ಉದಯವಾಹಿನಿ, ಲಖನೌ : ತಂದೆಯ ವಿರುದ್ಧವೇ ಪೊಲೀಸರಿಗೆ ಹದಿಹರೆಯದ ಬಾಲಕನೊಬ್ಬ ದೂರು ನೀಡಿರುವ ಘಟನೆ ಉತ್ತರ ಪ್ರದೇಶದ (Uttar ಡಿಯೋರಿಯಾದಲ್ಲಿ ವರದಿಯಾಗಿದೆ. 11ನೇ ತರಗತಿಯಲ್ಲಿ ಓದುತ್ತಿರುವ ಹದಿಹರೆಯದ ಬಾಲಕ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ತಂದೆಯ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾನೆ. ಡಿಯೋರಿಯಾ ನಗರದ ಸದರ್ ಕೊತ್ವಾಲಿ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ವರದಿಯ ಪ್ರಕಾರ, ತಂದೆ ತನಗೆ ಹೊಡೆದಿದ್ದಾರೆಂದು ಪೊಲೀಸರಿಗೆ ಆತ ತಿಳಿಸಿದ್ದಾನೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾನೆ.

ಆ ಹುಡುಗ ತನ್ನ ಹೆತ್ತವರಿಗೆ ಒಬ್ಬನೇ ಮಗನಾಗಿದ್ದು, ಪೋಷಕರೊಂದಿಗೆ ಉಮಾನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ. ಅವನ ತಂದೆ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್ 19ರಂದು ತಂದೆ ತನ್ನ ಮಗನನ್ನು ಸ್ಥಳೀಯರ ಮುಂದೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಗದರಿಸಿದ್ದರು. ಸಾರ್ವಜನಿಕರ ಮುಂದೆ ಗದರಿಸಿದ್ದರಿಂದ ಹದಿಹರೆಯದ ಬಾಲಕ ಬೇಸರಗೊಂಡಿದ್ದ. ಹೀಗಾಗಿ ತನಗೆ ಅವಮಾನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!