ಉದಯವಾಹಿನಿ, ವಿಶ್ವದಾದ್ಯಂತ ಬಿಡುಗಡೆಯಾಗಿರುವ ದೇಶಭಕ್ತಿಯ ಚಿತ್ರ ಆಜಾದ್ ಭರತ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ, ಅಭಿನಯಿಸಿರುವ ರೂಪಾ ಅಯ್ಯರ್ ಅವರ ಗಂಭೀರ ಅಭಿನಯ, ವಾಸ್ತವಾಧಾರಿತ ಕಥಾವಸ್ತು ಮತ್ತು ಸಂಶೋಧನೆ ಆಧಾರಿತ ನಿರೂಪಣೆ ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದೆ. ಚಿತ್ರವು ನಾನ್-ಲಿನಿಯರ್ ಕಥನ ಶೈಲಿಯಲ್ಲಿ ಸಾಗುತ್ತಾ, ದೇಶಕ್ಕಾಗಿ ತನ್ನೆಲ್ಲವನ್ನೂ ತ್ಯಾಗ ಮಾಡಿದ ಅಪರಿಚಿತ ನಾಯಕಿ ನೀರಆರ್ಯ ಅವರ ಬಲಿದಾನವನ್ನು ಅತ್ಯಂತ ಸಂವೇದನಾಶೀಲವಾಗಿ ಚಿತ್ರಿಸುತ್ತದೆ.
ಈ ಗಂಭೀರ ವಿಷಯಕ್ಕೆ ಸೂಕ್ತವಾದ ಆತ್ಮ ಮತ್ತು ಭಾವನಾತ್ಮಕ ಆಳವನ್ನು ನೀಡಿರುವುದು ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಅವರ ಸಂಗೀತ. ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೌತಮ್ ಶ್ರೀವತ್ಸ ಅವರು ‘ಆಜಾದ್ ಭರತ್’ ಚಿತ್ರಕ್ಕೆ ನೀಡಿರುವ ಸಂಗೀತ ಈ ಚಿತ್ರದ ಪ್ರಮುಖ ಶಕ್ತಿ. ಜೀ ಮ್ಯೂಸಿಕ್ ಕಂಪನಿಯ ಮೂಲಕ ಬಿಡುಗಡೆಯಾದ ಹಾಡುಗಳು ದೇಶಭಕ್ತಿಯ ಭಾವವನ್ನು ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸುತ್ತವೆ. ಅವರ ಸಂಗೀತ ಸಂಯೋಜನೆ, ಅರೆಂಜ್ಮೆಂಟ್ ಮತ್ತು ಸೌಂಡಿಂಗ್ ಬಹಳ ತಾಜಾತನದಿಂದ ಕೂಡಿದ್ದು, ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ.
