
ಉದಯವಾಹಿನಿ ,ಇಂಡಿ : ಪಟ್ಟಣದ ಸಿಂದಗಿ ರಸ್ತೆ ಹತ್ತಿರವಿರುವ ಹಳೆ ಕೆ ಎಸ್ ಆರ್ ಟಿ ಸಿ ಕಾಂಪ್ಲೆಕ್ಸ್‌ನಲ್ಲಿ ಇರುವ. ಎಸ್. ಜಿ. ಕೆ. ಎಂಬ ಅಂಗಡಿಯಲ್ಲಿ ರಾಜಾರೋಷವಾಗಿ ಪ್ಲಾಸ್ಟಿಕ್ ವ್ಯಾಪಾರ ಮಾಡುತ್ತಿದ್ದಾರೆ. ಇದರ ಬಗ್ಗೆ ಪುರಸಭೆ ಆರೋಗ್ಯ ನಿರೀಕ್ಷಕ ಅಧಿಕಾರಿಯಾದ ಸೋಮನಾಯಕ ಅವರ ಗಮನಕ್ಕೆ ಬಾರದೇ ಇರುವದು ವಿಫರಾಶವೇ ಸರಿ ರಾಜ್ಯ ಸರಕಾರ ಈಗಾಗಲೇ ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಆದರೂ ಕೂಡ ಇಂಡಿ ತಾಲೂಕಿನ ಆದ್ಯಂತ ಪ್ಲಾಸ್ಟಿಕ್ ಮಾರಾಟಗಾರರು ಹೆಚ್ಚಾಗುತ್ತಲೇ ಇದ್ದಾರೆ ಇವರ ಕಡೆ ಪುರಸಭೆ ಅಧಿಕಾರಿಗಳು ಗಮನ ಹರಿಸಿ ಅವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಈ ಕುರಿತು ನಮ್ಮ ಉದಯ ವಾಹಿ
ನಿ ದಿನ ಪತ್ರಿಕೆ ಮೂಲಕ ಬೆಳಕಿಗೆ ತರಳಲಾಗಿತ್ತು ವರದಿ ಬಳಿಕ ಎಚ್ಚೆತ್ತ ಪುರಸಭೆ ಆರೋಗ್ಯ ನಿರೀಕ್ಷೆ ಅಧಿಕಾರಿಯಾದ ಸೋಮನಾಯಕ್ ಅವರು ಇಂದು ಬೆಳಗ್ಗೆ ದಿನಾಂಕ /20/07/2023 ಗುರುವಾರಂದು ಇಂಡಿಯಲಿ ಕೆಲವು ಕಡೆ ಕಿರಾಣಿ ಸ್ಟೋರ್ಸ್. ಬೇಕರಿ. ಮತ್ತು ಬಟ್ಟೆ ಅಂಗಡಿಗಳ ಮೇಲೆ ರೈಡ್ ಮಾಡಲಾಯಿತು ಹಾಗೂ 2000 ದಂಡ ಹಾಕಲಾಯಿತು ಮತ್ತು ಪುರಸಭೆಯ ಉದ್ಯಮಿ ಪರವಾನಿಗೆ ಚೆಕ್ ಮಾಡಲಾಯಿತು.
