ಉದಯವಾಹಿನಿ, ಇರಾನ್​ನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಇರಾನ್​ನಲ್ಲಿರುವ ಅಮೆರಿಕ ಪ್ರಜೆಗಳಿಗೆ ತಕ್ಷಣಕ್ಕೆ ದೇಶವನ್ನು ತೊರೆಯುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಎಚ್ಚರಿಕೆ ನೀಡಿರುವ ಅಮೆರಿಕ ರಾಯಭಾರ ಕಚೇರಿ, ಇರಾನ್​ನಲ್ಲಿ ಸಾಗುತ್ತಿರುವ ಪ್ರತಿಭಟನೆ ಹಿಂಸಾತ್ಮಕವಾಗಿ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದ್ದು, ಬಂಧನ, ಗಾಯಗಳು ಮತ್ತು ದೈನಂದಿನ ಜೀವನಕ್ಕೆ ಅಡ್ಡಿಯುಂಟಾಗಲಿದೆ ಎಂದು ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನೊಂದಿಗೆ ರಾಜತಾಂತ್ರಿಕ ಮಾತುಕತೆ ಮುಂದುವರಿಸಿದ್ದು, ಈ ನಡುವೆ ಅಮೆರಿಕ ರಾಯಭಾರ ಕಚೇರಿಯಿಂದ ಈ ಎಚ್ಚರಿಕೆ ಹೊರ ಬಿದ್ದಿದೆ. ಇರಾನ್​ನಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳು ಹಿಂಸಾತ್ಮಕವಾಗಿ ಬದಲಾಗಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ.

ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆ ಭದ್ರತಾ ಕ್ರಮಗಳು, ರಸ್ತೆ ಮುಚ್ಚುವಿಕೆಗಳು, ಸಾರ್ವಜನಿಕ ಸಾರಿಗೆ ಅಡಚಣೆಗಳು ಮತ್ತು ಇಂಟರ್ನೆಟ್ ನಿರ್ಬಂಧಗಳು ಮುಂದುವರೆದಿವೆ. ಇರಾನ್ ಸರ್ಕಾರವು ಮೊಬೈಲ್, ಲ್ಯಾಂಡ್‌ಲೈನ್ ಮತ್ತು ದೇಶದಲ್ಲಿ ಇಂಟರ್​ನೆಟ್​ ನೆಟ್‌ವರ್ಕ್‌ಗಳ ಸೇವೆಯನ್ನು ನಿರ್ಬಂಧಿಸಿದೆ.

ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಉಂಟಾಗಿದ್ದು, ಇರಾನ್​ನಿಂದ ಅನೇಕ ವಿಮಾನಗಳು ಹಾರಾಟವನ್ನು ನಿಲ್ಲಿಸಿವೆ. ಶುಕ್ರವಾರದವರೆಗೆ ಅನೇಕ ಸೇವೆಗಳನ್ನು ರದ್ದು ಮಾಡಲಾಗಿದೆ. ಇರಾನ್​ನಲ್ಲಿ ಇಂಟರ್​ನೆಟ್​ ಸಂಪರ್ಕ ಕಡಿತಗೊಳ್ಳುವ ಹಿನ್ನಲೆ ಪರ್ಯಾಯ ಸಂವಹನ ವಿಧಾನ ಯೋಜಿಸುವಂತೆ ಹಾಗೇ ಸುರಕ್ಷತೆಗಾಗಿ ಇರಾನ್​ನಿಂದ ಭೂ ಮಾರ್ಗದ ಮೂಲಕ ಟರ್ಕಿ ಅಥವಾ ಅರ್ಮೇನಿಯಾಕ್ಕೆ ಹೋಗುವಂತೆ ಸೂಚನೆ ನೀಡಲಾಗಿದೆ.
ಈ ಕೂಡಲೇ ಇರಾನ್ ತೊರೆಯಿರಿ; ಈ ಕೂಡಲೇ ಇರಾನ್​ ತೊರೆಯಿರಿ. ಇರಾನ್‌ನಿಂದ ಹೊರಡುವಾಗ ಅಮೆರಿಕ ಸರ್ಕಾರದ ಸಹಾಯವನ್ನು ಅವಲಂಬಿಸದ ಯೋಜನೆ ರೂಪಿಸಿ. ಅಲ್ಲಿಂದ ಹೊರಡಲು ಸಾಧ್ಯವಾಗದಿದ್ದರೆ, ನಿಮ್ಮ ನಿವಾಸ ಅಥವಾ ಮತ್ತೊಂದು ಸುರಕ್ಷಿತ ಕಟ್ಟಡದೊಳಗೆ ಸ್ಥಳವನ್ನು ಹುಡುಕಿ. ಆಹಾರ, ನೀರು, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಿ ಎಂದು ಅಮೆರಿಕ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

error: Content is protected !!