ಉದಯವಾಹಿನಿ, ವಾಷಿಂಗ್ಟನ್ : ಯುರೋಪಿಯನ್ ಯೂನಿಯನ್ ಮಾಜಿ ಕಮಿಷನರ್ ಥಿಯರಿ ಬ್ರೆಟನ್ ಹಾಗೂ ಇತರ ನಾಲ್ಕು ಮಂದಿಗೆ ವೀಸಾ ನಿರಾಕರಿಸುವುದಾಗಿ ಅಮೆರಿಕಾದ ವಿದೇಶಾಂಗ ಇಲಾಖೆ ಮಂಗಳವಾರ ಹೇಳಿದೆ.
ಈ ಐವರು ತಾವು ವಿರೋಧಿಸುವ ದೃಷ್ಟಿಕೋನಗಳನ್ನು ಸೆನ್ಸಾರ್ ಮಾಡುವಂತೆ ಅಮೆರಿಕನ್ ಸಾಮಾಜಿಕ ಮಾಧ್ಯಮಗಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.
ಈ ಕ್ರಮವನ್ನು ಬಲವಾಗಿ ಖಂಡಿಸುವುದಾಗಿ ಯುರೋಪಿಯನ್ ಯೂನಿಯನ್ ಪ್ರತಿಕ್ರಿಯಿಸಿದೆ. ಅಮೆರಿಕಾ ಅಧಿಕಾರಿಗಳಿಂದ ಸ್ಪಷ್ಟಿಕರಣ ಕೇಳಿದ್ದು ಅಗತ್ಯಬಿದ್ದರೆ ನ್ಯಾಯಸಮ್ಮತವಲ್ಲದ ಕ್ರಮಗಳ ವಿರುದ್ಧ ನಮ್ಮ ನಿಯಂತ್ರಕ ಸ್ವಾಯತ್ತತೆಯನ್ನು ರಕ್ಷಿಸಲು ನಾವು ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತೇವೆ’ ಎಂದು ಯುರೋಪಿಯನ್ ಕಮಿಷನ್ ಹೇಳಿದೆ.

Leave a Reply

Your email address will not be published. Required fields are marked *

error: Content is protected !!