ: ಎರಡು ಕುಟುಂಬಗಳ ನಡುವಿನ ದೀರ್ಘಕಾಲದ ಕಲಹದ ನಂತರ 52 ವರ್ಷದ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ನವೆಂಬರ್ 30 ರಂದು ದಕ್ಷಿಣ ದೆಹಲಿಯ ಆಯಾ ನಗರದಲ್ಲಿ ಈ ಘಟನೆ ನಡೆದಿದೆ. ರಟ್ಟನ್ ಲೋಹಿಯಾ ಎಂಬುವವರು ಮೃತ ದುರ್ದೈವಿ. ಮೃತರ ದೇಹದಲ್ಲಿ 69 ಗುಂಡುಗಳು ಪತ್ತೆಯಾಗಿವೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಭಾರತದ ಹೊರಗಿನ ದರೋಡೆಕೋರರಿಗೆ ರಟ್ಟನ್ ಲೋಹಿಯಾ ಅವರನ್ನು ಕೊಲ್ಲಲು ಸುಪಾರಿ ನೀಡಲಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ. ದೆಹಲಿ ಪೊಲೀಸರ ಪ್ರಕಾರ, ನವೆಂಬರ್ 30ರ ಮುಂಜಾನೆ ರಟ್ಟನ್ ಲೋಹಿಯಾ ಕೆಲಸಕ್ಕಾಗಿ ಮನೆಯಿಂದ ಹೊರಗೆ ಬಂದಿದ್ದರು.

ಈ ವೇಳೆ ಪುರುಷರ ಗುಂಪೊಂದು ಅವರನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿತು. ಹಲವಾರು ಸುತ್ತು ಗುಂಡು ಹಾರಿಸಿದ್ದರಿಂದ ರಟ್ಟನ್ ಸ್ಥಳದಲ್ಲೇ ಮೃತಪಟ್ಟರು. ವಿಷಯ ತಿಳಿದ ಕೂಜಲೇ ಸ್ಥಳಕ್ಕೆ ಧಾವಿಸಿ ಪರಿಸೀಲಿಸಿದ ಪೊಲೀಸರು, ಖಾಲಿ ಶೆಲ್‌ಗಳು ಮತ್ತು ಮೂರು ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡರು. ನವೆಂಬರ್ 30 ರಂದು ಭಾನುವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಆಯಾ ನಗರದ ಮಾರುಕಟ್ಟೆಯ ಬಳಿ ಕಪ್ಪು ಬಣ್ಣದ ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಮೂವರು ದಾಳಿಕೋರರು ರಟ್ಟನ್‌ಗಾಗಿ ಕಾಯುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ದೃಶ್ಯಗಳನ್ನು ವಿಶ್ಲೇಷಿಸಿದಾಗ, ಕಾರಿನ ನಂಬರ್ ಪ್ಲೇಟ್‌ಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!