ಉದಯವಾಹಿನಿ , ಹೈದರಾಬಾದ್ : “ತೆಲಂಗಾಣದಲ್ಲಿಯೂ ಶೀಘ್ರದಲ್ಲೇ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸಲಾಗುವುದು” ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಹೈದರಾಬಾದ್‌ನ ರವೀಂದ್ರ ಭಾರತಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಇನ್ನೂ ನಡೆಯದ ರಾಜ್ಯಗಳಲ್ಲಿ ಮೂರನೇ ಹಂತದಲ್ಲಿ ನಡೆಸಲಾಗುವುದು. ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ 12 ರಾಜ್ಯಗಳಲ್ಲಿ SIR ನಡೆಯುತ್ತಿದೆ. ಬಿಹಾರದಲ್ಲಿ ನಡೆಸಿದ ಪ್ರಕ್ರಿಯೆಯನ್ನು ಮಾನದಂಡವಾಗಿ ತೆಗೆದುಕೊಂಡು ಸಮೀಕ್ಷೆಯನ್ನು ಯಶಸ್ವಿಗೊಳಿಸುವಂತೆ ತೆಲಂಗಾಣದ ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

“ಬೂತ್ ಮಟ್ಟದ ಅಧಿಕಾರಿಗಳು ದೇಶದ ಚುನಾವಣಾ ವ್ಯವಸ್ಥೆಯ ಬೆನ್ನೆಲುಬು. ಮತದಾರರ ಪಟ್ಟಿ ಶುದ್ಧೀಕರಣದ ಯಶಸ್ಸು ಅವರ ಶ್ರದ್ಧೆ ಮತ್ತು ಪ್ರಾಮಾಣಿಕತೆಯನ್ನು ತೋರಿಸುತ್ತಿದೆ. ಇಡೀ ಜಗತ್ತು ದೇಶದ ಚುನಾವಣಾ ವ್ಯವಸ್ಥೆಯ ನಡವಳಿಕೆಯನ್ನು ಬಹಳ ಆಸಕ್ತಿಯಿಂದ ವೀಕ್ಷಿಸುತ್ತಿದೆ. ಬಿಹಾರದ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆನ್ನು ಯಶಸ್ವಿಯಾಗಿ ನಡೆಸಿ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದ್ದಾರೆ. 7.5 ಕೋಟಿ ರೂ ಮತದಾರರೊಂದಿಗೆ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಅದರ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಅಲ್ಲಿನ ಚುನಾವಣೆಯ ನಂತರ, ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ಬಗ್ಗೆಯೂ ಯಾವುದೇ ದೂರುಗಳು ಬಂದಿಲ್ಲ. ಮರು ಮತದಾನ ಅಥವಾ ಮರು ಎಣಿಕೆ ಕೂಡ ಆಗಲಿಲ್ಲ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತ್ತು ಬೂತ್ ಮಟ್ಟದ ಏಜೆಂಟ್‌ಗಳು ಒಟ್ಟಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಕೆಲಸ ಮಾಡಿದ್ದರ ಫಲಿತಾಂಶ ನಿಮ್ಮ ಮುಂದಿದೆ. ಬಿಹಾರದಲ್ಲಿ ನಡೆದ ದೋಷರಹಿತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು 3ನೇ ಹಂತದಲ್ಲಿ ಹೇಗೆ ಯಶಸ್ವಿಯಾಗಿ ನಡೆಸಬೇಕೆಂದು ತೆಲಂಗಾಣ ದೇಶಕ್ಕೆ ತೋರಿಸಲಿದೆ” ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!