ಉದಯವಾಹಿನಿ, ಇಂಡಿ :
ಶಹರ ಪೊಲೀಸ್ ಠಾಣೆ ಯಲ್ಲಿ ಬುಧವಾರದಂದು ಮೊರಂ ಹಬ್ಬದ ಸಭೆ ಜರುಗಿತು.ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ರತನಕುಮಾರ ಜಿರಗ್ಯಾಳ ಮಾತನಾಡಿ ಎಲ್ಲ ಸಮುದಾಯದವರನ್ನು ಕರೆಸಿ ಅವರಿಗೆಲ್ಲ ವಿಶ್ವಾಸಕ್ಕೆ ತೆಗೆದು ಕೊಂಡು ಹಬ್ಬವನ್ನು ಶಾಂತರೀತಿ ಯಲ್ಲಿ ಆಚರಣೆ ಮಾಡುವುದಾಗಿದೆ. ಸಿಬ್ಬಂದಿಗಳ ಕೊರತೆ ಇರುವುದರಿಂದಮುಂಚಿತವಾಗಿಯೇ ಪೊಲೀಸ್ ಸೂಕ್ತ ರೀತಿಯ ಬಂದೋಬಸ್ತಿ ಮಾಡಲಾಗುತ್ತದೆ ಎಂದರು.ಪುರಸಭೆ ಆರೋಗ್ಯ ನಿರೀಕ್ಷಕ ರಾದ ಸೋಮನಾಯಕ್ ಅವರು ಮಾತನಾಡಿ ಮೂಲಭೂತ ಸೌಕರ್ಯಗಳಾದ ನೀರು ಲೈಟ್ ಸ್ವಚ್ಛತೆ ಕುರಿತು ವ್ಯವಸ್ಥೆ ಮಾಡಿಕೊಡಲಾಗುವುದು ಹಾಗೂ ಪುರಸಭೆಯ ಮುಖ್ಯ ಅಧಿಕಾರಿಗಳ ಗಮನಕ್ಕೆ ತಂದು ಸಿಸಿ ಕ್ಯಾಮೆರಾವನ್ನು ಕೂಡ ಅಳವಡಿಸುತ್ತೇವೆ ಎಂದರು.ಹಾಗೂ ಈ ಸಂದರ್ಭದಲ್ಲಿ ಪ್ರಭುಗೌಡ ಬಿರಾದಾರ ಅವರು ಮಾತನಾಡಿ ಮೊಹರಂ ಹಬ್ಬವು ಹಿಂದಿನಿಂದ ಆಚರಣೆ ಮಾಡಿಕೊಂಡು ಬರುವ ವಾಡಿಕೆ ಹಿಂದೂ ಮುಸ್ಲಿಂ ಭಾವೈಕತೆಯ ಹಬ್ಬವೇ ಮೊಹರಂ ಹಬ್ಬ ಎಂದು ಮಾತನಾಡಿದರು , ಆದಿಲ್ ಮಕಾಂದಾರ, ದೇವೇಂದ್ರ ಕುಂಬಾರ, ಮೈಬೂಬ ಅರಬ್ ಇವರುಗಳು ಕೂಡ ಮಾತನಾಡಿದರು.ಈ ಸಂದರ್ಭದಲ್ಲಿ ತುಕಾರಾಮ ವಾಲಿಕಾರ , ಸತೀಶ್ ಕುಂಬಾರ, ಭೀಮನಗೌಡ ಬಿರಾದಾರ, ಯಮುನಾಜಿ ಸಾಲುಂಕೆ. ಸಿದ್ದಪ್ಪ ಐರೋಡಗಿ ಹಾಗೂ ದುರ್ಗಾ ಕಮಿಟಿಯ ಸದಸ್ಯರು ಮತ್ತು ಪೋಲಿಸ್ ಸಿಬ್ಬಂದಿಗಳು ಭಾಗಿಯಾಗಿದ್ದರು
