ಉದಯವಾಹಿನಿ , ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾದ ಬಳಿಕ ಇದೀಗ ಪುರಾತನ ವಸ್ತುಗಳು ಪತ್ತೆಯಾಗಿದೆ.ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಸಪ್ಪ ಬಡಿಗೇರ ಅವರಿಗೆ ಹಲವು ಪುರಾತನ ಕಾಲದ ವಸ್ತುಗಳು ಸಿಕ್ಕಿವೆ. ಮುತ್ತು, ಹವಳ, ನೀಲಮಣಿ, ಸ್ಫಟಿಕ, ಬಿಳಿ ಹವಳ, ಕರಿಪುಕ್ಕಾ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದೆ. ಬಸಪ್ಪ ಬಡಿಗೇರ ಅವರು ಕಳೆದ 45 ವರ್ಷಗಳಿಂದ ಶೋಧ ಕಾರ್ಯ ಮಾಡುತ್ತಿದ್ದಾರೆ. ಈ ಹಿಂದೆಯೂ ಕೂಡ ಸಾಕಷ್ಟು ಪುರಾತನ ಕಾಲದ ವಸ್ತುಗಳು ಸಿಕ್ಕಿದ್ದವು. ಆಗ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು. ಕಳೆದ 2-3 ದಿನದ ಹಿಂದಷ್ಟೇ ಲಕ್ಕುಂಡಿ ಗ್ರಾಮದಲ್ಲಿಯೇ ಚಿನ್ನ ಚಿಕ್ಕಿತ್ತು. ಆಗ ಲಕ್ಕುಂಡಿಯಲ್ಲಿ ಅಪಾರ ಚಿನ್ನ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಅದರಂತೆ ಇದೀಗ ಮತ್ತೆ ಕೆಲ ಪುರಾತನ ವಸ್ತುಗಳು ಪತ್ತೆಯಾಗಿದೆ.
ಇದೀಗ ಲಕ್ಕುಂಡಿ ಭಾಗದ ಜನರಲ್ಲಿ ಈ ಪುರಾತನ ವಸ್ತುಗಳು ಮತ್ತಷ್ಟು ಕೂತುಹಲಕ್ಕೆ ಕಾರಣವಾಗಿದೆ.
