ಉದಯವಾಹಿನಿ, ಕುಲ್ಲು(ಹಿಮಾಚಲ ಪ್ರದೇಶ): ಪತಿಯ ಮೇಲಿನ ಕೋಪದಲ್ಲಿ ಪತ್ನಿ ಬೆಂಕಿ ಹಚ್ಚಿದ್ದರಿಂದ ಎರಡು ಮನೆಗಳು ಸುಟ್ಟು ಕರಕಲಾದ ಘಟನೆ ರಾಜ್ಯದ ಮಣಿಕರಣ್ ಕಣಿವೆಯ ದಧೇಯ್ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಪತ್ನಿಯ ಕೋಪಕ್ಕೇನು ಕಾರಣ?: ದಧೇಯ್ ಗ್ರಾಮದ ಸ್ಥಳೀಯ ನಿವಾಸಿಯಾದ ಮಹಿಳೆ ಮತ್ತು ಆಕೆಯ ಪತಿ ನಡುವೆ ನಿರಂತರವಾಗಿ ಜಗಳವಾಗುತ್ತಿತ್ತು. ಪತಿಯ ಮೂರನೇ ಮದುವೆ ವಿಚಾರ ಕೇಳಿದ ಪತ್ನಿ, ತನ್ನ ಸಂಬಂಧಿಕರೊಂದಿಗೆ ಸೇರಿ ಮನೆಗೆ ಬೆಂಕಿ ಹಚ್ಚಿದ್ದಾಳೆ. ಬೆಂಕಿ ವೇಗವಾಗಿ ಮನೆ ಹಾಗೂ ಪಕ್ಕದ ಮನೆಯನ್ನು ಆವರಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಪೊಲೀಸರು ದೃಢಪಡಿಸಿಲ್ಲ.”ದಧೇಯ್ ಗ್ರಾಮದಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳಾದ ಪುಷ್ಪಾ ದೇವಿ, ಭುವನೇಶ್ವರಿ, ಪೂನಂ ಮತ್ತು ಖುಷ್ಬೂ ಎಂಬವರನ್ನು ಬಂಧಿಸಿದ್ದಾರೆ.
ಬೆಂಕಿ ಹಚ್ಚಿದ್ದರ ಹಿಂದಿನ ಕಾರಣ ತಿಳಿಯಲು ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮದನ್ ಲಾಲ್ ಕೌಶಲ್ ತಿಳಿಸಿದ್ದಾರೆ.ಬೆಂಕಿ ಹಚ್ಚಿದ್ದರ ಹಿಂದಿನ ಕಾರಣ ತಿಳಿಯಲು ಪೊಲೀಸರು ಮಹಿಳೆಯನ್ನು ವಿಚಾರಣೆ ಮಾಡುತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಡಿಸೆಂಬರ್ 24ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದ ಪತ್ನಿ(ಪ್ರತ್ಯೇಕ ಘಟನೆ): ಉತ್ತರ ಪ್ರದೇಶದ ಚಂದೌಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳು ದಿನಗಳ ಹಿಂದೆ ಮಾನವ ಅಂಗಾಂಗಳಿರುವ ಪಾಲಿಥಿನ್ ಚೀಲ ಪತ್ತೆಯಾಗಿತ್ತು. ಆ ಚೀಲದ ನಿಗೂಢತೆಯನ್ನು ಪೊಲೀಸರು ಭೇದಿಸಿದ್ದಾರೆ. ಪತ್ನಿ ಮತ್ತು ಆಕೆಯ ಪ್ರೇಮಿಯೇ ಈ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪುತ್ರಿಯೇ ತನ್ನ ತಾಯಿಯ ದುಷ್ಕೃತ್ಯಗಳನ್ನು ಬಹಿರಂಗಪಡಿಸಿದ್ದಾಳೆ. ಪ್ರಸ್ತುತ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಇತರ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
