ಉದಯವಾಹಿನಿ, ನಮ್ಮ ದಿನನಿತ್ಯದ ಅಡುಗೆಯಲ್ಲಿ ತರಕಾರಿಗಳ ಬಳಕೆ ಬಹಳ ಮುಖ್ಯ. ಅದರಲ್ಲೂ ಹಸಿರು ಬಣ್ಣದ ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ಗೊತ್ತು. ಸಾಮಾನ್ಯವಾಗಿ ನಾವು ಮಾರುಕಟ್ಟೆಗೆ ಹೋದಾಗ ಗ್ರೀನ್‌ ಬೀನ್ಸ್‌ ಮತ್ತು ಬಟಾಣಿ ಎರಡನ್ನೂ ನೋಡುತ್ತೇವೆ. ಸಾಂಬಾರ್, ಪಲ್ಯ ಅಥವಾ ಬಾತ್ ಮಾಡಲು ಇವುಗಳನ್ನು ಹೆಚ್ಚಾಗಿ ಬಳಸುತ್ತೇವೆ. ಇವೆರಡೂ ನೋಡಲು ಹಸಿರಾಗಿ, ಆರೋಗ್ಯಕರವಾಗಿ ಕಂಡರೂ, ಇವುಗಳ ಗುಣಗಳಲ್ಲಿ ಮತ್ತು ಪೋಷಕಾಂಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಕೆಲವರು ರುಚಿಗಾಗಿ ಬಟಾಣಿ ಇಷ್ಟಪಟ್ಟರೆ, ಇನ್ನು ಕೆಲವರು ಫಿಟ್ನೆಸ್‌ಗಾಗಿ ಗ್ರೀನ್‌ ಬೀನ್ಸ್‌ ಇಷ್ಟಪಡುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಯಾವುದು ಉತ್ತಮ? ತೂಕ ಇಳಿಸಲು ಯಾವುದು ಸಹಕಾರಿ? ಪ್ರೋಟೀನ್ ಯಾವುದರಲ್ಲಿ ಹೆಚ್ಚಿದೆ? ಎಂಬ ಗೊಂದಲ ನಿಮಗಿದೆಯೇ? ಹಾಗಿದ್ರೆ ಈ ಲೇಖನವನ್ನು ಓದಿ. ಇಲ್ಲಿ ಗ್ರೀನ್‌ ಬೀನ್ಸ್‌ ಮತ್ತು ಬಟಾಣಿಯ ನಡುವಿನ ವ್ಯತ್ಯಾಸ ಮತ್ತು ಲಾಭಗಳ ಬಗ್ಗೆ ಸರಳವಾಗಿ ತಿಳಿಸಲಾಗಿದೆ.

ನೋಡಲು ಒಂದೇ ರೀತಿ ಕಂಡರೂ ಇವುಗಳ ಗುಣ ಬೇರೆ. ಪೌಷ್ಟಿಕ ತಜ್ಞರಾದ ಕಾಯ್ಲಾ ಗಿರ್ಗೆನ್ ಅವರು ಪರಿಶೀಲಿಸಿರುವ ಪ್ರಕಾರ, ಬಟಾಣಿಯಲ್ಲಿ ಗ್ರೀನ್‌ ಬೀನ್ಸ್‌ ಗಿಂತ ಸುಮಾರು 4 ಪಟ್ಟು ಹೆಚ್ಚು ಪ್ರೋಟೀನ್ ಇರುತ್ತದೆ. ಅಲ್ಲದೆ ಬಟಾಣಿಯಲ್ಲಿ ನಾರಿನಂಶ ಕೂಡ ಮೂರು ಪಟ್ಟು ಹೆಚ್ಚಿರುತ್ತದೆ. ಆದರೆ, ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಗ್ರೀನ್‌ ಬೀನ್ಸ್‌ ಬೆಸ್ಟ್ ಆಯ್ಕೆ. ಏಕೆಂದರೆ, ಒಂದು ಕಪ್ ಗ್ರೀನ್‌ ಬೀನ್ಸ್‌ಯಲ್ಲಿ ಕೇವಲ 31 ಕ್ಯಾಲೋರಿಗಳಿರುತ್ತವೆ. ಅದೇ ಒಂದು ಕಪ್ ಬಟಾಣಿಯಲ್ಲಿ 117 ಕ್ಯಾಲೋರಿಗಳಿರುತ್ತವೆ. ಅಲ್ಲದೆ ಗ್ರೀನ್‌ ಬೀನ್ಸ್‌ಯಲ್ಲಿ ಕಾರ್ಬೋಹೈಡ್ರೇಟ್ಸ್ ಪ್ರಮಾಣ ಕೂಡ ಕಡಿಮೆ.
ಗ್ರೀನ್‌ ಬೀನ್ಸ್‌ ಗರಿಗರಿಯಾಗಿರುತ್ತದೆ ಮತ್ತು ಅಡುಗೆಯಲ್ಲಿ ಬೇಗ ಕರಗುವುದಿಲ್ಲ. ಇದರ ಪ್ರಮುಖ ಲಾಭಗಳು ಇಲ್ಲಿವೆ.
ಮೂಳೆಗಳ ಆರೋಗ್ಯ: ಇದರಲ್ಲಿ ವಿಟಮಿನ್ ‘ಕೆ’ ಹೆಚ್ಚಿರುವುದರಿಂದ ಮೂಳೆಗಳನ್ನು ಗಟ್ಟಿಯಾಗಿಸಲು ಮತ್ತು ಆಸ್ಟಿಯೋಪೊರೋಸಿಸ್ ನಂತಹ ಸಮಸ್ಯೆ ತಡೆಯಲು ಸಹಕಾರಿ.
ತೂಕ ಇಳಿಕೆ: ಇದರಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ, ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ: ಇದರಲ್ಲಿರುವ ಫೋಲೇಟ್ ಮತ್ತು ಮೆಗ್ನೀಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

Leave a Reply

Your email address will not be published. Required fields are marked *

error: Content is protected !!