ಉದಯವಾಹಿನಿ, ಕಾರಟಗಿ : ಮಕ್ಕಳಲ್ಲಿ ವಿದ್ಯಾರ್ಥಿದೆಸೆಯಿಂದಲೇ  ರಾಷ್ಟ ನಿರ್ಮಾಣದ ಹೊಣೆಗಾರಿಕೆಯನ್ನು ಹೊರುವ ಬಹುದೊಡ್ಡ ಜವಾಬ್ದಾರಿಯನ್ನು ಕಲಿಯಬೇಕು ಎನ್ನುವುದೇ ಸೇವಾದಳದ ಮುಖ್ಯೆಉದ್ಧೇಶವಾಗಿದ್ದು ಈ ನಿಟ್ಟಿನಲ್ಲಿ ಶಿಸ್ತು,ಸಂಯಮ, ಭಾವೈಕ್ಯತೆಯನ್ನು ಬೆಳೆಸುವ ಉದ್ಧೇಶದಿಂದ ಭಾರತ ಸೇವಾ ದಳದ ಶಾಖೆಯನ್ನು ತಾಲೂಕಿನಾಧ್ಯಂತ ಪ್ರಾರಂಭಿಸುತ್ತಿದ್ದೇವೆ ಎಂದು ಭಾರತ ಸೇವಾ ದಳದ ತಾಲೂಕಾ ಘಟಕದ ಅಧ್ಯಕ್ಷ ಸುರೇಶ್ ಸಿಂಗನಾಳ ಹೇಳಿದರು. ಕಾರಟಗಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾರತ ಸೇವಾ ದಳದ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು. ಭಾರತ ಸೇವಾ ದಳ ಸ್ವಾತಂತ್ರ‍್ಯ ಹೋರಾಟಗಾರರು ಮತ್ತು ದೇಶಭಕ್ತರನ್ನು ಹುಟ್ಟು ಹಾಕಿದ ಸಂಸ್ಥೆ. ಸ್ವಾತಂತ್ರ‍್ಯ ಚಳುವಳಿಯಲ್ಲಿ ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರಿಗೆ ಸಾಥ್ ಕೊಟ್ಟ ಏಕೈಕ ಸಂಸ್ಥೆ. ಈ ಕಾಲಘಟ್ಟದಲ್ಲಿ ಭಾರತ ಸೇವಾ ದಳಕ್ಕೆ ವಿದ್ಯಾರ್ಥಿಗಳೇ ಅಡಿಗಲ್ಲು. ಅವರಲ್ಲಿ ಶಿಸ್ತು,ಸಂಯಮ, ಭಾವೈಕ್ಯತೆಯನ್ನು ಬೆಳೆಸುವ ಉದ್ಧೇಶದಿಂದ ಭಾರತ ಸೇವಾ ದಳದ ಶಾಖೆಯನ್ನು ತಾಲೂಕಿನಾಧ್ಯಂತ ಪ್ರಾರಂಭಿಸುತ್ತಿದ್ದೇವೆ ಎಂದರು. ನಂತರ ನ್ಯಾಯವಾದಿ ಎಚ್.ಎಂ ಮಂಜುನಾಥ್ ಭಾರತ ಸೇವಾ ದಳದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಭಾರತ ಸೇವಾದಳದ ತಾಲೂಕಾ ಕಾರ್ಯದರ್ಶಿ ಅಮರೇಶ್ ಮೈಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿ ಸೇವಾ ದಳ ೧೯೨೩ರಲ್ಲಿ ಆಸ್ತಿತ್ವಕ್ಕೆ ಬಂದಿದ್ದು, ಪ್ರಸಕ್ತ ವರ್ಷ ಶತಮಾನದ ಪರಂಪರೆಯ ಮುಟ್ಟಿದ ಸಂಭ್ರಮದಲ್ಲಿದೆ. ಎಂದರು.
ಇದೇ ವೇಳೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ವಿಭಾಗದ ಒಟ್ಟು ೩೩ ವಿದ್ಯಾರ್ಥಿನಿಯರನ್ನು ಒಳಗೊಂಡ ಶಾಖೆಯನ್ನು ಭಗತ್‌ಸಿಂಗ್ ಸೇವಾದಳ ಘಟಕಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಭಾರತ ಸೇವಾದಳದ ಜಿಲ್ಲಾ ಸಂಘಟಕ ಬಸವರಾಜ್, ಪ್ರೌಢಶಾಲಾ ಶಿಕ್ಷಕರ ಸಂಘದ ಎಮ್. ಮಂಜುನಾಥ್ ವಾಲ್ಮೀಕಿ, ಶಾಖಾ ನಾಯಕಿ ಶಕುಂತಲಾ, ವಿಜಯಕುಮಾರ್, ಸಂತೋಷ ಸೇರಿದಂತೆ ಶಿಕ್ಷಕರಾದ ವಿರುಪಾಕ್ಷಪ್ಪ ಮತ್ತಿಗಟ್ಟಿ ವಿರುಪಾಕ್ಷಪ್ಪ ಕೋರಿ, ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!