ಉದಯವಾಹಿನಿ, ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಫ್ಯಾನ್ ವಾರ್, ಸ್ಟಾರ್ ಗಾಳಿ ಜೋರಾಗಿ ಬೀಸುತ್ತಿದೆ. ಕಿಚ್ಚ ಸುದೀಪ್ ಹುಬ್ಬಳ್ಳಿಯ ವೇದಿಕೆ ಮೇಲೆ ಆಡಿದ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದವು. ಇದ್ರ ಬೆನ್ನಲ್ಲೇ ದಾವಣಗೆರೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಭಿಮಾನಿಗಳ ಮುಂದೆ ಮಾತಾಡಿದ ಮಾತುಗಳು ಮತ್ತಷ್ಟು ಅಭಿಮಾನಿಗಳನ್ನ ರೊಚ್ಚಿಗೆಬ್ಬಿಸಿವೆ. ಈ ಮಾತುಗಳು ಇಂಡಸ್ಟ್ರಿಯಲ್ಲಿ ಬೇರೆ ರೀತಿಯ ಆಯಾಮಗಳನ್ನು ಪಡೆದುಕೊಂಡಿದಿವೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ದರ್ಶನ್ ಹಾಗೂ ಸುದೀಪ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡ ನಟಿ ರಕ್ಷಿತಾ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ಅವರು ಮಾತಾಡಿದ್ದು ಪೈರಸಿ ಬಗ್ಗೆ. ದರ್ಶನ್ ಅವರಿಗೆ ಮಾತಾಡಿದ್ದಾರೆ ಅಂತಾ ಅನ್ನಿಸ್ತಿಲ್ಲ. ದರ್ಶನ್ ಹಾಗೂ ಸುದೀಪ್ ಸ್ನೇಹಿತರು, ವಿಜಿ ನನಗೆ ತುಂಬಾ ವರ್ಷಗಳ ಪರಿಚಯ. ಅವ್ರು ಒಬ್ಬ ವ್ಯಕ್ತಿ ಮೇಲೆ ಬೆರಳು ತೋರಿಸಿ ಮಾತಾಡಿದ್ರು ಅಂತಾ ಅನ್ಸಲ್ಲ. ಇಂಡಸ್ಟ್ರಿಯಲ್ಲಿ ಎಲ್ಲರೂ ಒಟ್ಟಾಗಿರಬೇಕು ಎಂದಿದ್ದಾರೆ ನಟಿ ರಕ್ಷಿತಾ.
ಒಗ್ಗಟ್ಟಿನಿಂದ ಇದ್ರೆ ಅದು ನಮ್ಮ ಸ್ಟ್ರೆಂತ್, ಎಲ್ಲಾರು ಒಟ್ಟಾಗಿ ಪೈರಸಿ ವಿರುದ್ಧ ಹೋರಾಡೋಣ. ಇದೆಲ್ಲ ಬಿಟ್ಟು ಮುಂಬರುವ ಸಿನಿಮಾಗಳನ್ನ ಸೆಲೆಬ್ರೇಟ್ ಮಾಡೋಣ ಎಂದಿದ್ದಾರೆ ನಟಿ ರಕ್ಷಿತಾ. ಪಬ್ಲಿಕ್ ಟಿವಿಯ ಜೊತೆಗೆ ಮಾತಾಡಿರುವ ರಕ್ಷಿತಾ ಪ್ರೇಮ್ ಯಾವುದನ್ನೂ ಬೆಳೆಸೋದು ಬೇಡ. ಇದನ್ನ ಇಲ್ಲಿಗೆ ಬಿಟ್ಟು ಸಿನಿಮಾ ಹಾಗೂ ಸಿನಿಮಾ ಇಂಡಸ್ಟ್ರಿಯ ಬೆಳವಣಿಗೆ ಬಗ್ಗೆ ಗಮನಹರಿಸೋಣ ಎಂದಿದ್ದಾರೆ.
