ಉದಯವಾಹಿನಿ, ಎಲ್ಲರಿಗೂ ಏನಾನ್ನಾದರೂ ಸಾಧಿಸಬೇಕು ಎನ್ನುವ ಆಸೆ ಇದ್ದಿರುತ್ತದೆ. ಆದರೆ ಅವರಿಗೆ ಸರಿಯಾದ ಮಾರ್ಗ ಗೊತ್ತಿರಲ್ಲ. ಹಾಗಾಂತ ಕೈಕಟ್ಟಿ ಕುಳಿತರೇ ಏನನ್ನು ಸಾಧನೆ ಮಾಡೋಕೆ ಆಗಲ್ಲ. ದೃಢಸಂಕಲ್ಪ ಒಂದು ಇದ್ರೆ ಏನಾನ್ನಾದರೂ ಮಾಡಬಹುದು. ಅದರಂತೆ ಇಲ್ಲೊಬ್ಬ ಯುವಕ ಕೇವಲ 25 ವರ್ಷಗಳಿಗೆ ಬರೀ ಯೂಟ್ಯೂಬ್‌ನಿಂದ ಸಾಕಷ್ಟು ಹಣ ಗಳಿಸಿ ದೊಡ್ಡ ಕಂಪನಿ ಆರಂಭಿಸಿದ್ದಾನೆ. ಕೆನಾಡದ ಟುವಾನ್‌ ಲೆ ಎನ್ನುವ ಯುವಕ, ಯಾವುದೇ ಕಾಲೇಜಿಗೆ ಹೋಗಿ ಪದವಿ ಪಡೆದವರಲ್ಲ. ಯಾವುದೇ ಕೋರ್ಸ್‌ ಕೂಡ ಮಾಡಿಲ್ಲ. ಆದರೆ ಇವರಲ್ಲಿ ಕಲಿಯಬೇಕು ಎನ್ನುವುದು ಛಲ ಇತ್ತು. ಟುವಾನ್‌ ಲೆ ಅವರಿಗೆ ಮೊದಲು ಯೂಟ್ಯೂಬ್‌ ಹೇಗೆ ಎನ್ನುವುದೇ ಗೊತ್ತಿರಲಿಲ್ಲ. ವಿಡಿಯೋ ಅಪ್‌ಲೋಡ್‌ ಮಾಡುವುದಂತೂ ತಿಳಿದಿರಲಿಲ್ಲ. ಯಾವುದೇ ಬ್ಯುಸಿನೆಸ್‌ ಬ್ಯಾಗ್ರೌಂಡ್‌ ಇರಲಿಲ್ಲ. ಆದ್ರೆ ಸ್ಥಳೀಯವಾಗಿ ವಿಡಿಯೋಗಳನ್ನು ಮಾಡೋದನ್ನ ಮೊದಲು ಕಲಿತನು.
ವಿಡಿಯೋ ಮಾಡುವುದು ಕಲಿತು ಬಳಿಕ ಅದನ್ನು ಹಣ ಪಡೆದು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡುತ್ತಿದ್ದನು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಹಣ ಪಡೆದು, ಮೊದಲ ವರ್ಷದಲ್ಲಿ 7,66,505 ರೂಪಾಯಿ ಸಂಪಾದಿಸಿದ್ದನು. ಎರಡನೇ ವರ್ಷದಲ್ಲಿ ದೊಡ್ಡ ಮಟ್ಟದಲ್ಲೇ ಹಣ ಪಡೆದಿದ್ದ. ಇದೇ ಸಮಯದಲ್ಲಿ ಕೋವಿಡ್‌ ಬಂದಿದ್ದರಿಂದ ಹಲವು ಕ್ಲೈಂಟ್‌ಗಳನ್ನು ಕೆಳದುಕೊಂಡ ಟುವಾನ್ ಲೆ, ಬ್ಯುಸಿನೆಸ್‌ ಸ್ವಲ್ಪ ಲಾಸ್‌ ಆದರೂ 15,68,861 ರೂಪಾಯಿ ಗಳಿಸಿದ್ದನು.

ಎಲ್ಲ ಕಡೆಯೂ ಕೋವಿಡ್‌ ತಾಂಡವ ಶುರುವಾಗಿದ್ದರಿಂದ ಟುವಾನ್‌ ಲೆ ಬ್ಯುಸಿನೆಸ್‌ಗೆ ಭಾರೀ ಹೊಡೆತ ಬಿದ್ದಿತು. ಅಂಗೂ ಹಿಂಗೂ ಮಾಡಿ 11,14,778 ರೂ. ಗಳಿಸಿದರು. ಹೇಗಾದರೂ ಮಾಡಿ ಇದನ್ನು ಬಿಡಬಾರದು ಎಂದು ಮೊದಲು ವಿಡಿಯೋ ಮಾಡಿಕೊಟ್ಟಿದ್ದ ಲೋಕಲ್‌ ಜನರಿಗೆ 1000 ಇ-ಮೇಲ್‌ಗಳನ್ನು ಕಳುಹಿಸಿದರು. ಮತ್ತೆ ನಾಲ್ಕನೇ ವರ್ಷದಲ್ಲಿ ದೊಡ್ಡ ಮಟ್ಟದಲ್ಲೇ ಹಣ ಗಳಿಕೆ ಮಾಡಿದರು. ನಾಲ್ಕನೇ ವರ್ಷದಲ್ಲಿ 3,15,94,236 ರೂ.ಗಳನ್ನು ಜೇಬಿಗಿಳಿಸಿದರು. ಈವರೆಗೆ ಸಂಪಾದನೆ ಮಾಡಿದ ಹಣದಿಂದ ಐದನೇ ವರ್ಷದಲ್ಲಿ ಕಂಪನಿ ಆರಂಭಿಸಿ, ಇಬ್ಬರು ಉದ್ಯೋಗಿಗಳನ್ನು ನೇಮಿಸಿಕೊಂಡನು. ಇಬ್ಬರಿದ್ದ ಉದ್ಯೋಗಿಗಳು ಈಗ 15 ಜನರು ಆಗಿದ್ದಾರೆ. ಈಗ ವರ್ಷಕ್ಕೆ 12 ಕೋಟಿ ರೂಪಾಯಿಗಳು ಅಂದರೆ 12,63,73,240 ರೂಪಾಯಿ ವ್ಯವಹಾರ ಮಾಡುತ್ತಿರುವುದಾಗಿ ಕೆನಾಡದ ಟುವಾನ್‌ ಲೆ ಹೇಳಿದ್ದಾನೆ.

Leave a Reply

Your email address will not be published. Required fields are marked *

error: Content is protected !!