ಉದಯವಾಹಿನಿ, ಜುಲಾಯಿ, ಸನ್ ಆಫ್ ಸತ್ಯಮೂರ್ತಿ ಹಾಗೂ `ಅಲಾ ವೈಕುಂಠಪುರಮ್‌ಲೋ’ ಸಿನಿಮಾದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನ 4ನೇ ಸಿನಿಮಾಗೆ ಅಲ್ಲು ಅರ್ಜುನ್ ಅಣಿಯಾಗಿದ್ದಾರೆ. ಈ ಬಾರಿ 1,000 ಕೋಟಿ ಬಜೆಟ್‌ನ ಸಿನಿಮಾಗಾಗಿ ಈ ಜೋಡಿ ಒಂದಾಗಿದ್ದು, ಪೌರಾಣಿಕ ಕಥೆಯಾಧಾರಿತ ಸಿನಿಮಾ ಮಾಡಲು ತಯಾರಿ ನಡೆದಿದೆ ಎನ್ನಲಾಗ್ತಿದೆ. ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾದ ಬಳಿಕ ನಿರ್ದೇಶಕ ಅಟ್ಲಿ ಜೊತೆಗೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೂಪರ್ ಮ್ಯಾನ್ ಕಾನ್ಸೆಪ್ಟ್ನ ಈ ಸಿನಿಮಾಗಾಗಿ ಅದ್ಧೂರಿ ತಯಾರಿ ಕೂಡ ನಡೆದಿದೆ. ಈಗಾಗ್ಲೇ ಸಿನಿಮಾದ ಕೆಲಸಗಳು ತೆರೆಮರೆಯಲ್ಲಿ ಶುರುವಾಗಿವೆ. ಇದ್ರ ಬೆನ್ನಲ್ಲೇ ಮತ್ತೊಂದು ಸುದ್ದಿ ಸಖತ್ ಸೌಂಡ್ ಮಾಡ್ತಿದೆ. ಅಲಾ ವೈಕುಂಠಪುರಮ್‌ಲೋ ಸಿನಿಮಾದ ಬಿಗ್ ಹಿಟ್ ಬಳಿಕ ಒಂದಾಗ್ತಿರುವ ಈ ಕಾಂಬಿನೇಷನ್ ಮೈತಲಾಜಿಕಲ್ ಚಿತ್ರಕ್ಕೆ ಕೈಜೋಡಿಸುತ್ತಿದೆಯಂತೆ.
ಜೋಡಿ ಒಂದಾಗ್ತಿರುವ ಬಗ್ಗೆ ಆಪ್ತಮೂಲಗಳು ಮಾಹಿತಿಯನ್ನ ಹಂಚಿಕೊಂಡಿವೆ. ಅಟ್ಲಿ ಜೊತೆಗಿನ ಸಿನಿಮಾದ ಶೂಟಿಂಗ್ ಮುಗಿದ ಬಳಿಕ ಅಂದರೆ 2027ರ ಮುಂಚಿತವಾಗಿ ಈ ಸಿನಿಮಾ ಸೆಟ್ಟೇರಲಿದೆ ಅನ್ನೋ ಮಾಹಿತಿಗಳು ಹೊರ ಬಿದ್ದಿವೆ. ಮತ್ತೊಂದು ಕಡೆ ಪುಷ್ಪ-3 ಸಿನಿಮಾ ಕೂಡಾ ಅಲ್ಲು ಅರ್ಜುನ್ ಲಿಸ್ಟ್ನಲ್ಲಿದೆ.
