ಉದಯವಾಹಿನಿ, ನವಾಡಾ : ಬೆಳೆ ಹಾನಿ ಮಾಡುತ್ತಿವೆ ಎಂದು ರೈತರು ನೀಡಿದ ದೂರುಗಳ ಸರಣಿಯ ಬಳಿಕ ಇಲ್ಲಿನ ಜಿಲ್ಲಾಡಳಿತವು ನೀಡಿದ ಆದೇಶದಂತೆ ನವಾಡಾ ಪ್ರದೇಶದಲ್ಲಿ ಬುಧವಾರ ಸುಮಾರು 26 ನೀಲ್ಗಾಯ್​ಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ.ಜಿಲ್ಲೆಯ ಮಹುಲಿ ಪಂಚಾಯತ್‌ನಲ್ಲಿ ಗ್ರಾಮದ ಮುಖ್ಯಸ್ಥ ವಿಪಿನ್ ಸಿಂಗ್ ಎಂಬವರು ಪಂಚಾಯತ್ ರಾಜ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆ ದೂರು ಸಲ್ಲಿಸಿದರು. ಈ ಅರ್ಜಿಯ ಮೇರೆಗೆ ಕ್ರಮ ಕೈಗೊಳ್ಳಲಾಯಿತು.

“ನೀಲ್ಗಾಯ್​ಗಳು ಮತ್ತು ಹಂದಿಗಳು ಹಾವಳಿಯಿಂದ ರೈತರು ಪ್ರತಿ ವರ್ಷವೂ 2 ರಿಂದ 3 ಲಕ್ಷ ರೂಪಾಯಿ ಬೆಳೆ ಹಾನಿ ಅನುಭವಿಸುತ್ತಿದ್ದಾರೆ. ಬೆಳೆಗಳನ್ನು ಉಳಿಸಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಇಲಾಖಾ ಆದೇಶದ ನಂತರ, ಶೂಟರ್‌ಗಳು ಬಂದು ನೀಲ್ಗಾಯ್​​​ಗಳನ್ನು ಹೊಡೆದುರುಳಿಸಿದರು” ಎಂದು ವಿಪಿನ್​ ಸಿಂಗ್ ತಿಳಿಸಿದರು.

ನವಾಡಾದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಸಿಶ್ವಾ ಮತ್ತು ಭಗವಾನ್‌ಪುರದಂತಹ ಪ್ರದೇಶಗಳಲ್ಲಿ, ರೈತರು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ಹೆಚ್ಚಿನ ಪ್ರಮಾಣದಲ್ಲಿ ನಾಶ ಮಾಡುತ್ತಿವೆ. ಜಿಲ್ಲಾಡಳಿತವು ಅರಣ್ಯ ಇಲಾಖೆಯ ಸಹಾಯದಿಂದ ತಂಡವನ್ನು ರಚಿಸಿ, ಆರಂಭದಲ್ಲಿ ಪಟಾಕಿಗಳನ್ನು ಸಿಡಿಸಿ ಪ್ರಾಣಿಗಳನ್ನು ಹೆದರಿಸಲಾಗುತ್ತದೆ. ನಂತರ ಗುಂಡು ಹಾರಿಸಲಾಗುತ್ತದೆ ಎಂದರು.
ಬೆಳೆಗಳಿಗೆ ಆಗುವ ಹಾನಿಯನ್ನು ನಿಲ್ಲಿಸಲು ಕಾಡುಪ್ರಾಣಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಅರಣ್ಯ ಇಲಾಖೆ ಆದೇಶಿಸಿದೆ. ಈ ಕಸರತ್ತು ಇನ್ನೂ ನಡೆಯುತ್ತಿದೆ” ಎಂದು ಅರಣ್ಯ ಇಲಾಖೆ ನೇಮಿಸಿರುವ ಶೂಟರ್ ಖಯಾಮ್ ಅಖ್ತರ್ ಅವರು ಮಾಹಿತಿ ನೀಡಿದರು.

ಬಿಹಾರದ ಪರಿಸರ, ಅರಣ್ಯ ಇಲಾಖೆಯ ಪ್ರಕಾರ, ಕಳೆದ ವರ್ಷ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನೀಲ್ಗಾಯ್​ಗಳು ಬೆಳೆ ಹಾನಿಯನ್ನುಂಟುಮಾಡಿವೆ. ನಂತರ ಅವುಗಳಲ್ಲಿ 4,279 ಅನ್ನು ಕೊಲ್ಲಲು ನಿರ್ಧರಿಸಲಾಯಿತು. ಈ ಪ್ರಾಣಿಯನ್ನು ಭಾರತದ ವನ್ಯಜೀವಿ ಕಾಯ್ದೆಯಡಿಯಲ್ಲಿ ಕಾನೂನುಬದ್ಧವಾಗಿ ರಕ್ಷಿಸಲಾಗಿದೆ. ಆದರೆ ಅದರಿಂದ ಸಮಸ್ಯೆಯಾದಾಗ ಅವುಗಳ ನಾಶಕ್ಕೆ ಅವಕಾಶವಿದೆ.

Leave a Reply

Your email address will not be published. Required fields are marked *

error: Content is protected !!