ಉದಯವಾಹಿನಿ, ಜಮ್ದಾನಿ ಸೀರೆ – ಬಂಗಾಳ : ಇನ್ನೂ ಈ ಸೀರೆ ಮೊಘಲ್ ಯುಗದ ನೆನಪನ್ನ ಹೊಂದಿದೆ.. ಈ ಸೀರೆಯೂ ಜಮ್ದಾನಿ ಸೀರೆಗಳು ರೇಷ್ಮೆ ಮತ್ತು ಚಿನ್ನದ ದಾರಗಳಿಂದ ನೇಯಲ್ಪಡುತ್ತವೆ. ಬೆಲೆ 80,000 ರೂ.ಗಳಿಂದ 2 ಲಕ್ಷ ರೂ.ಗಳವರೆಗೆ ಇರುತ್ತದೆ. ಇವುಗಳ ವಿನ್ಯಾಸದಲ್ಲಿ ಸೂಕ್ಷ್ಮ ಹೂವಿನ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಸೌಂದರ್ಯ ಹೊಂದಿರುತ್ತದೆ.
ಮೈಸೂರು ರೇಷ್ಮೆ ಸೀರೆ ಕರ್ನಾಟಕ: ನಮ್ಮ ಕರ್ನಾಟಕದ ಅಚ್ಚಮೆಚ್ಚಿನ ಮೈಸೂರು ಸಿಲ್ಕ್ ಸೀರೆಗಳು ಎಲ್ಲರಿಗೂ ಗೋತ್ತೆ ಇರುತ್ತದೆ.. ರೇಷ್ಮೆ ಸೀರೆಗಳು ಮೈಸೂರು ಚಿನ್ನದ ಬಾರ್ಡರ್‌ಗಳೊಂದಿಗೆ ಶುದ್ಧ ರೇಷ್ಮೆಯಿಂದ ತಯಾರಿಸಲಾಗುತ್ತದೆ. ಇವುಗಳ ಬೆಲೆ 1 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳವರೆಗೆ ಇರುತ್ತದೆ. ಒಡೆಯರ್ ವಂಶವು ಈ ಸೀರೆಗಳನ್ನು ಪ್ರಸಿದ್ಧಗೊಳಿಸಿತು. ಮದುವೆ ಮತ್ತು ಹಬ್ಬಗಳಲ್ಲಿ ಮೈಸೂರು ಸೀರೆಗಳು ವಿಶೇಷ ಸ್ಥಾನ ಪಡೆದಿವೆ.
ಪಟೋಲಾ ಸೀರೆ ಗುಜರಾತ್: ಈ ಸಿರೆಯೂ ಗುಜರಾತ್‌ನ ಪಟಾನ್ ಪ್ರದೇಶದ ಪಟೋಲಾ ಸೀರೆಯೆಂದೆ ಪ್ರಸಿದ್ಧಿ ಮಾತ್ರವಲ್ಲದೇ ಡಬಲ್ ಇಕಾತ್ ತಂತ್ರದಲ್ಲಿ ನೇಯಲ್ಪಡುತ್ತದೆ.. ಬೆಲೆ 2 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗಳವರೆಗೆ ಇರುತ್ತದೆ. ಪೈಥಾನಿ ರೇಷ್ಮೆ ಸೀರೆ ಮಹಾರಾಷ್ಟ್ರ : ಈ ಸೀರೆಯೂ ಶಾತವಾಹನ ಕಾಲದಿಂದಲೂ ಪ್ರಸಿದ್ಧವಾಗಿದೆ..ಈಗಲೂ ಈ ಸೀರೆ ಬಹು ಬೇಡಿಕೆ ಇದೆ. ಪೈಥಾನಿ ಸೀರೆಗಳು ಶುದ್ಧ ರೇಷ್ಮೆ ಮತ್ತು ಜರಿಯಿಂದ ತಯಾರಾಗುತ್ತವೆ. ಸೀರೆಯ ಬಾರ್ಡರ್ ನವಿಲುಗಳು ಮತ್ತು ಕಮಲದ ಹೂವುಗಳಿರುತ್ತದೆ.. ಇದರ ಬೆಲೆ ಬೆಲೆ 3 ಲಕ್ಷ ರೂ.ಗಳಿಂದ 8 ಲಕ್ಷ ರೂ.ಗಳವರೆಗೆ ಇರುತ್ತದೆ.
