ಉದಯವಾಹಿನಿ, ಚಿಂಚೋಳಿ: ನಗರದ ಪುರಸಭೆ ವತಿಯಿಂದ ಚುನಾಯಿತ ಜನಪ್ರತಿನಿಧಿಗಳು,ಅಧಿಕಾರಿಗಳು,ಸರ್ವ ಸಿಬ್ಬಂದಿಗಳು,ಪೌರಕಾರ್ಮಿಕರು,ರಾಜಕೀಯ ಮುಖಂಡರು ಸೇರಿಕೊಂಡು ವಾರಕ್ಕೆ ಎರಡು ಬಾರಿಯಂತೆ ನಗರದ ಪ್ರಮುಖ ಬಿದಿಗಳು ಸೇರಿದಂತೆ ವಿವಿಧ ವಾರ್ಡಗಳಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ತಿಳಿಸಿದ್ದಾರೆ.
ರವಿವಾರ ನಗರದ ಚಂದಾಪೂರದ ಮಹಾತ್ಮ ಗಾಂಧಿ ವೃತ್ತದಿಂದ ಕನಕದಾಸ ವೃತ್ತದವರೆಗೆ ಸ್ವಚ್ಚತೆ ಕಾರ್ಯ ಮಾಡಲಾಯಿತು.
ಬರುವ ದಿವಸಗಳಲ್ಲಿ ಹಂತ-ಹಂತವಾಗಿ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ
ಪುರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಸೈಯದ್ ಶಬ್ಬೀರ,ಜೆಇ ದೇವಿಂದ್ರಪ್ಪಾ,ಸಂಗಮೇಶ,ಗುಂಡಪ್ಪಾ,ವಿನೋಧ ಕಾಂಬ್ಳೆ,ಶರಣಪ್ಪ ಅನೇಕ ಪೌರಕಾರ್ಮಿಕರು ಇದ್ದರು.
