ಉದಯವಾಹಿನಿ, ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳ ಸರಣಿ ಮುಂದುವರಿದಿದ್ದು ಕಿಡಿಗೇಡಿಗಳ ದಾಳಿಯಿಂದ ಪವಾಡ ಸದೃಶವಾಗಿ ಪಾರಾಗಿ ಜೀವ ಉಳಿಸಿಕೊಂಡಿದ್ದ ಉದ್ಯಮಿ ಕೊಂಕನ್ ಚಂದ್ರ (50) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೇಔರ್‌ಬಂಗಾ ಪ್ರದೇಶದಲ್ಲಿ ಮೆಡಿಕಲ್‌ ಶಾಪ್‌ ಮುಚ್ಚಿ  ಮನೆ ಕಡೆ ಬರುತ್ತಿದ್ದ ಕೊಂಕನ್ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದರು. ಹಲವು ಬಾರಿ ಹೊಟ್ಟೆಗೆ ಇರಿದು, ಪೆಟ್ರೋಲ್‌ಹಾಕಿ ಬೆಂಕಿ ಹಚ್ಚಿದ್ದರು.
ದೃಷ್ಟವಶಾತ್ ಪಕ್ಕದಲ್ಲೇ ಇದ್ದ ನೀರಿದ್ದ ಕೆರೆಗೆ ಜಿಗಿದು ಕೊಂಕನ್ ಪ್ರಾಣ ಉಳಿಸಿಕೊಂಡಿದ್ದರು. ನಂತರ ಕೆಲ ಸ್ಥಳೀಯರು ರಕ್ಷಿಸಿ ಢಾಕಾ ಮಡಿಕಲ್‌ ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಕೊಂಕನ್ ಚಂದ್ರ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿವೆ. ಈ ಕೃತ್ಯವನ್ನು ಯಾರು ಮಾಡಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ನಮಗೆ ನ್ಯಾಯ ಬೇಕು. ನನ್ನ ಪತಿ ಸರಳ ವ್ಯಕ್ತಿಯಾಗಿದ್ದು ಅವರು ಯಾರಿಗೂ ಹಾನಿ ಮಾಡಿಲ್ಲ. ಅವರು ಯಾರಿಗೂ ನೋವುಂಟು ಮಾಡಿಲ್ಲ ಎಂದು ಕೊಂಕನ್‌ ಅವರ ಪತ್ನಿ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಎರಡು ವಾರಗಳಲ್ಲಿ ಹಿಂದೂಗಳ ಮೇಲೆ ನಡೆದ ನಡೆದ ನಾಲ್ಕನೇ ದಾಳಿ ಇದಾಗಿತ್ತು.

Leave a Reply

Your email address will not be published. Required fields are marked *

error: Content is protected !!